ಬೀಜಿಂಗ್: ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಯುದ್ಧ ತೀವ್ರಗೊಳ್ಳುತ್ತಿದ್ದಂತೆ, ಅಮೆರಿಕದ ವಾಯುಯಾನ ದೈತ್ಯ ಬೋಯಿಂಗ್ ಕಂಪನಿಗಳು ಜೆಟ್‌ಗಳನ್ನು ವಿತರಣೆ ಮಾಡಿದ್ದನ್ನು ತೆಗೆದುಕೊಳ್ಳದಂತೆ ಚೀನಾ ತನ್ನ ವಿಮಾನಯಾನ ಸಂಸ್ಥೆಗಳಿಗೆ ಆದೇಶಿಸಿದೆ ಎಂದು ಮಂಗಳವಾರ ವರದಿಯೊಂದು ತಿಳಿಸಿದೆ.
ಜನವರಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಾಗಿನಿಂದ, ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಾದ ಅಮೆರಿಕ ಹಾಗೂ ಚೀನಾ ಪ್ರತಿ ಸುಂಕದ ಯುದ್ಧದಲ್ಲಿ ಸಿಲುಕಿಕೊಂಡಿವೆ, ಅಮೆರಿಕ ಈಗ ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇಕಡಾ 145 ರಷ್ಟು ಸುಂಕವನ್ನು ವಿಧಿಸುತ್ತಿದೆ.
ಚೀನಾವು ಅಮೆರಿಕದ ಆಮದುಗಳ ಮೇಲೆ ಶೇಕಡಾ 125 ರಷ್ಟು ಪ್ರತೀಕಾರದ ಸುಂಕಗಳನ್ನು ವಿಧಿಸಿದೆ.
ಈ ವಿಷಯದ ಬಗ್ಗೆ ತಿಳಿದಿರುವ ಜನರನ್ನು ಉಲ್ಲೇಖಿಸಿ ಚೀನಾ ವಿಮಾನಯಾನ ಸಂಸ್ಥೆಗಳಿಗೆ ಬೋಯಿಂಗ್ ವಿಮಾನಗಳ ವಿತರಣೆ ಮಾಡಿರುವುದನ್ನು ತೆಗೆದುಕೊಳ್ಳದಂತೆ ಆದೇಶಿಸಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ಮಂಗಳವಾರ ವರದಿ ಮಾಡಿದೆ.
ಅಮೆರಿಕ ಕಂಪನಿಗಳಿಂದ ವಿಮಾನ-ಸಂಬಂಧಿತ ಉಪಕರಣಗಳು ಮತ್ತು ಬಿಡಿ ಭಾಗಗಳ ಖರೀದಿಯನ್ನು ಸ್ಥಗಿತಗೊಳಿಸುವಂತೆ ಚೀನಾ ತನ್ನ ವಿಮಾನ ವಾಹಕ ಕಂಪನಿಗಳಿಗೆ ತಿಳಿಸಿದೆ ಎಂದು ಹಣಕಾಸು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಮೆರಿಕದ ಆಮದುಗಳ ಮೇಲಿನ ಬೀಜಿಂಗ್‌ನ ಪ್ರತಿ ಸುಂಕಗಳು ವಿಮಾನಗಳು ಮತ್ತು ಭಾಗಗಳ ಖರೀದಿಯಲ್ಲಿ ತಗಲುವ ವೆಚ್ಚದಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಬಹುದಿತ್ತು. ಹೀಗಾಗಿ ಬೋಯಿಂಗ್ ಜೆಟ್‌ಗಳನ್ನು ಗುತ್ತಿಗೆಗೆ ಪಡೆಯುವ ಮತ್ತು ಹೆಚ್ಚಿನ ವೆಚ್ಚ ತಗಲುವ ವಾಹಕಗಳಿಗೆ ಸಹಾಯ ಮಾಡುವ ಬಗ್ಗೆ ಚೀನಾ ಸರ್ಕಾರ ಚಿಂತಿಸುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ಹೇಳಿದೆ.
ಟ್ರಂಪ್‌ರ ಸುಂಕಗಳು ವಿಶ್ವ ಮಾರುಕಟ್ಟೆಗಳನ್ನು ಅಲುಗಾಡಿಸಿದೆ. ಅಮೆರಿಕ ಕಳೆದ ವಾರ ಪ್ರತಿ ಸುಂಕ ಏರಿಕೆಗಳನ್ನು ಹಠಾತ್ ೯೦ ದಿನಗಳ ಕಾಲ ಸ್ಥಗಿತಗೊಳಿಸುವುದಾಗಿ ಘೋಷಿಸಿತು. ಆದರೆ ಚೀನಾ ತಕ್ಷಣದ ವಿನಾಯಿತಿ ನೀಡಲಿಲ್ಲ.
ಸ್ಮಾರ್ಟ್‌ಫೋನ್‌ಗಳು, ಸೆಮಿಕಂಡಕ್ಟರ್‌ಗಳು ಮತ್ತು ಕಂಪ್ಯೂಟರ್‌ಗಳಂತಹ ಉನ್ನತ-ಮಟ್ಟದ ತಂತ್ರಜ್ಞಾನ ಸರಕುಗಳಿಗೆ ಚೀನಾ ಮತ್ತು ಇತರರ ವಿರುದ್ಧದ ಇತ್ತೀಚಿನ ಸುಂಕಗಳಿಂದ ವಿನಾಯಿತಿಗಳನ್ನು ಯುಎಸ್ ಅಧಿಕಾರಿಗಳು ಶುಕ್ರವಾರ ಘೋಷಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ