ಪಾಕಿಸ್ತಾನ ಸೇನೆಯ ವಕ್ತಾರ ಅಹ್ಮದ್ ಶರೀಫ್ ಚೌಧರಿ ವಿಶ್ವಸಂಸ್ಥೆಯಿಂದ ಘೋಷಿತ ಭಯೋತ್ಪಾದಕನ ಮಗ…!

ಪಾಕಿಸ್ತಾನದ ಮಿಲಿಟರಿಯು ಜಿಹಾದಿ ಮತ್ತು ಭಯೋತ್ಪಾದಕ ಅಂಶಗಳಿಂದ ಬೇರ್ಪಡಿಸಲಾಗದಂತೆ ಹೆಣೆದುಕೊಂಡಿದೆ ಎಂಬುದಕ್ಕೆ ಒಂದು ಪ್ರಮುಖ ಉದಾಹರಣೆಯೆಂದರೆ, ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR)ನ ಮಹಾನಿರ್ದೇಶಕರಾದ ತ್ರಿ-ಸ್ಟಾರ್‌ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ. ಭಾರತ-ಪಾಕಿಸ್ತಾನ ಮಿಲಿಟರಿ ಬಿಕ್ಕಟ್ಟಿನ ಬಗ್ಗೆ ಜಗತ್ತಿಗೆ ಮಾಹಿತಿ ನೀಡುತ್ತಿರುವ ಚೌಧರಿ, ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಅವರ ಸಹಾಯಕರಾಗಿದ್ದ ಘೋಷಿತ ಭಯೋತ್ಪಾದಕ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಮಗ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಭಾರತವು ಭಯೋತ್ಪಾದಕರ ವಿರುದ್ಧ ನಡೆಸುತ್ತಿರುವ ಹೋರಾಟದ ವಿರುದ್ಧ ಪಾಕಿಸ್ತಾನದ ಮಿಲಿಟರಿಯು ತಪ್ಪು ಮಾಹಿತಿಯನ್ನು ಹರಡುವ ಕೆಲಸ ಮಾಡುತ್ತಿದ್ದರೂ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್-ಖೈದಾ ನಿರ್ಬಂಧ ಸಮಿತಿಯ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಭಯೋತ್ಪಾದಕನ ಡಿಎನ್‌ಎ ಲೆಫ್ಟಿನೆಂಟ್ ಜನರಲ್ ಚೌಧರಿ ಅವರಲ್ಲಿದೆ ಎಂಬುದು ಈಗ ಬಯಲಾಗಿದೆ. ಪಾಕಿಸ್ತಾನವನ್ನು “ಭಯೋತ್ಪಾದನೆಯ ಅಸಹಾಯಕ ಬಲಿಪಶು” ಎಂದು ಬಿಂಬಿಸಲು ಪ್ರಯತ್ನಿಸುತ್ತಾ, ಪ್ರಪಂಚದ ಮುಂದೆ ಪದೇ ಪದೇ ಕಾಣಿಸಿಕೊಳ್ಳುವವರು ಅದೇ ಲೆಫ್ಟಿನೆಂಟ್ ಜನರಲ್ ಚೌಧರಿ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕನ ಮಗ ಎಂಬುದು ಪಾಕಿಸ್ತಾನಿ ಸೇನೆಯ ಮನಸ್ಥಿತಿಗೆ ಮತ್ತೊಂದು ಉದಾಹರಣೆಯಾಗಿದೆ.
ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ಚೌಧರಿ ಪಾಕಿಸ್ತಾನದ ಉನ್ನತ ಮಿಲಿಟರಿ ಅಧಿಕಾರಿಗಳಲ್ಲಿ ಒಬ್ಬರು. ಪಾಕಿಸ್ತಾನಿ ಸೇನೆಯಲ್ಲಿ ಜಿಹಾದಿ ಅಂಶಗಳ ಮತ್ತೊಂದು ಉದಾಹರಣೆಯೆಂದರೆ ಅದರ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್. ಮುನೀರ್ ತಂದೆ ಶಿಕ್ಷಕ-ಮೌಲ್ವಿಯಾಗಿದ್ದರೆ, ಚೌಧರಿ ತಂದೆ ಪರಮಾಣು ವಿಜ್ಞಾನಿಯಾಗಿದ್ದ, ಆತ ನಂತರ ದೊಡ್ಡ ಭಯೋತ್ಪಾದಕನಾದ.
ಅಬ್ದುಲ್ ಖದೀರ್ ಖಾನ್ ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಪಿತಾಮಹ ಎಂದು ಪ್ರಸಿದ್ಧರಾದರು, ಲೆಫ್ಟಿನೆಂಟ್ ಜನರಲ್ ಚೌಧರಿ ತಂದೆ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಪಾಕಿಸ್ತಾನ “ಡರ್ಟಿ ಬಾಂಬ್” ಅನ್ನು ಅಭಿವೃದ್ಧಿಪಡಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದ.

ವಂಚಕ ಪಾಕಿಸ್ತಾನಿ ವಿಜ್ಞಾನಿಗಳ ಮೇಲೆ ನಿಗಾ ಇಟ್ಟಿದ್ದ ಅಮೆರಿಕ ಗುಪ್ತಚರವು ಪರಮಾಣು ವಿಜ್ಞಾನಿ ಸುಲ್ತಾನ್ ಬಶೀರುದ್ದೀನ್ ಮಹಮೂದ್, ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ನನ್ನು ಭೇಟಿಯಾಗಿದ್ದ ಎಂದು ತಿಳಿದು ಗಾಬರಿಗೊಂಡಿತು. ಅಮೆರಿಕ ಬಯಸದ ಕೊನೆಯ ವಿಷಯವೆಂದರೆ ಅಲ್-ಖೈದಾ ಅಥವಾ ಅದರ ಸಹಚರರಿಗೆ ಪರಮಾಣು ಬಾಂಬ್ ಗೊತ್ತಗಬಾರದು ಎಂಬುದು.
ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಮೇಲಿನ ದಾಳಿ 2001 ರ ಸೆಪ್ಟೆಂಬರ್‌ನಲ್ಲಿ ನಡೆಯಿತು, ಮತ್ತು ಆ ವರ್ಷದ ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆ ಸಮಿತಿಯು ಮಹಮೂದ್‌ನನ್ನು ಅಧಿಕೃತವಾಗಿ ಭಯೋತ್ಪಾದಕ ಎಂದು ಘೋಷಿಸಿತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್-ಖೈದಾ ನಿರ್ಬಂಧ ಸಮಿತಿಯ ಪುಟವು ಲೆಫ್ಟಿನೆಂಟ್ ಜನರಲ್ ಚೌಧರಿ ತಂದೆಯನ್ನು “ಮಹಮೂದ್ ಸುಲ್ತಾನ್ ಬಶೀರ್-ಉದ್-ದಿನ್” ಎಂದು ಪಟ್ಟಿ ಮಾಡಿದೆ.
ಅಲ್-ಖೈದಾ, ಅದರ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಮತ್ತು ತಾಲಿಬಾನ್ ಜೊತೆಗಿನ ಸಂಬಂಧಕ್ಕಾಗಿ ಡಿಸೆಂಬರ್ 24, 2001 ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧ ಸಮಿತಿಯು ಮಹಮೂದ್ ಅವರನ್ನು ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಿದೆ.

ಆರೋಪಗಳು ಗಂಭೀರವಾಗಿವೆ…
“ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧ ಸಮಿತಿಯ ಪ್ರಕಾರ,” “ಒಸಾಮಾ [ಒಸಾಮಾ] ಬಿನ್ ಲಾಡೆನ್, ಅಲ್-ಖೈದಾ ಮತ್ತು ತಾಲಿಬಾನ್‌ನ ಕೃತ್ಯಗಳು ಅಥವಾ ಚಟುವಟಿಕೆಗಳೊಂದಿಗೆ, ಜೊತೆಗೂಡಿ, ಅವರ ಪರವಾಗಿ ಅಥವಾ ಬೆಂಬಲ ನೀಡುವ ಮೂಲಕ,” “ಶಸ್ತ್ರಾಸ್ತ್ರಗಳು ಮತ್ತು ಸಂಬಂಧಿತ ವಸ್ತುಗಳನ್ನು ಪೂರೈಸುವುದು, ಮಾರಾಟ ಮಾಡುವುದು ಅಥವಾ ವರ್ಗಾಯಿಸುವುದು” ಅಥವಾ “ಇಲ್ಲದಿದ್ದರೆ ಬೆಂಬಲಿಸುವ” ಕೃತ್ಯಗಳು ಅಥವಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಮಹಮೂದ್ ನನ್ನು ನಿಷೇಧಿಸಲಾಗಿದೆ.
ಇದಕ್ಕಾಗಿಯೇ ಪಾಕಿಸ್ತಾನದ ತಪ್ಪು ಮಾಹಿತಿ ಅಭಿಯಾನದ ಹಿಂದಿನ ಮೆದುಳಿನ ಲೆಫ್ಟಿನೆಂಟ್ ಜನರಲ್ ಚೌಧರಿಯ ತಂದೆಯ ಬಗ್ಗೆ ಪಶ್ಚಿಮ ದೇಶಗಳು ಗಾಬರಿಗೊಂಡಿದ್ದವು.
2009 ರ ನ್ಯೂಯಾರ್ಕ್ ಟೈಮ್ಸ್ ಮ್ಯಾಗಜೀನ್‌ನ ವರದಿಯ ಪ್ರಕಾರ. ಮಹಮೂದ್ ಪಾಕಿಸ್ತಾನದಲ್ಲಿ ತನ್ನ ಸಹೋದ್ಯೋಗಿಗಳನ್ನು ಮೊದಲೇ ಭಯಭೀತಗೊಳಿಸಿದ್ದ. ಆತನ ತೀವ್ರಗಾಮಿ ಧಾರ್ಮಿಕತೆ, ಇಸ್ಲಾಮಿಕ್ ಉಗ್ರವಾದದ ಬಗ್ಗೆ ಸಹಾನುಭೂತಿ ಆತನ ಸಹೋದ್ಯೋಗಿಗಳನ್ನು ಹೆದರಿಸಿತ್ತು.”

ವಿಶ್ವಸಂಸ್ಥೆಯ ಅಲ್-ಖೈದಾ ನಿರ್ಬಂಧ ಸಮಿತಿ ವರದಿಯ ಪ್ರಕಾರ, ಸುಲ್ತಾನ್ ಬಶೀರುದ್ದೀನ್ ಮಹಮೂದ್ ಸ್ಥಾಪನೆ ಮಾಡಿ ನಿರ್ದೇಶಕರಾದ ಉಮ್ಮಾ ತಮೀರ್ ಇ-ನೌ (UTN) ಲಾಭರಹಿತ ಸಂಸ್ಥೆಯಡಿ ಒಸಾಮಾ ಬಿನ್ ಲಾಡೆನ್ ಮತ್ತು ತಾಲಿಬಾನ್‌ಗೆ ರಾಸಾಯನಿಕ, ಜೈವಿಕ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿಯನ್ನು ಒದಗಿಸಿತ್ತು. “ತಮೀರ್ ಇ-ನೌ (UTN) ಸಂಸ್ಥೆಯಡಿ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ಸಮಯದಲ್ಲಿ, ಬಶೀರ್-ಉದ್-ದಿನ್ ಬಿನ್ ಲಾಡೆನ್ ಮತ್ತು ಅಲ್-ಖೈದಾ ನಾಯಕರನ್ನು ಭೇಟಿಯಾದ ಮತ್ತು ಪರಮಾಣು, ರಾಸಾಯನಿಕ ಮತ್ತು ಜೈವಿಕ ಶಸ್ತ್ರಾಸ್ತ್ರಗಳ ಬಗ್ಗೆ ಚರ್ಚಿಸಿದ್ದ” ಎಂದು ಅದು ಹೇಳುತ್ತದೆ.
2001 ರಲ್ಲಿ, ಸುಲ್ತಾನ್ ಬಶೀರುದ್ದೀನ್ ಮಹಮೂದ್ ಆಗಿನ ತಾಲಿಬಾನ್ ಮುಖ್ಯಸ್ಥ ಮುಲ್ಲಾ ಒಮರ್ ನನ್ನು ಸಹ ಭೇಟಿಯಾಗಿದ್ದ. ನಂತರದ ಸಭೆಯ ಸಮಯದಲ್ಲಿ, ಒಸಾಮಾ ಬಿನ್ ಲಾಡೆನ್‌ನ ಸಹಚರನೊಬ್ಬ ತನ್ನ ಬಳಿ ಪರಮಾಣು ವಸ್ತುವಿದೆ ಮತ್ತು ಅದನ್ನು ಶಸ್ತ್ರಾಸ್ತ್ರ ತಯಾರಿಸಲು ಹೇಗೆ ಬಳಸಬೇಕೆಂದು ತಿಳಿಯಲು ಬಯಸಿದ್ದಾಗಿ ಸೂಚಿಸಿದ್ದ.
“ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮಕ್ಕೆ ಅಗತ್ಯವಾದ ಮೂಲಸೌಕರ್ಯ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಪರಿಣಾಮಗಳ ಬಗ್ಗೆ ಬಶೀರುದ್ದೀನ್ ಮಾಹಿತಿಯನ್ನು ಒದಗಿಸಿದ್ದ” ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿ (UNSC) ವರದಿ ತಿಳಿಸಿದೆ. ಮಹಮೂದ್ ನನ್ನು 2001 ರಲ್ಲಿ ಬಂಧಿಸಲಾಯಿತು, ಮತ್ತು ಎಫ್‌ಐ (FBI) ಆದೇಶದ ಮೇರೆಗೆ ತನಿಖೆ ಮಾಡಲಾಯಿತು ಮತ್ತು ಒಸಾಮಾ ಬಿನ್ ಲಾಡೆನ್‌ರನ್ನು ಭೇಟಿಯಾಗಿದ್ದಾಗಿ ಒಪ್ಪಿಕೊಂಡ.

ಒಸಾಮ ಜಗತ್ತು ಕಂಡ ಅತಿದೊಡ್ಡ ಇಸ್ಲಾಮಿಕ್ ಭಯೋತ್ಪಾದಕ. ಅಮೆರಿಕದ ನೆಲದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾದ 9/11 ದಾಳಿಯ ಹಿಂದಿನ ಪ್ರಮುಖ ರೂವಾರಿ ಈತ. ಒಸಾಮಾ ಲಾಡೆನ್‌ ಮತ್ತು ಮಹಮೂದ್ ಭೇಟಿಯು ಒಂದೇ ವಿನಾಶಕಾರಿ ಗುರಿಯತ್ತ ಕೆಲಸ ಮಾಡುವ ಎರಡು ವಂಚಕ ಮನಸ್ಸುಗಳ ಸಭೆಯಂತಿತ್ತು. ನಾಗರಿಕ ಜಗತ್ತಿಗೆ ಹಾನಿ ಮಾಡಲು ಅಲ್-ಖೈದಾಗೆ ಬೇಕಾಗಿದ್ದ ಪರಮಾಣು ಜ್ಞಾನ ಮಹಮೂದ್‌ಗೆ ಇತ್ತು.
ಅಬ್ದುಲ್ ಖಾದೀರ್ ಖಾನ್ ನೆದರ್‌ಲ್ಯಾಂಡ್ಸ್‌ನಿಂದ ಕದ್ದಿದ್ದ ನೀಲನಕ್ಷೆಗಳ ಆಧಾರದ ಮೇಲೆ ಯುರೇನಿಯಂ ಅನ್ನು ಉತ್ಕೃಷ್ಟಗೊಳಿಸಲು ಮತ್ತು ಅನಿಲ ಕೇಂದ್ರಾಪಗಾಮಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪಾಕಿಸ್ತಾನದ ಪ್ರಯತ್ನಗಳನ್ನು ಮಹಮೂದ್ ಮುನ್ನಡೆಸಿದ್ದ. ನಂತರ, 2009 ರ ನ್ಯೂಯಾರ್ಕ್ ಟೈಮ್ಸ್ ಮ್ಯಾಗಜೀನ್‌ನ ಲೇಖನದ ಪ್ರಕಾರ, ಮಹಮೂದ್ ಪ್ಲುಟೋನಿಯಂ ಬಾಂಬ್ ಅಭಿವೃದ್ಧಿ ಪಡಿಸಲು ಮುಂದಾಗಿದ್ದ.
ಆಮೂಲಾಗ್ರ ಇಸ್ಲಾಮಿಸ್ಟ್ ದೃಷ್ಟಿಕೋನಗಳನ್ನು ಹೊಂದಿದ್ದ ಪರಮಾಣು ವಿಜ್ಞಾನಿ ಸುಲ್ತಾನ್‌ ತಾಲಿಬಾನ್‌ನಂತಹ ಭಯೋತ್ಪಾದಕ ಗುಂಪುಗಳಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದ.

ತಾಲಿಬಾನ್  ಕಾಬೂಲ್‌ನಿಂದ ಪಲಾಯನ ಮಾಡಿದ ನಂತರ ಅವರ ಮಾರಕ ವಿನ್ಯಾಸಗಳನ್ನು ಪುರಾವೆಯಾಗಿ ಬಹಿರಂಗಪಡಿಸಲಾಯಿತು.
2001 ರ ಸೆಪ್ಟೆಂಬರ್‌ನಲ್ಲಿ, ಯುಟಿಎನ್‌ನ ಸ್ಥಳಗಳನ್ನು ಶೋಧಿಸಲಾಯಿತು. ಶೋಧಗಳು ಪರಮಾಣು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಮೂಲಭೂತ ಪರಮಾಣು ಭೌತಶಾಸ್ತ್ರದ ರೂಪರೇಷೆಗಳನ್ನು ನೀಡುವ ದಾಖಲೆಗಳನ್ನು ನೀಡಿತು. ನಂತರ ಅಮೆರಿಕದ ಒತ್ತಡದ ಮೇರೆಗೆ, ಪಾಕಿಸ್ತಾನದ ಕುಖ್ಯಾತ ಗೂಢಚಾರ ಸಂಸ್ಥೆ, ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ), 2001 ರಲ್ಲಿ ಮಹಮೂದ್‌ನನ್ನು ಬಂಧಿಸಿ ಪ್ರಶ್ನಿಸಬೇಕಾಯಿತು.
ಆದ್ದರಿಂದ, ಡಿಜಿ ಐಎಸ್‌ಪಿಆರ್ ಲೆಫ್ಟಿನೆಂಟ್ ಜನರಲ್ ಚೌಧರಿ ಪಾಕಿಸ್ತಾನದ ತಪ್ಪು ಮಾಹಿತಿಯನ್ನು ಹರಡುವುದನ್ನು ಜಗತ್ತು ಕೇಳಿದಾಗ, ಆತ ಅಲ್-ಖೈದಾಗೆ ಪರಮಾಣು ಬಾಂಬ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಜಗತ್ತನ್ನು ನಾಶಮಾಡಲು ಬಯಸಿದ್ದ ವಿಜ್ಞಾನಿ-ಭಯೋತ್ಪಾದಕನ ಮಗ ಎಂಬುದನ್ನು ಉಲ್ಲೇಖನೀಯ. ಪಾಕಿಸ್ತಾನಿ ಸೇನೆಯಲ್ಲಿ ಜಿಹಾದಿ ಮನಸ್ಥಿತಿಯ ಡಿಎನ್‌ಎಗೆ ಲೆಫ್ಟಿನೆಂಟ್ ಜನರಲ್ ಚೌಧರಿ ಒಂದು ಪ್ರಮುಖ ಉದಾಹರಣೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement