ಇಸ್ರೇಲಿ ದಾಳಿಯಲ್ಲಿ ಹಿಜ್ಬುಲ್ಲಾ ಬೆಟಾಲಿಯನ್ ಕಮಾಂಡರ್ ಅಹ್ಮದ್ ಅದ್ನಾನ್ ಸಾವು : ವೀಡಿಯೊ ಹಂಚಿಕೊಂಡ ಇಸ್ರೇಲಿ ಏರ್‌ ಫೋರ್ಸ್‌

ಇಸ್ರೇಲ್‌ ತಾನು ನಡೆಸಿದ ಬಾಯುದಾಳಿಯಲ್ಲಿ ಹಿಜ್ಬುಲ್ಲಾದ ಮಹತ್ವದ ರಾದ್ವಾನ್ ಪಡೆಯ ಬೆಟಾಲಿಯನ್ ಕಮಾಂಡರ್ ಅಹ್ಮದ್ ಅದ್ನಾನ್ ಬಜಿಜಾ ಅವರನ್ನು ಕೊಂದುಹಾಕಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ವೈಮಾನಿಕ ದಾಳಿಗಳು ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಹೋರಾಟಗಾರರ ಮತ್ತೊಂದು ಗುಂಪನ್ನು ಗುರಿಯಾಗಿಸಿಕೊಂಡಿವೆ. ಇಸ್ರೇಲಿ ವಾಯುಪಡೆಯು ಸಿರಿಯಾದ ಲಟಾಕಿಯಾ ಬಂದರು ಪ್ರದೇಶದಲ್ಲಿ ರಾತ್ರೋರಾತ್ರಿ ದಾಳಿ ನಡೆಸಿತು. ಬೃಹತ್ ಸ್ಫೋಟಗಳು ಪ್ರದೇಶವನ್ನು ಅಲುಗಾಡಿಸಿದವು. ಇಸ್ರೇಲಿ ಏರ್ ಫೋರ್ಸ್ X ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದೆದ್ದು, ಅದು ವಾಯುದಾಳಿಯನ್ನು ತೋರಿಸುತ್ತದೆ.

ಹಿಜ್ಬುಲ್ಲಾ ಭಯೋತ್ಪಾದಕ ಗುಂಪು ಹಮಾಸ್‌ಗೆ ಬೆಂಬಲವಾಗಿ ಇಸ್ರೇಲ್‌ ಮೇಲೆ ಆಗಾಗ್ಗೆ ರಾಕೆಟ್‌ಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸುತ್ತಿದೆ.ಇದಕ್ಕೆ ಪ್ರತ್ಯುತ್ತರವಾಗಿ ಇಸ್ರೇಲ್ ಹಿಜ್ಬುಲ್ಲಾ ಗುಂಪು ಮತ್ತು ಅದರ ಅಂಗಸಂಸ್ಥೆ ಭಯೋತ್ಪಾದಕ ಗುಂಪುಗಳ ಸದಸ್ಯರ ಮೇಲೆ ತನ್ನ ದಾಳಿಗಳನ್ನು ಮುಂದುವರೆಸಿದೆ.
ಗಮನಾರ್ಹವಾಗಿ, ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಮೊದಲ ಹಂತವು ಮುಗಿದ ನಂತರ, ಇಸ್ರೇಲ್ ಗಾಜಾದ ಮೇಲೆ ಮತ್ತೆ ವೈಮಾನಿಕ ದಾಳಿಯನ್ನು ಪ್ರಾರಂಭಿಸಿದೆ, ಇದು ನೂರಾರು ಪ್ಯಾಲೆಸ್ತೀನಿಯನ್ನರ ಸಾವಿಗೆ ಕಾರಣವಾಗಿದೆ. ಇಸ್ರೇಲ್ ಯುದ್ಧವನ್ನು ಪುನರಾರಂಭಿಸಿದ ನಂತರ ಸುಮಾರು 600 ಪ್ಯಾಲೆಸ್ತೀನಿಯನ್ನರು ಕೊಲ್ಲಲ್ಪಟ್ಟರು.

ಹಮಾಸ್ ನೇತೃತ್ವದ ಉಗ್ರಗಾಮಿಗಳು 2023 ರಲ್ಲಿ ಇಸ್ರೇಲ್‌ ಮೇಲೆ ನಡೆಸಿದ ದಾಳಿಯಲ್ಲಿ 1,200ರಷ್ಟು ಇಸ್ರೇಲಿ ಜನರು ಸಾವಿಗೀಡಾಗಿದ್ದರು. ಮತ್ತು 49,000 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಸಾವಿಗೀಡಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ. ಸಾಕ್ಷ್ಯಾಧಾರಗಳನ್ನು ನೀಡದೆ ಸುಮಾರು 20,000 ಉಗ್ರಗಾಮಿಗಳನ್ನು ಕೊಂದಿರುವುದಾಗಿ ಇಸ್ರೇಲ್ ಹೇಳುತ್ತಿದೆ.

ಪ್ರಮುಖ ಸುದ್ದಿ :-   ವಿಡಿಯೊ | ವಿಶ್ವಕಪ್ ವಿಜಯೋತ್ಸವ ಪೋಡಿಯಂನಲ್ಲಿ ಟ್ರಂಪ್ ವರ್ತನೆ ಚರ್ಚೆಗೆ ಗ್ರಾಸ ; ಪರಿಸ್ಥಿತಿ ನಿಭಾಯಿಸಿದ ಫಿಫಾ ಮುಖ್ಯಸ್ಥ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement