ಇಂಡಿಯನ್ ಪ್ರೀಮಿಯರ್ ಲೀಗ್ (IPL)ಒಂದು ದಿಟ್ಟ ಹೆಜ್ಜೆ ಇಟ್ಟಿದೆ. ವಿಶಿಷ್ಟ ಕ್ರಮದಲ್ಲಿ, ಲೀಗ್ 2025 ರ ಐಪಿಎಲ್ ಸಮಯದಲ್ಲಿ ತನ್ನ ಪ್ರಸಾರ ತಂಡದ ಭಾಗವಾಗಿ ನಾಲ್ಕು ಕಾಲುಗಳ ರೋಬೋಟ್ ನಾಯಿಯನ್ನು ಸೇರ್ಪಡೆ ಮಾಡಿಕೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಪೋಸ್ಟ್ ಮಾಡಿದ ವಿಶೇಷ ವೀಡಿಯೊದ ಮೂಲಕ ಈ ಘೋಷಣೆ ಮಾಡಲಾಗಿದೆ. ವೀಡಿಯೊದಲ್ಲಿ, ಮಾಜಿ ನ್ಯೂಜಿಲೆಂಡ್ ಕ್ರಿಕೆಟಿಗ ಮತ್ತು ಜನಪ್ರಿಯ ನಿರೂಪಕ ಡ್ಯಾನಿ ಮಾರಿಸನ್ ರೋಬೋಟಿಕ್ ನಾಯಿಯನ್ನು ಅನಾವರಣಗೊಳಿಸಿದರು ಮತ್ತು ಇದು ನಡೆಯುತ್ತಿರುವ ಐಪಿಎಲ್ 2025 ಋತುವಿನ ಪ್ರಸಾರ ತಂಡದ ಭಾಗವಾಗಲಿದೆ ಎಂದು ಬಹಿರಂಗಪಡಿಸಿದರು.
ಐಪಿಎಲ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ರೋಬೋಟಿಕ್ ನಾಯಿ ಮೊದಲ ಬಾರಿಗೆ ಕಾಣಿಸಿಕೊಂಡಿತು, ಅಲ್ಲಿ ಅದು ಆಟಗಾರರ ಅಭ್ಯಾಸದ ವೇಳೆ ಆಟಗಾರರೊಂದಿಗೆ ಸಂವಹನ ನಡೆಸುತ್ತಿರುವುದು ಕಂಡುಬಂದಿದೆ.
ನಾಲ್ಕು ಕಾಲಿನ ರೋಬೋಟ್ ತಕ್ಷಣವೇ ತನ್ನ ಭಾಗಗಳ ಚಲನೆಯಗಳ ಮೂಲಕ ಕ್ರಿಕೆಟಿಗರಲ್ಲಿ ಆಶ್ಚರ್ಯ ಮತ್ತು ಕುತೂಹಲ ಉಂಟುಮಾಡಿತು. ಆಶ್ಚರ್ಯಚಕಿತರಾದ ದೆಹಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ ಪಟೇಲ್ ಇದು ಏನು ಎಂದು ಉದ್ಗರಿಸಿದರು, ಮುಂಬೈ ಇಂಡಿಯನ್ಸ್‌ನ ವೇಗಿ ರೀಸ್ ಟಾಪ್ಲಿ “ಇದು ಯಾವ ರೀತಿಯ ನಾಯಿ?” ಎಂದು ತಮಾಷೆಯಾಗಿ ಕೇಳಿದರು. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ರೋಬೋಟ್ ಜೊತೆ ತೊಡಗಿಸಿಕೊಂಡು ಅದಕ್ಕೆ ಆಜ್ಞೆಗಳನ್ನು ಮಾಡಿದರು ಮತ್ತು ಅದು ಪ್ರತಿಕ್ರಿಯಿಸಿದಾಗ ಅದನ್ನು “ಒಳ್ಳೆಯ ಹುಡುಗ” ಎಂದು ಕರೆದರು.
ರೋಬೋಟ್ ನಾಯಿಯ ವೈಶಿಷ್ಟ್ಯಗಳು
ಈ ಯಂತ್ರವು ಕೇವಲ ಪ್ರದರ್ಶನಕ್ಕಾಗಿ ಅಲ್ಲ, ಇದು ಹೈ-ಡೆಫಿನಿಷನ್ ಕ್ಯಾಮೆರಾಗಳು ಮತ್ತು ಉತ್ತಮವಾಗಿ ಓಡಾಡುವ ಸಾಮರ್ಥ್ಯಗಳನ್ನು ಹೊಂದಿದೆ, ಅನುಭವಿ ನಿರೂಪಕ ಡ್ಯಾನಿ ಮಾರಿಸನ್ ಅಭಿಮಾನಿಗಳಿಗೆ ಅದರ ವೈಶಿಷ್ಟ್ಯಗಳನ್ನು ಹತ್ತಿರದಿಂದ ನೋಡಿ, ಸಂವಾದದ ಸಮಯದಲ್ಲಿ ಅದರ ಸಾಮರ್ಥ್ಯಗಳನ್ನು ಪ್ರದರ್ಶಿಸಿದರು. ಕಣ್ಗಾವಲು ಮತ್ತು ಪ್ರಸಾರ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿರುವ ರೋಬೋಟ್ ನಾಯಿ, ಮಾರಿಸನ್ ಅವರ ಧ್ವನಿ ಆಜ್ಞೆಗಳಿಗೆ ಪ್ರತಿಕ್ರಿಯಿಸಿರುವುದು ಕಂಡುಬಂದಿದೆ. ಅದು ಕ್ಯಾಮೆರಾದತ್ತ ಕೈ ಬೀಸಿತು, ನಿರೂಪಕ ಮತ್ತು ಪ್ರೇಕ್ಷಕರೊಂದಿಗೂ ಬೆರೆಯುವ ಸಾಮರ್ಥ್ಯವನ್ನು ಪ್ರದರ್ಶಿಸಿತು. ಮಾರಿಸನ್ ತನ್ನ ಎಂದಿನ ಪ್ರತಿಭೆ ಮತ್ತು ಹಾಸ್ಯದೊಂದಿಗೆ ರೋಬೋಟ್ ಅನ್ನು ಪರಿಚಯಿಸಿದರು, ಈ ಹೈಟೆಕ್ ಸೇರ್ಪಡೆ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿತು.
ರೋಬೋಟ್ ನಾಯಿಯು ಆಟಗಾರರನ್ನು ತನ್ನ ಯಾಂತ್ರಿಕ ಪಂಜದಿಂದ ಸ್ವಾಗತಿಸಿತು, ಎಲ್ಲರ ನಗುವಿಗೆ ಕಾರಣವಾಯಿತು. ರೋಬೋಟ್ ನಾಯಿಯನ್ನು ಹೆಸರಿಸಲು ಸಹಾಯ ಮಾಡುವ ಮೂಲಕ ಅನುಭವದ ಭಾಗವಾಗಲು ಮೋರಿಸನ್ ಅಭಿಮಾನಿಗಳನ್ನು ಆಹ್ವಾನಿಸಿದರು. ಅತ್ಯುತ್ತಮ ಹೆಸರಿನ ಸಲಹೆಗಳನ್ನು ಕಳುಹಿಸುವವರು ವಿಶೇಷ ಸಮಾರಂಭದಲ್ಲಿ ಭಾಗವಹಿಸಬಹುದು ಎಂದು ಅವರು ಘೋಷಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ