ನೀವು ಭಾರತದಲ್ಲಿ ಆಪಲ್ ಸಾಧನ ಉತ್ಪಾದನೆ ಮಾಡ್ಬೇಡಿ..; ಆಪಲ್ ಸಿಇಒಗೆ ಡೊನಾಲ್ಡ್ ಟ್ರಂಪ್ ಒತ್ತಡ : ಅಮೆರಿಕ ವರಸೆ ಬದಲಿಸಿದ್ದು ಯಾಕೆ..?

ದೋಹಾ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಪಲ್ ಸಿಇಒ ಟಿಮ್ ಕುಕ್ ಅವರ ಜೊತೆ ನೇರ ಸಂಭಾಷಣೆ ನಡೆಸಿದ್ದು, ಭಾರತೀಯ ಮಾರುಕಟ್ಟೆಗೆ ಸೇವೆ ಸಲ್ಲಿಸುವ ಉದ್ದೇಶವನ್ನು ಹೊರತುಪಡಿಸಿ, ಭಾರತದಲ್ಲಿ ಆಪಲ್ ಉತ್ಪಾದನಾ ಹೆಜ್ಜೆಗುರುತನ್ನು ವಿಸ್ತರಿಸುವುದು ಬೇಡ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.
“ಭಾರತದಲ್ಲಿ ನೀವು ನಿರ್ಮಾಣ ಮಾಡುವುದರ ಬಗ್ಗೆ ನಮಗೆ ಆಸಕ್ತಿ ಇಲ್ಲ, ಅವರು ತಮ್ಮನ್ನು ತಾವು ನೋಡಿಕೊಳ್ಳಬಹುದು ಎಂದು ಆಪಲ್ ಸಿಇಒ ಟಿಮ್ ಕುಕ್ ಅವರಿಗೆ ಹೇಳಿದ್ದೆವು” ಎಂದು ಟ್ರಂಪ್ ಮೇ 15 ರಂದು ಕತಾರ್‌ನ ದೋಹಾದಲ್ಲಿ ನಡೆದ ವ್ಯವಹಾರ ಕಾರ್ಯಕ್ರಮದಲ್ಲಿ (business event) ಹೇಳಿದರು ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ.
ಟಿಮ್ ಕುಕ್ ಅವರೊಂದಿಗೆ “ಸಣ್ಣ ಸಮಸ್ಯೆ” ಇದೆ. “ಅವರು ನನ್ನ ಸ್ನೇಹಿತ, ನಾನು ಅವರಿಗೆ ಹೇಳಿದೆ, ನಾನು ನಿಮ್ಮನ್ನು ತುಂಬಾ ಚೆನ್ನಾಗಿ ನಡೆಸಿಕೊಳ್ಳುತ್ತಿದ್ದೇನೆ. ನೀವು $500 ಬಿಲಿಯನ್ ಗಳಿಸುತ್ತೀರಿ, ಆದರೆ ನೀವು ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎಂಬುದನ್ನು ತಿಳಿದುಕೊಂಡೆ. ನೀವು ಭಾರತದಲ್ಲಿ ಹೂಡಿಕೆ ಮಾಡುವುದು ಬೇಡ, ನೀವು ಭಾರತವನ್ನು ನೋಡಿಕೊಳ್ಳಲು ಬಯಸಿದರೆ, ನೀವು ಭಾರತದಲ್ಲಿ ಹೂಡಿಕೆ ಮಾಡಬಹುದು, ಭಾರತ ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಆದ್ದರಿಂದ ಭಾರತದಲ್ಲಿ ಮಾರಾಟ ಮಾಡುವುದು ತುಂಬಾ ಕಷ್ಟ” ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

ಅಮೆರಿಕಕ್ಕೆ ಭಾರತವು ಅಮೆರಿಕದ ಸರಕುಗಳ ಮೇಲೆ ಯಾವುದೇ ಸುಂಕವನ್ನು ವಿಧಿಸುವುದಿಲ್ಲ ಎಂಬ ಪ್ರಸ್ತಾಪ ಮುಂದಿಟ್ಟಿದೆ ಎಂದು ಟ್ರಂಪ್ ಹೇಳಿದ್ದಾರೆ. ಭಾರತ ಇನ್ನೂ ಅಂತಹ ಯಾವುದೇ ಘೋಷಣೆ ಮಾಡಿಲ್ಲ. “ಅವರು (ಭಾರತ) ನಮಗೆ ಒಂದು ಪ್ರಸ್ತಾಪ ಮುಂದಿಟ್ಟಿದ್ದಾರೆ. ಅದರಲ್ಲಿ ಅವರು ಮೂಲತಃ ನಮಗೆ ಯಾವುದೇ ಸುಂಕ ವಿಧಿಸಲು ಒಪ್ಪಿಕೊಂಡಿಲ್ಲ. ನಾನು ಟಿಮ್, ನಾವು ನಿಮ್ಮನ್ನು ನಿಜವಾಗಿಯೂ ಚೆನ್ನಾಗಿ ನಡೆಸಿಕೊಳ್ಳುತ್ತಿದ್ದೇವೆ ಎಂದು ಹೇಳಿದೆ, ನೀವು ಚೀನಾದಲ್ಲಿ ವರ್ಷಗಳಿಂದ ನಿರ್ಮಿಸಿದ ಎಲ್ಲಾ ಘಟಕಗಳನ್ನು ನಾವು ಸಹಿಸಿಕೊಂಡಿದ್ದೇವೆ. ನೀವು ಭಾರತದಲ್ಲಿ ನಿರ್ಮಿಸುವುದರಲ್ಲಿ ನಮಗೆ ಆಸಕ್ತಿ ಇಲ್ಲ. ಭಾರತವು ತಮ್ಮನ್ನು ತಾವು ನೋಡಿಕೊಳ್ಳಬಹುದು” ಎಂದು ಟ್ರಂಪ್ ಹೇಳಿದರು. ಐಫೋನ್‌ಗಳು ಮತ್ತು ಮ್ಯಾಕ್‌ಬುಕ್‌ಗಳಿಗೆ ವಿಶ್ವಾದ್ಯಂತ ಬೇಡಿಕೆಯಿರುವ ಆಪಲ್, ಅಮೆರಿಕದಲ್ಲಿ ತನ್ನ ಉತ್ಪಾದನೆಯನ್ನು ವಿಸ್ತರಿಸಲು ಸಜ್ಜಾಗಿದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದರು.

ಪ್ರಮುಖ ಸುದ್ದಿ :-   ಟ್ರಂಪ್ ಒತ್ತಡದ ನಂತರವೂ 'ಮೇಕ್ ಇನ್ ಇಂಡಿಯಾ' ಬದ್ಧತೆ ಪುನರುಚ್ಚರಿಸಿದ ಆಪಲ್

ಐಫೋನ್ ತಯಾರಕ ಕಂಪನಿಯಾದ ಆಪಲ್‌ ಭಾರತದಲ್ಲಿ ಉತ್ಪಾದನೆಯನ್ನು ವಿಸ್ತರಿಸಲು ಮತ್ತು ಟ್ರಂಪ್ ಆಡಳಿತದ ಸುಂಕ ಕ್ರಮವನ್ನು ನಿಭಾಯಿಸಲು ತನ್ನ ಉತ್ಪಾದನೆಯನ್ನು ಚೀನಾದಿಂದ ಬೇರೆಡೆಗೆ ಸ್ಥಳಾಂತರಿಸಲು ಯೋಜಿಸುತ್ತಿರುವ ನಿರ್ಣಾಯಕ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಭಾರತದಲ್ಲಿ ಐಫೋನ್‌ ಉತ್ಪಾದನೆ ಮಾಡದಂತೆ ಆಪಲ್‌ಗೆ ಒತ್ತಾಯ ಮಾಡಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಟಿಮ್ ಕುಕ್ “ಅಮೆರಿಕದಲ್ಲಿ ಮಾರಾಟವಾಗುವ ಹೆಚ್ಚಿನ ಐಫೋನ್‌ಗಳು ಭಾರತವನ್ನು ತಮ್ಮ ಮೂಲ ದೇಶವಾಗಿ ಹೊಂದಿರುತ್ತವೆ” ಎಂದು ಹೇಳಿದ್ದರು.
ಆಪಲ್ ಕಂಪನಿಯು ಪ್ರಸ್ತುತ ಭಾರತದಲ್ಲಿ ಮೂರು ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಎರಡು ತಮಿಳುನಾಡಿನಲ್ಲಿ ಮತ್ತು ಒಂದು ಕರ್ನಾಟಕದಲ್ಲಿದೆ. ಇವುಗಳಲ್ಲಿ ಒಂದನ್ನು ಫಾಕ್ಸ್‌ಕಾನ್ ನಿರ್ವಹಿಸುತ್ತದೆ, ಮತ್ತು ಇನ್ನೆರಡು ಟಾಟಾ ಗ್ರೂಪ್ ನಿರ್ವಹಿಸುತ್ತದೆ. ಇನ್ನೂ ಎರಡು ಆಪಲ್ ಘಟಕಗಳು ಪೈಪ್‌ಲೈನ್‌ನಲ್ಲಿವೆ.
ಮಾರ್ಚ್‌ಗೆ ಕೊನೆಗೊಂಡ ಕಳೆದ ಆರ್ಥಿಕ ವರ್ಷದಲ್ಲಿ, ಆಪಲ್ ಭಾರತದಲ್ಲಿ $22 ಬಿಲಿಯನ್ ಮೌಲ್ಯದ ಐಫೋನ್‌ಗಳನ್ನು ಜೋಡಿಸಿತ್ತು, ಇದು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಉತ್ಪಾದನೆಯಲ್ಲಿ ಶೇಕಡಾ 60 ರಷ್ಟು ಹೆಚ್ಚಳವಾಗಿದೆ.

ಪ್ರಮುಖ ಸುದ್ದಿ :-   ಪಹಲ್ಗಾಮ್ ದಾಳಿ : ಭಯೋತ್ಪಾದಕ ಗುಂಪು ಲಷ್ಕರ್ ಅಂಗಸಂಸ್ಥೆ ಟಿಆರ್‌ಎಫ್ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪುರಾವೆ ಸಲ್ಲಿಸಲಿರುವ ಭಾರತ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement