ಮೈ ಜುಂ ಎನ್ನುವ ವೀಡಿಯೊ…| ಬೆಂಗಳೂರಲ್ಲಿ ಲಾರಿ ಹಿಂದಿಕ್ಕಲು ಹೋಗಿ ಮೂರ್ನಾಲ್ಕು ಪಲ್ಟಿ ಹೊಡೆದ ನೀರಿನ ಟ್ಯಾಂಕರ್…!

ಬೆಂಗಳೂರಿನಲ್ಲಿ ಟ್ರಕ್ ಅನ್ನು ಹಿಂದಿಕ್ಕಲು ಹೋಗಿ ನೀರಿನ ಟ್ಯಾಂಕರ್ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿದೆ. ರಸ್ತೆಯ ಅಂಚಿನಿಂದ ಎಡಕ್ಕೆ ತಿರುಗುವಾಗ ಟ್ರಕ್ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡ ನಂತರ ಟ್ರಕ್‌ ಪಲ್ಟಿಯಾಗಿದ್ದು, ಐದಾರು ಸಲ ಪಲ್ಟಿಯಾಗಿ ಬಿದ್ದಿದೆ.
ಎನ್‌ಡಿಟಿವಿ (NDTV) ವರದಿಯ ಪ್ರಕಾರ, ಸೋಮವಾರ ಮಧ್ಯಾಹ್ನ ದೊಮ್ಮಸಂದ್ರ ಬಳಿ ಈ ಘಟನೆ ಸಂಭವಿಸಿದೆ. ನೀರಿನ ಟ್ಯಾಂಕರ್ ವರ್ತೂರಿನಿಂದ ದೊಮ್ಮಸಂದ್ರಕ್ಕೆ ಪ್ರಯಾಣಿಸುತ್ತಿತ್ತು ಮತ್ತು ಎಂಟು ಕಿಲೋಮೀಟರ್ ದೂರವನ್ನು ಕ್ರಮಿಸಿತ್ತು.

ಹಿಂಭಾಗದ ಡ್ಯಾಶ್ ಕ್ಯಾಮೆರಾ ಅಪಘಾತದ ಕ್ಷಣವನ್ನು ಸೆರೆಹಿಡಿದಿದೆ, ನೀರಿನ ಟ್ಯಾಂಕರ್ ನಿಯಂತ್ರಣ ಕಳೆದುಕೊಂಡು ಎಡಭಾಗಕ್ಕೆ ಉರುಳಿ ಕೊನೆಗೆರಸ್ತೆ ಛೇದಕದಲ್ಲಿ ನಿಂತಿದ್ದನ್ನು ವೀಡಿಯೊ ತೋರಿಸುತ್ತದೆ. ಟ್ಯಾಂಕರ್‌ ಪಲ್ಟಿಯಾದ ರಭಸಕ್ಕೆ ಟ್ಯಾಂಕ್‌ ಒಡೆದು, ರಸ್ತೆಯಲ್ಲಿ ನೀರು ಚೆಲ್ಲಿದೆ.
ಟ್ಯಾಂಕರ್ ಅನ್ನು ಹಿಂಬಾಲಿಸಿದ ಟ್ರಕ್ ಸಕಾಲದಲ್ಲಿ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ಚಾಲಕ ಮತ್ತು ಟ್ಯಾಂಕರ್‌ನಲ್ಲಿದ್ದ ಒಬ್ಬ ಪ್ರಯಾಣಿಕ ಇಬ್ಬರೂ ಗಾಯಗೊಂಡರು ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.
ಏಪ್ರಿಲ್ 2 ರಂದು ನಡೆದ ಪ್ರತ್ಯೇಕ ಘಟನೆಯಲ್ಲಿ, ಚಳ್ಳಕೆರೆ ಮತ್ತು ಬಳ್ಳಾರಿ ನಡುವಿನ ರಾಷ್ಟ್ರೀಯ ಹೆದ್ದಾರಿ 150A ನಲ್ಲಿ ಕಾರು 15 ಬಾರಿ ಪಲ್ಟಿಯಾಗಿ ಅಪಘಾತಕ್ಕೀಡಾಗಿ ಮೂವರು ಸಾವವಿಗೀಡಾಗಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದರು.

ಪ್ರಮುಖ ಸುದ್ದಿ :-   ಧಾರವಾಡದಲ್ಲೂ ಜನಿವಾರ ಕತ್ತರಿಸಿ ಸಿಇಟಿ ಬರೆಸಿದ ಸಿಬ್ಬಂದಿ...!?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement