ವೀಡಿಯೊ..| ಹೌತಿ ಬಂಡುಕೋರರ ಮೇಲೆ ಅಮೆರಿಕದ ಮಾರಣಾಂತಿಕ ವಾಯು ದಾಳಿಯ ವೀಡಿಯೊ ಹಂಚಿಕೊಂಡ ಅಧ್ಯಕ್ಷ ಟ್ರಂಪ್

ಹೌತಿ ಬಂಡುಕೋರರ ಮೇಲೆ ಅಮೆರಿಕ ವಾಯಪಡೆಯ ಮಾರಣಾಂತಿಕ ದಾಳಿಯ ವೀಡಿಯೊವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದಾರೆ.
ಅವರು ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಹೌತಿ ಗುಂಪಿನ ಮೇಲೆ ದೊಡ್ಡ ಪ್ರಮಾಣದ ದಾಳಿಗೆ ಆದೇಶಿಸಿದ ಕೆಲವು ದಿನಗಳ ನಂತರ ಈ ವೀಡಿಯೊ ಹಂಚಿಕೊಂಡಿದ್ದಾರೆ.
ಟ್ರಂಪ್ ಹಂಚಿಕೊಂಡ ಕಪ್ಪು-ಬಿಳುಪು ವೀಡಿಯೊ ತುಣುಕಿನಲ್ಲಿ ಮಿಲಿಟರಿ ಡ್ರೋನ್‌ಗಳು ಅಥವಾ ಇತರ ವಿಮಾನಗಳಿಂದ ಚಿತ್ರೀಕರಿಸಲಾದ ವೀಡಿಯೊದಲ್ಲಿ ಎತ್ತರದಿಂದ ಬಹುತೇಕ ಲಂಬ ಕೋನದಿಂದ ಹಲವಾರು ಡಜನ್ ಮಾನವ ವ್ಯಕ್ತಿಗಳನ್ನು ತೋರಿಸಲಾಗಿದೆ. “ಈ ಹೌತಿಗಳು ದಾಳಿಯ ಸೂಚನೆ ಪಡೆದುಕೊಳ್ಳುವ ಒಟ್ಟುಗೂಡಿದ್ದರು. ಓಹ್, ಇನ್ನು ಈ ಹೌತಿಗಳಿಂದ ಯಾವುದೇ ದಾಳಿ ಇರುವುದಿಲ್ಲ ಎಂದು ಟ್ರಂಪ್ ತಮ್ಮ ಟ್ರುಥ್‌ ಸೋಶಿಯಲ್‌ ಸಾಮಾಜಿಕ ವೇದಿಕೆಯಲ್ಲಿ ಹೇಳಿದ್ದಾರೆ.

“ಅವರು ಮತ್ತೆ ನಮ್ಮ ಹಡಗುಗಳನ್ನು ಮುಳುಗಿಸುವುದಿಲ್ಲ!” ಅವರು ಹೇಳಿದ್ದಾರೆ. ಕಳೆದ ತಿಂಗಳು, ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಹೌತಿ ಬಂಡುಕೋರ ಗುಂಪಿನ ಮೇಲೆ ದೊಡ್ಡ ಪ್ರಮಾಣದ ದಾಳಿಗೆ ಆದೇಶ ನೀಡಿದ್ದರು. ಮಾರ್ಚ್ 16 ರಂದು ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಯೆಮೆನ್‌ನ ಹೌತಿಗಳ ವಿರುದ್ಧ ಅಮೆರಿಕದ ಮೊದಲ ದಾಳಿಯು 31 ಹೌತಿಗಳನ್ನು ಕೊಂದಿತು, ಅಮೆರಿಕ ಅಧ್ಯಕ್ಷರು ಹಡಗು ಸಾಗಣೆಯ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸದಿದ್ದರೆ ಹೌತಿಗಳ ಮೇಲೆ “ನರಕದ ಮಳೆ ಬೀಳುತ್ತದೆ” ಎಂದು ಎಚ್ಚರಿಸಿದ್ದಾರೆ.
ಇಸ್ರೇಲ್-ಹಮಾಸ್ ಯುದ್ಧದ ನಂತರ ಹೌತಿಗಳು ಅಮೆರಿಕ ಸೇರಿದಂತೆ ಕೆಲವು ದೇಶಗಳ ಸರಕು ಸಾಗಣೆ ಹಡಗುಗಳ ಮೇಲೆ ದಾಳಿ ನಡೆಸಿದ್ದಾರೆ. ಹೀಗಾಗಿ ಟ್ರಂಪ್‌ ಹೌತಿ ಬಂಡುಕೋರರನ್ನು ಮಟ್ಟಹಾಕಲು ಯೆಮೆನ್‌ನಲ್ಲಿ ಈ ಬಂಡುಕೋರರ ಮೇಲೆ ಅಮೆರಿಕದ ವೈಮಾನಿಕ ದಾಳಿಯ ಇಲ್ಲಿಯವರೆಗೆ ಒಟ್ಟು 67 ಜನರನ್ನು ಕೊಂದಿದೆ ಎಂದು ಹೌತಿಗಳು ಬಿಡುಗಡೆ ಮಾಡಿದ ಸಾವುನೋವು ಅಂಕಿಅಂಶಗಳು ತಿಳಿಸಿವೆ.

ಟ್ರಂಪ್ ಹಂಚಿಕೊಂಡ ವೀಡಿಯೊದಲ್ಲಿ ಜನರು ಗನ್ ಕ್ಯಾಮೆರಾ ಶೈಲಿಯ ಕ್ರಾಸ್‌ಹೇರ್‌ನೊಂದಿಗೆ ಸೂಪರ್‌ಇಂಪೋಸ್ ಮಾಡಿರುವುದನ್ನು ತೋರಿಸಿದೆ. ಕೆಲವು ಸೆಕೆಂಡುಗಳಲ್ಲಿ, ದೃಶ್ಯದ ಮಧ್ಯದಲ್ಲಿ ಪ್ರಕಾಶಮಾನವಾದ ಫ್ಲ್ಯಾಷ್ ಕಾಣಿಸಿಕೊಳ್ಳುತ್ತದೆ, ನಂತರ ಹೊಗೆ ಏಳುತ್ತದೆ.
ಏತನ್ಮಧ್ಯೆ, “ಪ್ರಾದೇಶಿಕ ಸ್ಥಿರತೆ ಕಾಪಾಡಲು ಹಾಗೂ, ಆಕ್ರಮಣ ತಡೆಯಲು ಮಧ್ಯಪ್ರಾಚ್ಯದಲ್ಲಿ USS ಹ್ಯಾರಿ S. ಟ್ರೂಮನ್‌ಗೆ ಸೇರಲು ಎರಡನೇ ವಿಮಾನವಾಹಕ ನೌಕೆ ಕಾರ್ಲ್ ವಿನ್ಸನ್ ಅನ್ನು ಅಲ್ಲಿಗೆ ಕಳುಹಿಸುವುದಾಗಿ ಅಮೆರಿಕ ಬುಧವಾರ ಹೇಳಿದೆ.
ಅಮೆರಿಕವು ಕನಿಷ್ಠ ಆರು ಪರಮಾಣು ಸಾಮರ್ಥ್ಯದ B-2 ಸ್ಪಿರಿಟ್ ಬಾಂಬರ್‌ಗಳನ್ನು ಡಿಯಾಗೋ ಗಾರ್ಸಿಯಾ ದ್ವೀಪದ ಕ್ಯಾಂಪ್ ಥಂಡರ್ ಪ್ರದೇಶದಲ್ಲಿ ಹೌತಿಗಳು ಮತ್ತು ಇರಾನ್ ವಿರುದ್ಧ ಬಲ ಪ್ರಯೋಗಕ್ಕೆ ನಿಯೋಜಿಸಿದೆ. ಡಿಯಾಗೋ ಗಾರ್ಸಿಯಾ ನೆಲೆಯು ಭಾರತದ ದಕ್ಷಿಣದಲ್ಲಿದೆ ಮತ್ತು ಇರಾನ್ ಮತ್ತು ಯೆಮೆನ್ ಎರಡು ದೇಶಗಳಿಂದಲೂ ಗಮನಾರ್ಹ ಅಂತರದಲ್ಲಿದೆ.

ಪ್ರಮುಖ ಸುದ್ದಿ :-   ವೀಡಿಯೊ | ಮೋದಿ ಹೆಸರು ಹೇಳಲು ಹೆದರುವ ರಣಹೇಡಿ..ಸೇನೆಗೆ ಇವ್ರೇನು ಸಂದೇಶ ಕೊಡ್ತಾರೆ ; ಪಾಕ್‌ ಪ್ರಧಾನಿಯನ್ನು ಜರೆದ ಸಂಸದ-ವೀಕ್ಷಿಸಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement