ಇತ್ತೀಚಿನ ವಜಾಗೊಳಿಸುವಿಕೆಯಲ್ಲಿ, ಟೆಕ್ ದೈತ್ಯ ಮೈಕ್ರೋಸಾಫ್ಟ್ ಕಂಪನಿ ಸುಮಾರು 6,000 ಉದ್ಯೋಗಿಗಳನ್ನು ಅಥವಾ ಅದರ ಒಟ್ಟು ಉದ್ಯೋಗಿಗಳಲ್ಲಿ 3% ರಷ್ಟು ಜನರನ್ನು ಕೆಲಸದಿಂದ ತೆಗೆದುಹಾಕಿದೆ. ಅನೇಕ ಉದ್ಯೋಗಿಗಳನ್ನು ತಕ್ಷಣವೇ ಹೊರಹೋಗುವಂತೆ ಸೂಚಿಸಲಾಗಿದೆ.
“ನಮ್ಮನ್ನು ತಕ್ಷಣ ಕೆಲಸ ನಿಲ್ಲಿಸಲು ಮತ್ತು ಕಚೇರಿಯಿಂದ ಹೊರಗೆ ಹೋಗಲು (ಅಧಿಸೂಚನೆ) ಸೂಚಿಸಲಾಯಿತು. ಆದರೆ ನಾನು ಸ್ವಲ್ಪ ಸಮಯ ಇರಲು ನಿರ್ಧರಿಸಿದೆ – ಸಭೆಗಳಿಗೆ ಹಾಜರಾಗುವುದು, ವಿದಾಯ ಹೇಳುವುದು, ನನ್ನಿಂದ ಸಾಧ್ಯವಾದದ್ದನ್ನು ಮುಗಿಸುವುದು. ಅದು ನನಗೆ ಸರಿ ಅನಿಸಿತು,” ಎಂದು ಮೈಕ್ರೋಸಾಫ್ಟ್‌ನ ಎಐ (AI) ನಿರ್ದೇಶಕಿ ಗೇಬ್ರಿಯೆಲಾ ಡಿ ಕ್ವಿರೋಜ್ ಹೇಳಿದ್ದಾರೆ. ವಜಾಗೊಳಿಸಲ್ಪಟ್ಟ ಅವರು 6,000 ಉದ್ಯೋಗಿಗಳಲ್ಲಿ ಒಬ್ಬರು. 2023 ರ ಆರಂಭದಲ್ಲಿ, ಕಂಪನಿಯು ಜಾಗತಿಕವಾಗಿ ಅದರ ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಸುಮಾರು 5% ರಷ್ಟು 10,000 ಜನರನ್ನು ವಜಾಗೊಳಿಸಿತು.
ವರದಿಗಳ ಪ್ರಕಾರ, ಹೊಸ ಉದ್ಯೋಗ ಕಡಿತವು ಕಾರ್ಯಕ್ಷಮತೆಗೆ ಸಂಬಂಧಿಸಿಲ್ಲ ಮತ್ತು ಕಂಪನಿಯು ಸಾಂಸ್ಥಿಕ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ.
ಈ ಕಡಿತವು ಎಷ್ಟು ಭಾರತೀಯ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 1990 ರಲ್ಲಿ ತನ್ನ ಭಾರತೀಯ ಕಾರ್ಯಾಚರಣೆಯನ್ನು ಆರಂಭಿಸಿದ ಮೈಕ್ರೋಸಾಫ್ಟ್, 11 ನಗರಗಳಲ್ಲಿ 20,000 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ. ಭಾರತದಲ್ಲಿ ಉದ್ಯೋಗಿಗಳು ಮಾರಾಟ ಮತ್ತು ಮಾರುಕಟ್ಟೆ, ಸಂಶೋಧನೆ, ಅಭಿವೃದ್ಧಿ ಮತ್ತು ಗ್ರಾಹಕ ಸೇವೆಗಳು ಮತ್ತು ಬೆಂಬಲದಲ್ಲಿ ತೊಡಗಿಸಿಕೊಂಡಿದ್ದಾರೆ.
ಟೆಕ್ ಉದ್ಯಮದಾದ್ಯಂತ ಉದ್ಯೋಗ ಕಡಿತದ ಹೊಸ ಅಲೆಯ ಮಧ್ಯೆ ಮೈಕ್ರೋಸಾಫ್ಟ್‌ನ ವಜಾಗೊಳಿಸುವಿಕೆಗಳು ಬಂದಿವೆ. ಕಳೆದ ವಾರವಷ್ಟೇ, ಸೈಬರ್ ಸೆಕ್ಯುರಿಟಿ ಸಂಸ್ಥೆ ಕ್ರೌಡ್‌ಸ್ಟ್ರೈಕ್ ಸಿಬ್ಬಂದಿಯಲ್ಲಿ 5%ರಷ್ಟು ಕಡಿತವನ್ನು ಘೋಷಿಸಿತು.
ನಿಮ್ಮ ಕಾಮೆಂಟ್ ಬರೆಯಿರಿ