ನವದೆಹಲಿ: ಶವದ ಮೇಲಿನ ಮೂಗುತಿ ನೀಡಿದ ಸುಳಿವಿನಿಂದ ಕೊಲೆ ಪ್ರಕರಣವೊಂದನ್ನು ಪೊಲೀಸರು ಭೇದಿಸಿದ್ದಾರೆ. ಮೂಗುತಿಯ ಸಹಾಯದಿಂದ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಮಹಿಳೆಯ ಕೊಲೆಗಾರನನ್ನು ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ.
ಪತಿಯೇ ತನ್ನ ಹೆಂಡತಿಯನ್ನು ಕೇಬಲ್ ವೈರ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಆಕೆಯ ದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಚರಂಡಿಗೆ ಎಸೆದಿದ್ದ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಆಸ್ತಿ ವ್ಯವಹಾರ ಮಾಡುತ್ತಿದ್ದ ಅನಿಲಕುಮಾರ, ಕುಟುಂಬದ ಮನೆ ಕೆಲಸಗಾರ ಶಿವಶಂಕರ ಜೊತೆ ಸೇರಿ ಈ ಭೀಕರ ಕೊಲೆಯನ್ನು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ಸೀಮಾ ಸಿಂಗ್ (47) ಅವರ ಶವವನ್ನು ಮಾರ್ಚ್ 15 ರಂದು ಬೆಡ್‌ಶೀಟ್‌ನಲ್ಲಿ ಸುತ್ತಿ, ಕೇಬಲ್ ವೈರ್ ಮತ್ತು ಭಾರವಾದ ಕಲ್ಲಿನಿಂದ ಕಟ್ಟಿ, ನಜಾಫ್‌ಗಢ ಎಂಬಲ್ಲಿ ಚರಂಡಿಗೆ ಎಸೆಯಲಾಗಿತ್ತು” ಎಂದು ಪೊಲೀಸ್ ಉಪ ಆಯುಕ್ತ (ದ್ವಾರಕಾ) ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆರಂಭದಲ್ಲಿ ಮಹಿಳೆಯ ಗುರುತು ಪತ್ತೆಯಾಗಿರಲಿಲ್ಲ. ಆದರೆ ತನಿಖಾಧಿಕಾರಿಗಳು ಮಹಿಳೆ ಧರಿಸಿದ್ದ ಚಿನ್ನದ ಮೂಗುತಿಯನ್ನು ಪರೀಶೀಲಿಸಿ ತನಿಖೆಗೆ ಒಳಪಡಿಸಿದಾಗ ತನಿಖೆಯಲ್ಲಿ ಪ್ರಗತಿ ಕಂಡುಬಂತು.
ಮೂಗುತಿಯ ಹಾಲ್‌ಮಾರ್ಕ್ ಪೊಲೀಸರನ್ನು ಆಭರಣ ತಯಾರಕರ ಬಳಿಗೆ ಕರೆದೊಯ್ಯಿತು, ಇದು ಅಂತಿಮವಾಗಿ ಶವವಾಗಿ ದೊರೆತಿದ್ದ ಮಹಿಳೆ ಯಾರೆಂದು ಪತ್ತೆ ಹಚ್ಚಲು ನೆರವಾಯಿತು. ಗುರುತನ್ನು ಪತ್ತೆಹಚ್ಚಲು ಸಹಾಯ ಮಾಡಿತು. ಸೀಮಾ ಸಿಂಗ್ ಎಂದು ಗುರುತಿಸಲಾದ ಮಹಿಳೆ ದೆಹಲಿಯ ಆಸ್ತಿ ವ್ಯಾಪಾರಿ ಅನಿಲಕುಮಾರ ಅವರೊಂದಿಗೆ 20 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆಕೆಯ ಶವ ಮಾರ್ಚ್ 15 ರಂದು ದೆಹಲಿಯ ಚರಂಡಿಯಲ್ಲಿ ಪತ್ತೆಯಾಗಿತ್ತು. ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಕಲ್ಲು ಮತ್ತು ಸಿಮೆಂಟ್ ಚೀಲಕ್ಕೆ ಕಟ್ಟಿರುವುದು ಕಂಡುಬಂದಿತ್ತು ಎಂದು ವರದಿ ತಿಳಿಸಿದೆ.
ಶವದ ಗುರುತು ಪತ್ತೆಗೆ ಮೂಗುತಿ ಹೇಗೆ ಸಹಾಯ ಮಾಡಿತು..?
ಶವ ಪತ್ತೆಯಾದ ನಂತರ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಶವದ ಮೇಲೆ ಮೂಗುತಿಯು ಪೊಲೀಸರಿಗೆ ದೊರೆಯಿತು. ಅದರ ಹಾಲ್ ಮಾರ್ಕ್ ಪೊಲೀಸರಿಗೆ ಪ್ರಕರಣದ ತನಿಖೆಯಲ್ಲಿ ದೊಡ್ಡ ಸುಳಿವು ನೀಡಿತು. ಮೂಗುತಿ ಹಾಲ್ಮಾರ್ಕ್ ಪೊಲೀಸರನ್ನು ದಕ್ಷಿಣ ದೆಹಲಿಯ ಆಭರಣ ಅಂಗಡಿಗೆ ಕರೆದೊಯ್ಯಿತು. ಆಭರಣ ಅಂಗಡಿಯ ದಾಖಲೆಗಳನ್ನು ಪರಿಶೀಲಿಸಿದರು. ಇದು ಅನಿಲಕುಮಾರ ಎಂಬವರ ಹೆಸರಿನಲ್ಲಿ ಬಿಲ್ ಇದ್ದ ಕಾರಣ ಅವರನ್ನು ಪತ್ತೆಹಚ್ಚಲು ಕಾರಣವಾಯಿತು. ಅನಿಲಕುಮಾರ ದೆಹಲಿಯಲ್ಲಿ ಆಸ್ತಿ ವ್ಯಾಪಾರಿಯಾಗಿದ್ದು, ಅವರು ಗುರುಗ್ರಾಮದ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು.
ಪೊಲೀಸರು ಚಿನ್ನದ ಅಂಗಡಿ ದಾಖಲೆಗಳಲ್ಲಿ ಉಲ್ಲೇಖಿಸಲಾದ ವಿಳಾಸ ಹುಡುಕಿಕೊಂಡು ಅನಿಲಕುಮಾರ ಅವರ ಮನೆಗೆ ಹೋದಾಗ ಸೀಮಾ ಸಿಂಗ್ ಅವರ ಪತ್ನಿ ಎಂಬುದು ಗೊತ್ತಾಯಿತು.
ಪೊಲೀಸರು ಸೀಮಾ ಸಿಂಗ್ ಜೊತೆ ಮಾತನಾಡಬೇಕು ಎಂದು ಹೇಳಿದರು. ಆಗ ಅನಿಲಕುಮಾರ, ಅವರು ಫೋನ್ ಇಲ್ಲಿಯೇ ಬಿಟ್ಟು ವೃಂದಾವನಕ್ಕೆ ಹೋಗಿದ್ದರು ಎಂದು ಹೇಳಿದರು. ಪೊಲೀಸರು ಅನುಮಾನಗೊಂಡು ಅನಿಲಕುಮಾರ ಅವರ ದೆಹಲಿಯಲ್ಲಿರುವ ಕಚೇರಿಗೆ ಹೋದರು. ಅಲ್ಲಿ ಅವರಿಗೆ ಅನಿಲಕುಮಾರ ಅತ್ತೆಯ (ಸೀಮಾ ಸಿಂಗ್ ತಾಯಿ) ಮೊಬೈಲ್ ಸಂಖ್ಯೆ ಸಿಕ್ಕಿತು. ಪೊಲೀಸರು ಅವರಿಗೆ ಕರೆ ಮಾಡಿದಾಗ ತಾವು ಒಂದು ತಿಂಗಳಿನಿಂದ ಮಗಳ ಜೊತೆ ಮಾತನಾಡಿಲ್ಲ, ಈ ಬಗ್ಗೆ ಆತಂಕವಾಗಿ ಅನಿಲಕುಮಾರ ಅವರನ್ನು ಕೇಳಿದಾಗ ಆತ ತಮ್ಮ ಮಗಳು ಜೈಪುರಕ್ಕೆ ಹೋಗಿದ್ದಾಳೆ ಎಂದು ತಿಳಿಸಿದ್ದ ಎಂದು ಪೊಲೀಸರಿಗೆ ಮಾಹಿತಿ ನೀಡಿದರು.
ನಂತರ ಸೀಮಾ ಸಿಂಗ್ ಅವರ ಪೋಷಕರು ತಮ್ಮ ಮಗಳ ಶವವನ್ನು ಗುರುತಿಸಿದರು. ಒಂದು ದಿನದ ನಂತರ, ಸೀಮಾ ಸಿಂಗ್ ಹಿರಿಯ ಮಗ ಕೂಡ ಶವವನ್ನು ಗುರುತಿಸಿದರು. ಸಿಂಗ್ ಅವರನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಪೊಲೀಸರು ಅನಿಲಕುಮಾರ ಮತ್ತು ಅವರ ಕಾವಲುಗಾರ ಶಿವಶಂಕೆ ಎಂಬಾತನನ್ನು ಬಂಧಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ