ಚಿನ್ನದ ಕಳ್ಳಸಾಗಣೆ ಹಗರಣ | ‘ಯೂ ಟ್ಯೂಬ್‌ ನೋಡಿ ಚಿನ್ನ ಅಡಗಿಸಿಟ್ಟುಕೊಳ್ಳುವುದು ಕಲಿತೆ ಎಂದು ಬಾಯ್ಬಿಟ್ಟ ನಟಿ ರನ್ಯಾ ರಾವ್‌ : ವರದಿ

ಬೆಂಗಳೂರು: ₹ 12.56 ಕೋಟಿ ಮೌಲ್ಯದ 14.2 ಕೆಜಿ ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್, ಚಿನ್ನ ಕಳ್ಳಸಾಗಣೆಯಲ್ಲಿ ಇದೇ ತನ್ನ ಮೊದಲ ಪ್ರಯತ್ನ ಎಂದು ಹೇಳಿಕೊಂಡಿದ್ದಾಳೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನದ ಬಿಸ್ಕೆಟ್‌ಗಳನ್ನು ಬ್ಯಾಂಡೇಜ್‌ ಒಳಗೆ ಅಡಗಿಸಿಟ್ಟುಕೊಂಡು ಬಂದಿಳಿದ ಆಕೆಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ವಶಕ್ಕೆ ತೆಗೆದುಕೊಂಡಿದೆ.
ಕರ್ನಾಟಕ ಡಿಜಿಪಿ ಕೆ ರಾಮಚಂದ್ರ ರಾವ್ ಅವರ ಮಲಮಗಳಾಗಿರುವ ರನ್ಯಾ ರಾವ್, ದುಬೈನಿಂದ ಚಿನ್ನವನ್ನು ಸಂಗ್ರಹಿಸಿ ಬೆಂಗಳೂರಿಗೆ ತಲುಪಿಸುವಂತೆ ಅಪರಿಚಿತ ಕರೆದಾರರು ತನಗೆ ಸೂಚಿಸಿದ್ದಾರೆ ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾಳೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ವರದಿ ಪ್ರಕಾರ, ಪ್ರವಾಸಕ್ಕೆ ಎರಡು ವಾರಗಳ ಮೊದಲು ವಿದೇಶಿ ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸಿದ್ದೆ ಮತ್ತು ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಚಿನ್ನವನ್ನು ಪಡೆದುಕೊಳ್ಳಲು ಸೂಚಿಸಲಾಗಿತ್ತು ಎಂದು ತಿಳಿಸಿದ್ದಾಳೆ.

ಇಂಡಿಯಾ ಟುಡೇ ವರದಿ ಪ್ರಕಾರ, ವಿಚಾರಣೆಯ ಸಮಯದಲ್ಲಿ ರನ್ಯಾ ರಾವ್ ತನ್ನ ಒಳಗೊಳ್ಳುವಿಕೆಯ ಬಗ್ಗೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದಾಳೆ. ಆಕೆ ಆರಂಭದಲ್ಲಿ ಯಾವುದೇ ಕಳ್ಳಸಾಗಣೆ ಮಾಡಿದ ಅನುಭವ ಇತ್ತು ಎಂಬುದನ್ನು ನಿರಾಕರಿಸಿದಳು. ಆದರೆ ನಂತರ ತಾನು ಯೂಟ್ಯೂಬ್ ವೀಡಿಯೊ ನೋಡಿ ಚಿನ್ನವನ್ನು ಹೇಗೆ ಅಡಗಿಸಿಟ್ಟುಕೊಂಡು ಸಾಗಾಟ ಮಾಡುವುದು ಎಂಬುದನ್ನು ಕಲಿತೆ ಎಂದು ಒಪ್ಪಿಕೊಂಡಿದ್ದಾಳೆ. ತಾನು ವಿಮಾನ ನಿಲ್ದಾಣದಲ್ಲಿ ಕ್ರೇಪ್ ಬ್ಯಾಂಡೇಜ್ ಮತ್ತು ಕತ್ತರಿಗಳನ್ನು ಖರೀದಿಸಿದ್ದೆ ಮತ್ತು ತಾನು ಪ್ರಯಾಣಿಸುವ ವಿಮಾನ ಹಾರಾಟದ ಮೊದಲು ವಿಶ್ರಾಂತಿ ಕೊಠಡಿಯೊಳಗೆ ಚಿನ್ನವನ್ನು ತನ್ನ ದೇಹಕ್ಕೆ ಬ್ಯಾಂಡೇಜ್‌ ಹಾಕಿ ಅದರ ಒಳಗೆ ಅಡಗಿಸಿಟ್ಟುಕೊಂಡಿದ್ದೆ ಎಂದು ತಿಳಿಸಿದ್ದಾಳೆ. ತನ್ನ ಟಿಕೆಟ್ ಕಾಯ್ದಿರಿಸಲು ಜತಿನ್ ವಿಜಯಕುಮಾರ ಅವರ ಕ್ರೆಡಿಟ್ ಕಾರ್ಡ್ ಬಳಸಿದ್ದೇನೆ ಎಂದು ಬಹಿರಂಗಪಡಿಸಿದ್ದಾಳೆ. ಆಕೆಯ ಪದೇ ಪದೇ ವಿದೇಶ ಪ್ರವಾಸಗಳನ್ನು ಮಾಡಿದ ಬಗ್ಗೆ ಕೇಳಿದಾಗ, ತಾನು ಫೋಟೋಗ್ರಫಿ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿ ಪ್ರವಾಸ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾಳೆ.
“ಚಿನ್ನವು ಎರಡು ಪ್ಲಾಸ್ಟಿಕ್ ಹೊದಿಕೆಯ ಪ್ಯಾಕೆಟ್‌ಗಳಲ್ಲಿತ್ತು. ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ನನ್ನ ದೇಹಕ್ಕೆ ಚಿನ್ನದ ಕಡ್ಡಿಗಳನ್ನು ಅಂಟಿಸಿಕೊಂಡೆ. ನಾನು ಚಿನ್ನವನ್ನು ನನ್ನ ಜೀನ್ಸ್ ಮತ್ತು ಶೂಗಳಲ್ಲಿ ಬಚ್ಚಿಟ್ಟಿದ್ದೆ. ಯೂಟ್ಯೂಬ್ ವೀಡಿಯೋಗಳಿಂದ ಇದನ್ನು ಹೇಗೆ ಮಾಡಬೇಕೆಂದು ನಾನು ಕಲಿತಿದ್ದೆ ಎಂದು ಆಕೆ ಅಧಿಕಾರಿಗಳಿಗೆ ತಿಳಿಸಿದ್ದಾಳೆ.

ಪ್ರಮುಖ ಸುದ್ದಿ :-   48 ನಾಯಕರ ಹನಿಟ್ರ್ಯಾಪ್ ಸಿಡಿ ಇದೆ, ನನ್ನ ಮೇಲೂ ಯತ್ನ; ಸಚಿವ ಕೆ.ಎನ್. ರಾಜಣ್ಣ ಸ್ಫೋಟಕ ಮಾಹಿತಿ

ಆದಾಗ್ಯೂ, ಕರೆ ಮಾಡಿದವರು ಯಾರು ಎಂಬುದು ನನಗೆ ಗೊತ್ತಿಲ್ಲ. ಕರೆ ಮಾಡಿದಾತ ಆಫ್ರಿಕನ್-ಅಮೇರಿಕನ್ ಉಚ್ಚಾರಣೆಯನ್ನು ಹೊಂದಿದ್ದ, “ಭದ್ರತಾ ತಪಾಸಣೆಯ ನಂತರ ವ್ಯಕ್ತಿ ಚಿನ್ನದ ತುಂಡುಗಳನ್ನು ಹಸ್ತಾಂತರಿಸಿದ, ಚಿನ್ನದ ತುಂಡುಗಳನ್ನು ನೀಡಿದ ನಂತರ ಆತ ತಕ್ಷಣವೇ ಹೊರಟುಹೋದ. “ನಾನು ಅವನನ್ನು ಮತ್ತೆಂದೂ ಭೇಟಿಯಾಗಲಿಲ್ಲ ಅಥವಾ ನೋಡಲಿಲ್ಲ. ಆ ವ್ಯಕ್ತಿ ಸುಮಾರು 6 ಅಡಿ ಎತ್ತರ ಮತ್ತು ತೆಳ್ಳಗಿನ ಚರ್ಮವನ್ನು ಹೊಂದಿದ್ದ ಎಂದು ಅವಳು ಕಂದಾಯ ಗುಪ್ತಚರ ಅಧಿಕಾರಿಗಳಿಗೆ ತಿಳಿಸಿದ್ದಾಳೆ.
ಬೆಂಗಳೂರಿನಲ್ಲಿ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಯಾರಿಂದ ಪಡೆಯಬೇಕು ಎಂದು ಕೇಳಿದಾಗ, “ಚಿನ್ನದ ತುಂಡುಗಳನ್ನು ಅಪರಿಚಿತ ವ್ಯಕ್ತಿಗೆ ತಲುಪಿಸಲು ನನಗೆ ಸೂಚಿಸಲಾಗಿತ್ತು. ವಿಮಾನ ನಿಲ್ದಾಣದ ಟೋಲ್ ಗೇಟ್ ನಂತರ ಸರ್ವಿಸ್ ರೋಡ್‌ಗೆ ಹೋಗಲು ಸೂಚಿಸಲಾಗಿತ್ತು. ಮತ್ತು “ಸಿಗ್ನಲ್ ಬಳಿ ಆಟೋರಿಕ್ಷಾದಲ್ಲಿ ಚಿನ್ನವನ್ನು ಹಾಕಬೇಕಾಗಿತ್ತು” ಆದರೆ “ಆಟೋರಿಕ್ಷಾದ ಸಂಖ್ಯೆಯನ್ನು ನೀಡಿರಲಿಲ್ಲ” ಎಂದು ತಿಳಿಸಿದ್ದಾಳೆ.
“ಅಪರಿಚಿತ ವ್ಯಕ್ತಿಯಿಂದ ಚಿನ್ನವನ್ನು ಸಂಗ್ರಹಿಸಿ ಅದನ್ನು ಇನ್ನೊಬ್ಬ ಅಪರಿಚಿತ ವ್ಯಕ್ತಿಗೆ ತಲುಪಿಸಲು ನನಗೆ ಸೂಚಿಸಲಾಗಿತ್ತು” ಎಂದು ಕಳ್ಳಸಾಗಣೆ ಜಾಲದ ಬಗ್ಗೆ ಪ್ರಶ್ನಿಸಿದಾಗ ತಿಳಿಸಿದ್ದಾಳೆ ಎಂದು ವರದಿ ಹೇಳಿದೆ.
ರಾವ್ ಅವರು ಕಳ್ಳಸಾಗಣೆ ಸಿಂಡಿಕೇಟ್ ಬಗ್ಗೆ ಯಾವುದೇ ವಿವರಗಳನ್ನು ನೀಡದಿದ್ದರೂ ಡಿಆಆರ್‌ಐ ತನಿಖೆಯನ್ನು ಮುಂದುವರೆಸಿದೆ. ರನ್ಯಾ ಫೋನ್ ಮತ್ತು ಲ್ಯಾಪ್‌ಟಾಪ್‌ನ ಡೇಟಾವನ್ನು ಆಧರಿಸಿ, ಡಿಆರ್‌ಐ ಸಿಂಡಿಕೇಟ್ ಸದಸ್ಯರನ್ನು ಟ್ರ್ಯಾಕ್ ಮಾಡಿದೆ.

ಪ್ರಮುಖ ಸುದ್ದಿ :-   ಸಚಿವರು, ಶಾಸಕರ ವೇತನ ದ್ವಿಗುಣ ಸಾಧ್ಯತೆ : ವೇತನ. ಭತ್ಯೆ ಹೆಚ್ಚಳಕ್ಕೆ ತಿದ್ದುಪಡಿ ಮಸೂದೆ ಸಿದ್ಧ

.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement