ಬೆಂಗಳೂರು: ಬೆಂಗಳೂರಿನ ಯುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭರತನಾಟ್ಯ ಹಾಗೂ ಸಂಗೀತ ಕಲಾವಿದೆ ಶಿವಶ್ರೀ ಸ್ಕಂದಪ್ರಸಾದ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕನಕಪುರ ರಸ್ತೆಯ ರೆಸಾರ್ಟ್ ನಲ್ಲಿ ಮದುವೆ ನಡೆದಿದ್ದು, ಸಂಸದ ತೇಜಸ್ವಿ ಸೂರ್ಯ, ಚೆನ್ನೈ ಮೂಲದ ಗಾಯಕಿ ಶಿವಶ್ರೀ ಸ್ಕಂದಪ್ರಸಾದ ಅವರು ಗುರುವಾರ ಬೆಳಿಗ್ಗೆ ಶುಭ ಮೂಹರ್ತದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹ ಸಮಾರಂಭದಲ್ಲಿ ಎರಡು ಕಡೆಯ ಕುಟುಂಬಸ್ಥರು, ಆಪ್ತರು, ಕೆಲವೇ ಕೆಲವು ಸ್ನೇಹಿತರು ಪಾಲ್ಗೊಂಡಿದ್ದರು.ವಿವಾಹ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕೇಂದ್ರ ಸಚಿವರಾದ ಅರ್ಜುನ ಮೇಘವಾಲ್, ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ವಿ.ಸೋಮಣ್ಣ, . ಮಾಜಿ ಸಂಸದ ಪ್ರತಾಪ ಸಿಂಹ, ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಬಿಜೆಪಿ ಶಾಸಕರು, ಸಂಸದರು, ಸಂಘ ಪರಿವಾರದ ಪ್ರಮುಖರು ನವಜೋಡಿಗೆ ಶುಭ ಹಾರೈಸಿದರು.
ಶಿವಶ್ರೀ ಸ್ಕಂದ ಪ್ರಸಾದ ಅವರು ಜೈವಿಕ ಎಂಜಿನಿಯರಿಂಗನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಚೆನ್ನೈ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂ.ಎ ಮತ್ತು ಚೆನ್ನೈ ಸಂಸ್ಕೃತ ಕಾಲೇಜಿನಿಂದ ಸಂಸ್ಕೃತ ಎಂ.ಎ ಪದವಿ ಪಡೆದಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಹಾಡುಗಾರರೂ ಹೌದು. ಇವರು ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಗೀತೆಗಳು ಹಾಗೂ ಭಜನೆಗಳನ್ನು ಹಾಡಿದ್ದಾರೆ. ಕಳೆದ ವರ್ಷ ಜನವರಿಯಲ್ಲಿ ಅಯೋಧ್ಯೆಯಲ್ಲಿ ನಡೆದ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ಶಿವಶ್ರೀ ಅವರ ಸಂಗೀತವನ್ನು ವಿಶೇಷವಾಗಿ ಭಗವಾನ್ ರಾಮನಿಗೆ ಅರ್ಪಿಸಿದ ಕನ್ನಡ ಭಜನೆಯನ್ನು ಶ್ಲಾಘಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ