
ನವದೆಹಲಿ: ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಸಾವಿನ ಸಂಖ್ಯೆ 694ಕ್ಕೆ ಏರಿದೆ. ದೇಶದ ಎರಡನೇ ಅತಿದೊಡ್ಡ ನಗರ ಮತ್ತು ಭೂಕಂಪದ ಕೇಂದ್ರಬಿಂದುವಾಗಿರುವ ಮ್ಯಾಂಡಲೆಯಲ್ಲಿ ಬದುಕುಳಿದವರ ರಕ್ಷಣೆಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ನಡೆಸುತ್ತಿದ್ದಾರೆ.
ಮಿಲಿಟರಿ ನಾಯಕರ ಪ್ರಕಾರ ಕನಿಷ್ಠ 694 ಜನರು ಸಾವಿಗೀಡಾಗಿದ್ದಾರೆ ಹಾಗೂ 1,670 ಮಂದಿ ಗಾಯಗೊಂಡಿದ್ದಾರೆ ಎಂದು ಮ್ಯಾನ್ಮಾರ್‌ನ ಮಿಲಿಟರಿ ಜುಂಟಾ ತಿಳಿಸಿದೆ. ಭೂಕಂಪದಲ್ಲಿ ಸಾವಿನ ಸಂಖ್ಯೆ 10,000 ತಲುಪಬಹುದು ಎಂದು ಅಮೆರಿಕದ ಏಜೆನ್ಸಿ ಎಚ್ಚರಿಸಿದೆ.
ಭೂಕಂಪವು ಎಷ್ಟು ಶಕ್ತಿಯುತವಾಗಿತ್ತು ಎಂದರೆ 900 ಕಿಲೋಮೀಟರ್ ದೂರದಲ್ಲಿರುವ ಬ್ಯಾಂಕಾಕ್ ಸಹ ಭೂಕಂಪದ ಪ್ರಭಾವದಿಂದ ಹಾನಿಯನ್ನು ಅನುಭವಿಸಿತು, ಇದು ಹಲವಾರು ಸಾಂಪ್ರದಾಯಿಕ ಕಟ್ಟಡಗಳು, ರಚನೆಗಳು ಮತ್ತು ಸೇತುವೆಗಳ ಕುಸಿತಕ್ಕೆ ಕಾರಣವಾಯಿತು. ಭೂಕಂಪದ ನಂತರ, ಥಾಯ್ ಸರ್ಕಾರವು ರಾಜಧಾನಿ ಬ್ಯಾಂಕಾಕ್‌ನಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಶುಕ್ರವಾರ ಬ್ಯಾಂಕಾಕ್‌ನಲ್ಲಿ ಅಪೂರ್ಣ ಗಗನಚುಂಬಿ ಕಟ್ಟಡ ಕುಸಿದು ಕನಿಷ್ಠ 10 ಜನರು ಸಾವಿಗೀಡಾಗಿದ್ದಾರೆ ಮತ್ತು 100 ಕಟ್ಟಡ ಕಾರ್ಮಿಕರು ನಾಪತ್ತೆಯಾಗಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS)ಯು ಶುಕ್ರವಾರ ಸಂಭವಿಸಿದ ಭೂಕಂಪವು ವ್ಯಾಪಕ ಹಾನಿಯನ್ನು” ಉಂಟುಮಾಡಿದ್ದು ಸಾವಿನ ಸಂಖ್ಯೆ 10,000 ದಾಟಬಹುದು ಎಂದು ಎಚ್ಚರಿಸಿದೆ.
ಮೇಘಾಲಯ ಮತ್ತು ಮಣಿಪುರ ಸೇರಿದಂತೆ ಭಾರತದ ಕೆಲವು ಭಾಗಗಳಲ್ಲಿ, ಹಾಗೆಯೇ ಬಾಂಗ್ಲಾದೇಶದಲ್ಲಿ, ವಿಶೇಷವಾಗಿ ಢಾಕಾ ಮತ್ತು ಚಟ್ಟೋಗ್ರಾಮದಲ್ಲಿ ಹಾಗೂ ಚೀನಾದಲ್ಲಿ ಬಲವಾದ ಕಂಪನಗಳು ಅನುಭವಕ್ಕೆ ಬಂದವು.
ಭಾರತವು ನೆರವು ನೀಡಲು ಸಿದ್ಧ ಎಂದು ಪ್ರಧಾನಿ ಮೋದಿ ಘೋಷಿಸಿದ ನಂತರ, ಭಾರತವು ಐಎಎಫ್ ಸಿ 130 ಜೆ ವಿಮಾನದಲ್ಲಿ ಸೋಲಾರ್ ಲ್ಯಾಂಪ್‌ಗಳು, ಆಹಾರ ಪ್ಯಾಕೆಟ್‌ಗಳು ಮತ್ತು ಕಿಚನ್ ಸೆಟ್‌ಗಳು ಸೇರಿದಂತೆ 15 ಟನ್ ಪರಿಹಾರ ಸಾಮಗ್ರಿಗಳನ್ನು ಮ್ಯಾನ್ಮಾರ್‌ಗೆ ಕಳುಹಿಸಿದೆ.
ವರ್ಷಗಳ ಅಂತರ್ಯುದ್ಧದಿಂದ ಜರ್ಜರಿತವಾಗಿರುವ ಮ್ಯಾನ್ಮಾರ್, ಭೂಕಂಪದ ನಂತರ ತೀವ್ರವಾದ ವಿದ್ಯುತ್ ಮತ್ತು ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಜಾಗತಿಕವಾಗಿ ಮನವಿ ಮಾಡಿರುವ, ಮ್ಯಾನ್ಮಾರ್‌ನ ಜುಂಟಾ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್ ನೆರವನ್ನು ಕೋರಿದ್ದಾರೆ.
ಚೀನಾ ಮತ್ತು ರಷ್ಯಾ ಮ್ಯಾನ್ಮಾರ್‌ಗೆ ನೆರವು ಮತ್ತು ರಕ್ಷಣಾ ತಂಡಗಳನ್ನು ಕಳುಹಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ