ಚೀನಾಕ್ಕೆ ಮತ್ತೆ ಶಾಕ್‌ ಕೊಟ್ಟ ಟ್ರಂಪ್‌ ; ಚೀನಾದ ಆಮದಿನ ಮೇಲೆ ಮತ್ತೆ ಸುಂಕ ಹೆಚ್ಚಿಸಿದ ಅಮೆರಿಕ

ವಾಷಿಂಗ್ಟನ್‌ : ಚೀನಾದ ಆಮದುಗಳ ಮೇಲಿನ ಸುಂಕವನ್ನು ಅಮೆರಿಕ ಮತ್ತೆ ಹೆಚ್ಚಿಸಿದೆ. ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕವು ಸುಂಕವನ್ನು 145%ಕ್ಕೆ ಹೆಚ್ಚಿಸಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಅಮೆರಿಕದ ಪ್ರಸಾರಕ ಸಿಎನ್‌ಬಿಸಿಗೆ ದೃಢಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಕಾರ್ಯನಿರ್ವಾಹಕ ಆದೇಶದ ನಂತರ ಈ ಹೆಚ್ಚಳ ಸಂಭವಿಸಿದೆ. ಈ ಮೊದಲು 84%ರಷ್ಟಿದ್ದ ಸುಂಕವನ್ನು 125% ಕ್ಕೆ ಹೆಚ್ಚಿಸಲಾಗಿತ್ತು. ಈಗ ಅದನ್ನು ಅಮೆರಿಕವು 145%ಕ್ಕೆ ಹೆಚ್ಚಿಸಿದೆ. ಚೀನಾದಿಂದ ಆಮದಾಗುವ ಸಿಂಥೆಟಿಕ್ ಒಪಿಯಾಯ್ಡ್‌ಗಳ ಮೇಲೆ ಚೀನಾವು ಸುಂಕ ವಿಧಿಸಿದ್ದಕ್ಕೆ ಪ್ರತಿಯಾಗಿ ಅಮೆರಿಕವು ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಸುಂಕ ಹೆಚ್ಚಿಸಿದೆ.

ಚೀನಾವನ್ನು ಹೊರತುಪಡಿಸಿ ಬಹುತೇಕ ಎಲ್ಲಾ ದೇಶಗಳಿಗೆ ಟ್ರಂಪ್ ಅವರ 10% ಸುಂಕವು ಮುಂದುವರಿಯುವ ಸಾಧ್ಯತೆಯಿದೆ ಎಂದು ಅವರ ಉನ್ನತ ಆರ್ಥಿಕ ಸಲಹೆಗಾರ ಕೆವಿನ್ ಹ್ಯಾಸೆಟ್ ಗುರುವಾರ ಹೇಳಿದ್ದಾರೆ.
ಒಂದು ದಿನದ ಹಿಂದೆ, ಟ್ರಂಪ್ ಚೀನಾವನ್ನು ಹೊರತುಪಡಿಸಿ ಎಲ್ಲಾ ದೇಶಗಳ ಸರಕಿನ ಮೇಲೆ ವಿಧಿಸಲಾಗಿರುವ ಹೆಚ್ಚಿನ ಸುಂಕಗಳನ್ನು 90 ದಿನಗಳ ವರೆಗೆ ಅಮೆರಿಕವು ತಡೆಹಿಡಿದಿದೆ. ಇದು ಜಾಗತಿಕ ಷೇರು ಮಾರುಕಟ್ಟೆಗಳನ್ನು ಬೆಚ್ಚಿಬೀಳಿಸಿದ ಮತ್ತು ಅಮೇರಿಕನ್ ಬಾಂಡ್ ಮಾರುಕಟ್ಟೆಗಳಲ್ಲಿ ಅಲ್ಲೋಲಕಲ್ಲೋಲವಾದ ನಂತರ ಅಮೆರಿಕದ ಈ ನಿರ್ಧಾರವು ಹೊರಬಿದ್ದಿದೆ. .
ಟ್ರಂಪ್ ಅವರ ಘೋಷಣೆಯಿಂದಾಗಿ ಚೀನಾವು ಅಸ್ತಿತ್ವದಲ್ಲಿರುವ ಶೇಕಡಾ 20 ರಷ್ಟು ಸುಂಕಗಳ ಜೊತೆಗೆ ಶೇಕಡಾ 125 ರಷ್ಟು ಹೆಚ್ಚುವರಿ ಸುಂಕವನ್ನು ನಿಭಾಯಿಸಬೇಕಿದೆ. ಆದರೆ ಬಹುತೇಕ ಎಲ್ಲಾ ಇತರ ದೇಶಗಳ ಮೇಲೆ ಶೇಕಡಾ 10 ರಷ್ಟು ಮೂಲ ಸುಂಕ ಮಾತ್ರ ಇದೆ. ಹೀಗಾಗಿ ಇದು ಚೀನಾಕ್ಕೆ ಭಾರಿ ಆರ್ಥಿಕ ಹೊಡೆತ ನೀಡಬಹುದು.

ಪ್ರಮುಖ ಸುದ್ದಿ :-   ವೀಡಿಯೊ...| ಹಾಸಿಗೆ, ಶೌಚಾಲಯ, ಮೈಕ್ರೋವೇವ್ ಒಲೆ, ಆಹಾರ ತಯಾರಿಕೆ...: ಅಮೆರಿಕದ ಬಿ-2 ಬಾಂಬರ್ ಯುದ್ಧ ವಿಮಾನ ಹಾರುವ ಹೋಟೆಲ್ ಕೂಡ ಹೌದು..!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement