ಮಾನ್ಯ ವೀಸಾ ಇದ್ದರೂ ಪಾಕಿಸ್ತಾನದ ಹಿರಿಯ ರಾಜತಾಂತ್ರಿಕನ ಗಡೀಪಾರು ಮಾಡಿದ ಅಮೆರಿಕ

ಅಮೆರಿಕದಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಮುಜುಗರವಾಗಿದ್ದು, ಮಾನ್ಯವಾದ ವೀಸಾ ಮತ್ತು ಅಗತ್ಯ ದಾಖಲೆಗಳನ್ನು ಹೊಂದಿದ್ದರೂ ಪಾಕಿಸ್ತಾನದ ಹಿರಿಯ ರಾಜತಾಂತ್ರಿಕರಿಗೆ ಅಮೆರಿಕಕ್ಕೆ ಪ್ರವೇಶ ನಿರಾಕರಿಸಲಾಯಿತು ಎಂದು ಪಾಕಿಸ್ತಾನದ ಮಾಧ್ಯಮ ಔಟ್ಲೆಟ್ ದಿ ನ್ಯೂಸ್ ವರದಿ ಮಾಡಿದೆ.
ತುರ್ಕಮೆನಿಸ್ತಾನಕ್ಕೆ ಪಾಕಿಸ್ತಾನದ ರಾಯಭಾರಿಯಾಗಿದ್ದ ಕೆ.ಕೆ. ವ್ಯಾಗನ್ ಅವರು ಲಾಸ್ ಏಂಜಲೀಸ್‌ಗೆ ಆಗಮಿಸಿದ ನಂತರ ಅಮೆರಿಕ ವಲಸೆ ಇಲಾಖೆ ಅವರನ್ನು ತಡೆದಿದೆ ಮತ್ತು ಅಮೆರಿಕದಿಂದ ಗಡೀಪಾರು ಮಾಡಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಹೆಸರು ಹೇಳಲಿಚ್ಛಿಸದ ಅಧಿಕಾರಿಯನ್ನು ಉಲ್ಲೇಖಿಸಿ ಮಾಧ್ಯಮ ಔಟ್ಲೆಟ್ ದಿ ನ್ಯೂಸ್ ವರದಿ ಮಾಡಿದೆ.

ಅನುಭವಿ ರಾಜತಾಂತ್ರಿಕರಾದ ಕೆ.ಕೆ. ವ್ಯಾಗನ್ ಅವರು ಲಾಸ್ ಏಂಜಲೀಸ್‌ಗೆ ವೈಯಕ್ತಿಕ ಪ್ರವಾಸದಲ್ಲಿದ್ದರು. ಅವರು ಮಾನ್ಯವಾದ ಅಮೆರಿಕದ ವೀಸಾ ಮತ್ತು ಇತರ ಪ್ರಯಾಣ ದಾಖಲೆಗಳನ್ನು ಹೊಂದಿದ್ದರು ಎಂದು ವರದಿ ಹೇಳಿದೆ. ಕೆ.ಕೆ.ವ್ಯಾಗನ್‌ ಅವರು ಲಾಸ್ ಏಂಜಲೀಸ್‌ಗೆ ಆಗಮಿಸಿದ ನಂತರ ವಲಸೆ ಅಧಿಕಾರಿಗಳು ವ್ಯಾಗನ್ ಅವರನ್ನು ತಡೆದರು. ಅಮೆರಿಕದ ಅಧಿಕಾರಿಗಳು ವ್ಯಾಗನ್ ಅವರ “ವಿವಾದಾತ್ಮಕ ವೀಸಾ ಉಲ್ಲೇಖಗಳನ್ನು” ಫ್ಲ್ಯಾಗ್ ಮಾಡಿದ್ದಾರೆ, ಆದರೂ ಯಾವುದೇ ಸ್ಪಷ್ಟತೆ ಇಲ್ಲ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿದ ದಿ ನ್ಯೂಸ್‌ ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಇರಾನಿನ 400 ಕೆಜಿ ಯುರೇನಿಯಂ ಕಾಣೆಯಾದ ಬಗ್ಗೆ ಅಮೆರಿಕಕ್ಕೆ ಭಯ ? ಯಾಕಂದ್ರೆ ಇದ್ರಿಂದ 10 ಪರಮಾಣು ಬಾಂಬ್‌ ತಯಾರಿಸಬಹುದಂತೆ...

ವರದಿಯ ಪ್ರಕಾರ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಮತ್ತು ಇತರ ಉನ್ನತ ಅಧಿಕಾರಿಗಳಿಗೆ ಈ ವಿಷಯದ ಬಗ್ಗೆ ವಿವರಿಸಲಾಗಿದೆ. ಘಟನೆಯ ಬಗ್ಗೆ ವಿವರಣೆ ನೀಡಲು ವ್ಯಾಗನ್ ಅವರನ್ನು ಇಸ್ಲಾಮಾಬಾದ್‌ಗೆ ಕರೆಸುವ ಸಾಧ್ಯತೆಯಿದೆ.
ಜಿಯೋ ಟಿವಿ, ಮತ್ತೊಂದು ಪಾಕಿಸ್ತಾನಿ ಔಟ್ಲೆಟ್, ವ್ಯಾಗನ್ ಅವರು ಲಾಸ್ ಏಂಜಲೀಸ್‌ಗೆ ಖಾಸಗಿ ಪ್ರವಾಸದಲ್ಲಿದ್ದರು ಎಂದು ತಮ್ಮ ವಿದೇಶಾಂಗ ಕಚೇರಿ ದೃಢಪಡಿಸಿದೆ ಮತ್ತು ಈ ವಿಷಯವನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೀಘ್ರದಲ್ಲೇ ಪಾಕಿಸ್ತಾನಿಗಳಿಗೆ ಅಮೆರಿಕ ಪ್ರವೇಶಿಸಲು ಪ ನಿಷೇಧವನ್ನು ಹೇರಲಿದ್ದಾರೆ ಎಂಬ ವರದಿಗಳ ನಡುವೆ
ಇದು ಬಂದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement