ಎಲ್ಲಾ ನಕಲಿ ಇಲ್ಲಿ… | ಎಕ್ಸಿಡೆಂಟ್‌ ನಕಲಿ…ಅಂತ್ಯಕ್ರಿಯೆ ನಕಲಿ…! 2 ಕೋಟಿ ವಿಮೆ ಹಣ ಪಡೆಯಲು ಮಗ ಸತ್ತಿದ್ದಾನೆಂದು ಬಿಂಬಿಸಿ ಸಿಕ್ಕಿಬಿದ್ದರು..!

ನವದೆಹಲಿ: ವಿಮಾ ಕಂಪನಿ(Insurance Company)ಯಿಂದ 2 ಕೋಟಿ ರೂ. ಇನ್ಶೂರೆನ್ಸ್ ಹಣ ಪಡೆಯಲು ವ್ಯಕ್ತಿಯೊಬ್ಬ ಬದುಕಿರುವ ತನ್ನ ಮಗನನ್ನು ಸತ್ತಿದ್ದಾನೆಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ನಜಾಫ್‌ಗಢ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಈ ಸಂಬಂಧ ನಕಲಿ ಮರಣ ಪ್ರಮಾಣ ಪತ್ರವನ್ನೂ ಸಿದ್ಧಪಡಿಸಲಾಗಿತ್ತು, ನಕಲಿ ಅಂತ್ಯಕ್ರಿಯೆಯನ್ನೂ ಮಾಡಲಾಗಿತ್ತು. ಇಷ್ಟೇ ಅಲ್ಲದೆ, ಹದಿಮೂರನೇ ದಿನದಂದು ಈ ಸಂಬಂಧ ವಿಶೇಷ ಸಮಾರಾಧನೆ ಕೂಡ ಆಯೋಜಿಸಲಾಗಿತ್ತು. ಆದರೆ ಪೊಲೀಸ್ ತನಿಖೆಯಲ್ಲಿ ಸತ್ಯ ಬಯಲಾಯಿತು. ದೆಹಲಿಯ ನಜಾಫ್‌ಗಢ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಈ ಪ್ರಕರಣದಲ್ಲಿ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗ ಆರೋಪಿಗಳು ಜಾಮೀನಿಗಾಗಿ ಅಲೆಯುತ್ತಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಮಾರ್ಚ್ 5 ರಂದು ನಜಾಫ್‌ಗಢ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಪಿಸಿಆರ್ ಕರೆ ಬಂದಿದೆ ಎಂದು ಅವರು ಹೇಳಿದರು.

ಪೊಲೀಸರ ಪ್ರಕಾರ, ದೂರುದಾರರಾದ ಸತೀಶಕುಮಾರ ಅವರು ತಮ್ಮ ಮಗ ಗಗನ್‌ ಎಂಬಾತನಿಗೆ ಬೈಕ್ ಅಪಘಾತದಲ್ಲಿ ತಲೆಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಆದಾಗ್ಯೂ, ದೂರುದಾರ ಮತ್ತು ಅವರ ಮಗ ಲಿಖಿತ ದೂರು ದಾಖಲಿಸದೆ ಅಥವಾ ಮೆಡಿಕೋ-ಲೀಗಲ್ ಕೇಸ್ (ಎಂಎಲ್‌ಸಿ) ವರದಿಯನ್ನು ಪಡೆಯದೆ ಪೊಲೀಸ್ ಠಾಣೆಯಿಂದ ಹೋಗಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ (ದ್ವಾರಕಾ) ಅಂಕಿತ್ ಸಿಂಗ್ ಹೇಳಿದ್ದಾರೆ.
ಮಾರ್ಚ್ 11 ರಂದು, ಪೊಲೀಸರು ಸತೀಶಕುಮಾರ ಅವರನ್ನು ಸಂಪರ್ಕಿಸಿದಾಗ, ಗಗನ್ ಮಾರ್ಚ್ 6 ರಂದು ನಿಧನರಾದರು ಮತ್ತು ಶವ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಇದ್ದುದರಿಂದ ಮರಣೋತ್ತರ ಪರೀಕ್ಷೆ ಅಥವಾ ಪೋಲೀಸರಿಗೆ ಮಾಹಿತಿ ನೀಡದೆ ಉತ್ತರ ಪ್ರದೇಶದ ಹಾಪುರ್‌ನ ಗರ್ಗಂಗದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಅವರು ತಿಳಿಸಿದರು ಎಂದು ಅಧಿಕಾರಿ ಹೇಳಿದರು.
ನಂತರ ಮಾರಣಾಂತಿಕ ಅಪಘಾತ ಪ್ರಕರಣ ದಾಖಲಿಸುವಲ್ಲಿ ನಿರ್ಲಕ್ಷ್ಯ ತೋರಿದ ತನಿಖಾಧಿಕಾರಿ (ಐಒ) ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾರ್ಚ್ 12ರಂದು ದೂರು ಸಲ್ಲಿಸಿದ್ದರು. ಆದರೆ ಪೊಲೀಸರು ಪ್ರಕರಣದಲ್ಲಿ ಏನೋ ವ್ಯತ್ಯಾಸವಾಗಿದೆ ಕಂಡುಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ‘ಅಜೇಯ ಬೆಂಕಿಯ ಗೋಡೆ’: ಆಪರೇಷನ್ ಸಿಂಧೂರದ ಹೊಸ ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ | ವೀಕ್ಷಿಸಿ

“ನಾವು ಅಪಘಾತ ಸ್ಥಳದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ದೃಶ್ಯಗಳು ಗಗನ್ ಮತ್ತು ಇನ್ನೊಬ್ಬ ವ್ಯಕ್ತಿ ಅಪಘಾತವನ್ನು ನಡೆಸುತ್ತಿರುವುದನ್ನು ತೋರಿಸಿದೆ” ಎಂದು ಡಿಸಿಪಿ ಹೇಳಿದರು. ನಂತರ ವಕೀಲರೊಬ್ಬರು ಪೊಲೀಸ್ ಠಾಣೆಗೆ ಬಂದಿದ್ದರು. ಡಿಕ್ಕಿ ಹೊಡೆದ ಬೈಕ್ ಸವಾರನನ್ನೂ ಪೊಲೀಸರ ಮುಂದೆ ಹಾಜರುಪಡಿಸಲಾಗಿದೆ ಎಂದು ತಿಳಿಸಲಾಯಿತು. ಆ ನಕಲಿ ಆರೋಪಿ ತನ್ನ ಬೈಕ್‌ಗೆ ಡಿಕ್ಕಿಯಾಗಿದೆ ಎಂದು ಹೇಳಿದ್ದ. ಆದರೆ, ವಿಚಾರಣೆ ನಡೆಸಿದಾಗ, ಸತೀಶಕುಮಾರ ಮತ್ತು ವಕೀಲ ಮನಮೋಹನ್, ಗಗನ್ ಭಾಗಿಯಾಗಿ ನಕಲಿ ಸಾವನ್ನು ಸೃಷ್ಟಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಅಪಘಾತವಾಗಿದ್ದು ನಿಜವೆಂದು ತೋರಲು ಅಪಘಾತದ ಹಂತಕ್ಕೆ ಮುಂಚಿತವಾಗಿ ವೈದ್ಯರು ಗಗನ್ ಅವರ ತಲೆಗೆ ಸಣ್ಣ ಗಾಯವನ್ನು ಮಾಡಿದ್ದಾರೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.

ಫೆಬ್ರವರಿ 13 ರಂದು ಗಗನ್ ಹೆಸರಿನಲ್ಲಿ 2 ಕೋಟಿ ವಿಮಾ ಪಾವತಿಯನ್ನು ಕ್ಲೈಮ್ ಮಾಡಲು ಯೋಜನೆ ರೂಪಿಸಲಾಗಿತ್ತು. ಹಾಪುರದಲ್ಲಿ ಗಗನ್ ಅಂತ್ಯಕ್ರಿಯೆ ನಡೆದಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಸತೀಶಕುಮಾರ, ವಕೀಲ ಮನಮೋಹನ್ ಮತ್ತು ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
ತರುವಾಯ, ವಂಚನೆ ಮತ್ತು ಪಿತೂರಿಗೆ ಸಂಬಂಧಿಸಿದ ಭಾರತ ನ್ಯಾಯ ಸಂಹಿತೆ (BNS) ಸೆಕ್ಷನ್‌ಗಳ ಅಡಿಯಲ್ಲಿ ಮಾರ್ಚ್ 25 ರಂದು ಎಫ್‌ಐಆರ್ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಪೊಲೀಸರು ಆರೋಪಿಗಳ ಕರೆ ವಿವರ ದಾಖಲೆಗಳನ್ನು (ಸಿಡಿಆರ್) ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಭಯೋತ್ಪಾದನೆ ವಿರುದ್ಧ ಭಾರತವು ಜಾಗತಿಕವಾಗಿ ತಲುಪುವ ಪ್ರಯತ್ನಕ್ಕೆ ಸ್ಥಳೀಯ ರಾಜಕೀಯ ತರಬೇಡಿ ; ಸಂಜಯ ರಾವತಗೆ ಶರದ್ ಪವಾರ್

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement