ಬಹುದೊಡ್ಡ ಭೂಕಂಪದ ಮುನ್ನೆಚ್ಚರಿಕೆ : 3 ಲಕ್ಷ ಜನರು ಸಾಯಬಹುದು, ಬೃಹತ್ ಸುನಾಮಿ ಸೃಷ್ಟಿಸಬಹುದು ಎಂದು ಎಚ್ಚರಿಸಿದ ಜಪಾನ್‌…!

ಟೋಕಿಯೊ: ಜಪಾನ್ ಸರ್ಕಾರವು ತನ್ನ ದೇಶದ ಪೆಸಿಫಿಕ್ ಕರಾವಳಿಯಲ್ಲಿ ಬಹುದೊಡ್ಡ ಭೂಕಂಪ ಸಂಭವಿಸಬಹುದು ಎಂದು ಸೋಮವಾರ ಎಚ್ಚರಿಕೆ ನೀಡಿದೆ. ಈ ಬಹುದೊಡ್ಡ ಭೂಂಪವು ವಿನಾಶಕಾರಿ ಸುನಾಮಿ ಸೃಷ್ಟಿಸಬಹುದು, ನೂರಾರು ಕಟ್ಟಡಗಳನ್ನು ನಾಶಪಡಿಸಬಹುದು ಮತ್ತು ಸುಮಾರು 3,00,000 ಜೀವಗಳನ್ನು ಬಲಿತೆಗೆದುಕೊಳ್ಳಬಹುದು ಎಂದು ಹೇಳಿದೆ. ಜಪಾನ್‌ ಸರ್ಕಾರ ಬಿಡುಗಡೆ ಮಾಡಿದ ವರದಿಯು ಈ ಮುನ್ನೆಚ್ಚರಿಕೆ ನೀಡಿದೆ.
ಕಳೆದ ವರ್ಷ, ಜಪಾನ್ ತನ್ನ ಮೊದಲ ದೊಡ್ಡ ಭೂಕಂಪದ ಸಲಹೆಯನ್ನು ನೀಡಿತ್ತು. ನಂಕೈನಲ್ಲಿ 7.1 ತೀವ್ರತೆಯ ಕಂಪನವು ದಾಖಲಾದ ನಂತರ ಈ ಪ್ರದೇಶದಲ್ಲಿ 9 ರ ತೀವ್ರತೆಯ ಭೂಕಂಪದ “ಸಾಧ್ಯತೆ ಬಗ್ಗೆ ಅಧಿಕಾರಿಗಳು ಎಚ್ಚರಿಸಿದ್ದರು.
ಆರ್ಥಿಕ ಹಾನಿ $1.81 ಟ್ರಿಲಿಯನ್ ತಲುಪಬಹುದು
ರಾಯಿಟರ್ಸ್ ವರದಿಯ ಪ್ರಕಾರ, ಅಂತಹ ದುರಂತ ಭೂಕಂಪ ಸಂಭವಿಸಿದಲ್ಲಿ ಜಪಾನ್‌ನ ಆರ್ಥಿಕತೆಯು $ 1.81 ಟ್ರಿಲಿಯನ್ ನಷ್ಟವನ್ನು ಅನುಭವಿಸಬಹುದು. ಇದು 270.3 ಟ್ರಿಲಿಯನ್ ಯೆನ್‌ಗೆ ಸಮನಾಗಿದೆ. ಇದು ದೇಶದ ಒಟ್ಟು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಅರ್ಧದಷ್ಟಾಗಲಿದೆ.
9ರ ತೀವ್ರತೆಯ ಭೂಕಂಪವನ್ನು ಒಳಗೊಂಡಿರುವ ಒಂದು ಕೆಟ್ಟ ಸನ್ನಿವೇಶದಲ್ಲಿ, ಜಪಾನ್ 12.3 ಲಕ್ಷ ಜನರನ್ನು ಸ್ಥಳಾಂತರಿಸಬೇಕಾಗಿ ಬರಬಹುದು ಎಂದು ವರದಿ ಹೇಳಿದೆ. ಇದು ಅದರ ಒಟ್ಟು ಜನಸಂಖ್ಯೆಯ ಸರಿಸುಮಾರು 10%ರಷ್ಟು. ಚಳಿಗಾಲದಲ್ಲಿ ತಡರಾತ್ರಿಯಲ್ಲಿ ಇಂತಹ ಭೂಕಂಪ ಸಂಭವಿಸಿದರೆ, ಸುನಾಮಿ ಮತ್ತು ಕುಸಿಯುವ ಕಟ್ಟಡಗಳಿಂದಾಗಿ 2,98,000 ಜನರು ಸಾವನ್ನಪ್ಪಬಹುದು ಎಂದು ವರದಿ ಎಚ್ಚರಿಸಿದೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ | ಭಾರತದ ವಿರುದ್ಧ ಸೋಲಿನ ನಂತರವೂ ಪಾಕಿಸ್ತಾನದ ಸೇನಾ ಮುಖ್ಯಸ್ಥನಿಗೆ ಅತ್ಯುನ್ನತ ಮಿಲಿಟರಿ ಹುದ್ದೆಗೆ ಬಡ್ತಿ...!

ನಂಕೈ ಟ್ರಫ್:  ಟೈಮ್ ಬಾಂಬ್
ವಿಶ್ವದ ಅತ್ಯಂತ ಭೂಕಂಪ-ಪೀಡಿತ ರಾಷ್ಟ್ರಗಳಲ್ಲಿ ಒಂದಾದ ಜಪಾನ್, ದೇಶದ ನೈಋತ್ಯ ಪೆಸಿಫಿಕ್ ಕರಾವಳಿಯಿಂದ 900 ಕಿಮೀ (600-ಮೈಲಿ) ಉದ್ದದ ಸಮುದ್ರತಳ ವಲಯದ ನಂಕೈ ಟ್ರಫ್ ಅನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಫಿಲಿಪೈನ್ ಸಮುದ್ರದ ಪ್ಲೇಟ್ ಯುರೇಷಿಯನ್ ಪ್ಲೇಟ್ ಅಡಿಯಲ್ಲಿ ಒಳಪಡುವಲ್ಲಿ ಅಪಾರವಾದ ಟೆಕ್ಟೋನಿಕ್ ಸ್ಟ್ರೈನ್ ಅನ್ನು ಸಂಗ್ರಹಿಸಿದೆ. ಮುಂದಿನ ಶತಮಾನದೊಳಗೆ ಈ ಪ್ರದೇಶದಲ್ಲಿ ಸಂಭವಿಸಬಹುದಾದ 8 ರಿಂದ 9 ರ ತೀವ್ರತೆಯ ಭೂಕಂಪ ಆಗುವ 80%ರಷ್ಟು ಸಂಭವನೀಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.
2011 ರ ವಿಪತ್ತು
ಜಪಾನ್ ಈ ಹಿಂದೆ 9 ತೀವ್ರತೆಯ ಭೂಕಂಪದ ದುರಂತದ ಪರಿಣಾಮಗಳನ್ನು ಎದುರಿಸಿದೆ. 2011 ರ ಭೂಕಂಪವು ವಿನಾಶಕಾರಿ ಸುನಾಮಿಗೆ ಕಾರಣವಾಯಿತು. ಇದು ಫುಕುಶಿಮಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಟ್ರಿಪಲ್ ರಿಯಾಕ್ಟರ್ ಕರಗುವಿಕೆಗೆ ಕಾರಣವಾಯಿತು, ಇದರ ಪರಿಣಾಮವಾಗಿ 15,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು. ಇತ್ತೀಚಿನ ಮುನ್ನೆಚ್ಚರಿಕೆ ಮತ್ತೊಂದು ದೊಡ್ಡ ಭೂಕಂಪ ಸಂಭವಿಸಿದರೆ ಉಂಟಾಗಬಹುದಾದ ಸಂಭಾವ್ಯ ವಿನಾಶದ ಬಗ್ಗೆ ಎಚ್ಚರಿಕೆ ನೀಡಿದೆ.
ಮ್ಯಾನ್ಮಾರ್, ಥೈಲ್ಯಾಂಡ್ ನಲ್ಲಿ ಭೂಕಂಪ
ಇತ್ತೀಚೆಗೆ ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪಗಳ ಹಿನ್ನೆಲೆಯಲ್ಲಿ ಜಪಾನ್ ಸರ್ಕಾರವು ಈ ಎಚ್ಚರಿಕೆಯನ್ನು ನೀಡಿದೆ. 1,200 ಕಿಲೋಮೀಟರ್ (800 ಮೈಲಿ) ದೂರದಲ್ಲಿ ಕೇಂದ್ರೀಕೃತವಾಗಿರುವ 7.7-ತೀವ್ರತೆಯ ಭೂಕಂಪವು ಮ್ಯಾನ್ಮಾರ್‌ನಲ್ಲಿ ಸುಮಾರು 2000 ಕ್ಕೂ ಹೆಚ್ಚು ಮತ್ತು ಥೈಲ್ಯಾಂಡ್‌ನಲ್ಲಿ ಕನಿಷ್ಠ 18 ಜನರನ್ನು ಬಲಿ ತೆಗೆದುಕೊಂಡಿತು.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ | ಭಾರತದ ವಿರುದ್ಧ ಸೋಲಿನ ನಂತರವೂ ಪಾಕಿಸ್ತಾನದ ಸೇನಾ ಮುಖ್ಯಸ್ಥನಿಗೆ ಅತ್ಯುನ್ನತ ಮಿಲಿಟರಿ ಹುದ್ದೆಗೆ ಬಡ್ತಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement