ಚಂಡೀಗಢ: ಹರಿಯಾಣದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಆಡಳಿತಾರೂಢ ಬಿಜೆಪಿ ಬುಧವಾರ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡಿದೆ. ಬಿಜೆಪಿಯು ರೋಹ್ಟಕ್, ಸಿರ್ಸಾ ಮತ್ತು ಕರ್ನಾಲ್‌ನಲ್ಲಿ ದೊಡ್ಡ ಗೆಲುವುಗಳನ್ನು ದಾಖಲಿಸಿದೆ, ಅಲ್ಲಿ ಅಭ್ಯರ್ಥಿಗಳು ತಮ್ಮ ಕಾಂಗ್ರೆಸ್ ವಿರೋಧಿಗಳ ವಿರುದ್ಧ ಭಾರಿ ಅಂತರದಿಂದ ವಿಜಯಶಾಲಿಯಾಗಿದ್ದಾರೆ.
ಬಿಜೆಪಿಯು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 10 ಮೇಯರ್ ಸ್ಥಾನಗಳಲ್ಲಿ 9 ಸ್ಥಾನಗಳನ್ನು ಗೆದ್ದಿದೆ. ಗುರುಗ್ರಾಮ, ಹಿಸಾರ್, ಕರ್ನಾಲ್, ರೋಹ್ಟಕ್, ಫರಿದಾಬಾದ್, ಯಮುನಾ ನಗರ, ಪಾಣಿಪತ್, ಅಂಬಾಲಾ ಮತ್ತು ಸೋನಿಪತ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಹರಿಯಾಣದ ನಗರಗಳಲ್ಲಿ ಪಕ್ಷವು ಗಮನಾರ್ಹ ಪ್ರಾಬಲ್ಯವನ್ನು ತೋರಿದೆ. ಮಾನೇಸರ್ ದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಸೋಲನುಭವಿಸಿದ್ದಾರೆ. ಅಲ್ಲಿ ಸ್ವತಂತ್ರ ಅಭ್ಯರ್ಥಿ ಡಾ ಇಂದರಜೀತ ಯಾದವ್ ಅವರು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದರು.
ಮಾನೇಸರ್, ಗುರುಗ್ರಾಮ, ಫರಿದಾಬಾದ್, ಹಿಸಾರ್, ರೋಹ್ಟಕ್, ಕರ್ನಾಲ್, ಯಮುನಾನಗರ, ಪಾಣಿಪತ್, ಅಂಬಾಲಾ ಮತ್ತು ಸೋನಿಪತ್ ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ಮೇಯರ್ ಮತ್ತು ವಾರ್ಡ್ ಸ್ಥಾನಗಳಿಗೆ ಮಾರ್ಚ್ 2 ರಂದು ಚುನಾವಣೆ ನಡೆದರೆ, ಪಾಣಿಪತ್‌ನ ಮೇಯರ್ ಚುನಾವಣೆ ಮಾರ್ಚ್ 9 ರಂದು ಪ್ರತ್ಯೇಕವಾಗಿ ನಡೆದಿತ್ತು.
ಮೇಯರ್ ವಿಜೇತರ ಸಂಪೂರ್ಣ ಪಟ್ಟಿ
ಗುರುಗ್ರಾಮ: ಮೇಯರ್ ಚುನಾವಣೆಯಲ್ಲಿ ರಾಜ್ ರಾಣಿ (ಬಿಜೆಪಿ) 270,781 ಮತಗಳನ್ನು ಪಡೆಯುವ ಮೂಲಕ ಮೇಯರ್ ಸ್ಥಾನವನ್ನು ಭರ್ಜರಿ ಅಂತರದಿಂದ ಗೆದ್ದಿದ್ದಾರೆ. ರಾಣಿ ಅವರು ಕಾಂಗ್ರೆಸ್ ಅಭ್ಯರ್ಥಿ ಸೀಮಾ ಪಹುಜಾ ಅವರನ್ನು 1,79,485 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಮನೇಸರ್: ಮಾನೇಸರ್ ಮೇಯರ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಡಾ.ಇಂದರಜೀತ ಯಾದವ್ ಗೆಲುವು ಸಾಧಿಸಿದ್ದಾರೆ. ಯಾದವ್ ಅವರು ಬಿಜೆಪಿ ಅಭ್ಯರ್ಥಿ ಸುಂದರ ಲಾಲ ಅವರನ್ನು 2,235 ಮತಗಳಿಂದ ಸೋಲಿಸಿ ಮನೇಸರ್‌ನ ಹೊಸ ಮೇಯರ್ ಆದರು. ಅವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಫರಿದಾಬಾದ್: ಪ್ರವೀಣ ಜೋಶಿ (ಬಿಜೆಪಿ) 4,16,927 ಮತಗಳನ್ನು ಪಡೆಯುವ ಮೂಲಕ ಕ್ಷೇತ್ರವನ್ನು ಗೆದ್ದಿದ್ದಾರೆ.
ಹಿಸಾರ್: ಪರ್ವೀನ್ ಪೊಪ್ಲಿ (ಬಿಜೆಪಿ) 64,456 ಮತಗಳ ಅಂತರದಿಂದ ಗೆದ್ದಿದ್ದಾರೆ.
ರೋಹ್ಟಕ್: ರಾಮ್ ಅವತಾರ್ ವಾಲ್ಮೀಕಿ (ಬಿಜೆಪಿ) 45,198 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.
ಕರ್ನಾಲ್: ರೇಣುಬಾಲಾ (ಬಿಜೆಪಿ) 83,630 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಗುಪ್ತಾ ಅವರು 25,359 ಮತಗಳನ್ನು ಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಮನೋಜ್ ವಾಧ್ವಾ ಅವರನ್ನು ಸೋಲಿಸಿದರು.
ಯಮುನಾನಗರ: ಸುಮನ್ (ಬಿಜೆಪಿ) ಗೆಲುವು ಸಾಧಿಸಿದ್ದಾರೆ.
ಅಂಬಾಲಾ: ಮೇಯರ್ ಉಪಚುನಾವಣೆಯಲ್ಲಿ ಶೈಲ್ಜಾ ಸಚ್‌ದೇವ (ಬಿಜೆಪಿ) ಗೆಲುವು ಸಾಧಿಸಿದ್ದಾರೆ.
ಸೋನಿಪತ್: ರಾಜೀವ್ ಜೈನ್ (ಬಿಜೆಪಿ) 57,858 ಮತಗಳನ್ನು ಪಡೆಯುವ ಮೇಯರ್ ಸ್ಥಾನ ಗೆದ್ದಿದ್ದಾರೆ.
ಪಾಣಿಪತ್: ಕೋನಾಲ್ ಸೈನಿ (ಬಿಜೆಪಿ) 162,075 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ