ವೀಡಿಯೊ | ಬುದ್ಧಿವಂತಿಕೆಯಿಂದ ವಿದ್ಯುತ್ ತಂತಿ ಬೇಲಿ ದಾಟಿದ ಆನೆ : ‘ಇದು ಮುಂದಿನ ಹಂತದ ಬುದ್ಧಿಮತ್ತೆ’ ಎಂದ ಇಂಟರ್ನೆಟ್‌-ವೀಕ್ಷಿಸಿ

ಪ್ರಾಣಿಗಳು ತಮ್ಮ ಸಹಜ ಬುದ್ಧಿಮತ್ತೆಯಿಂದ ನಮ್ಮನ್ನು ವಿಸ್ಮಯಗೊಳಿಸುತ್ತಲೇ ಇವೆ, ಮತ್ತು ಅಂತಹ ಒಂದು ಬುದ್ಧಿವಂತಿಕೆಯ ಪ್ರಸ್ತುತಿಯಲ್ಲಿ ಆನೆಯೊಂದು ಸುರಕ್ಷಿತವಾಗಿ ವಿದ್ಯುತ್ ಬೇಲಿಯನ್ನು ಚತುರವಾಗಿ ದಾಟುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ.
ಈ ಕ್ಲಿಪ್ ಅನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಅವರು X ನಲ್ಲಿ ಹಂಚಿಕೊಂಡಿದ್ದಾರೆ. ಈ ಆನೆ ಭೌತಶಾಸ್ತ್ರದಲ್ಲಿ ಪ್ರವೀಣ. ಅದು ಎಷ್ಟು ಬುದ್ಧಿವಂತಿಕೆಯಿಂದ ವಿದ್ಯುತ್ ಬೇಲಿಯನ್ನು ತಟಸ್ಥಗೊಳಿಸಿ ಅದನ್ನು ದಾಟಿತು ಎಂಬುದನ್ನು ನೋಡಿ. ನಾವು ಅಂತಹ ಅನೇಕ ಘಟನೆಗಳನ್ನು ಸಹ ದಾಖಲಿಸಿದ್ದೇವೆ – ಶೀಘ್ರದಲ್ಲೇ ಒಂದು ಅಧ್ಯಯನವನ್ನು ಪ್ರಕಟಿಸಲಾಗುವುದು ಎಂದು ಕಸ್ವಾನ್‌ ಅವರು ಬರೆದಿದ್ದಾರೆ.

ಕ್ರಮಬದ್ಧವಾಗಿ ಮತ್ತು ಎಚ್ಚರಿಕೆಯಿಂದ ನಿರ್ವಹಿಸಿದ ಆನೆ
ವಿದ್ಯುತ್ ತಂತಿಗಳನ್ನು ಫಿಕ್ಸ್‌ ಮಾಡಿದ ಮರದ ಕಂಬದ ಹತ್ತಿರ ಆನೆ ಬರುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ತನ್ನ ಸೊಂಡಿಲನ್ನು ಬಳಸಿದ ಆನೆ ಕಂಬವನ್ನು ಅದುಉರುಳುವವರೆಗೆ ತಳ್ಳುತ್ತದೆ, ಇದರಿಂದಾಗಿ ವಿದ್ಯುತ್‌ ತಂತಿಗಳು ನೆಲಕ್ಕೆ ಬೀಳುತ್ತವೆ. ಆದರೆ ಆನೆ ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಅದು ಬಿದ್ದ ಕಂಬವನ್ನು ಹಿಡಿದೆತ್ತಿ ಎಚ್ಚರಿಕೆಯಿಂದ ತಿರುಗಿಸಿ ಉಲ್ಟಾ ಮಾಡಿ ನೆಲಕ್ಕೆ ಎಸೆಯುತ್ತದೆ. ತಂತಿಗಳು ಸುರಕ್ಷಿತವಾಗಿ ಸಿಕ್ಕಿಕೊಂಡಿವೆ ಮತ್ತು ದಾಟಲು ಮುಂದುವರಿಯುವ ಮೊದಲು ಅವು ಸಂಪೂರ್ಣವಾಗಿ ತಟಸ್ಥವಾಗಿದೆ ಎಂದು ಖಚಿತಪಡಿಸಿಕೊಂಡು ಮುಂದುವರಿಯುತ್ತದೆ. ನೆಲದಿಂದ ಒಂದು ಇಂಚು ಕೂಡ ಬೇಲಿ ಮೇಲೆ ನಿಲ್ಲದ ರೀತಿಯಲ್ಲಿ ಕಂಬವನ್ನು ಬೇಲಿಯ ಸಮೇತ ನೆಲಕ್ಕೆ ಕಡಹಿದ ನಂತರ ಇದನ್ನು ದಾಟಿದರೆ ಅಪಾಯವಿಲ್ಲ ಎಂದು ಖಚಿತಪಡಿಸಿಕೊಂಡ ನಂತರವೇ ಆನೆ ಆ ಬೇಲಿಯನ್ನು ದಾಟಿ ಮುಂದೆ ಹೋಗುವುದು ಕಂಡುಬಂದಿದೆ.

ಆನೆ ಕರಾರುವಕ್ಕಾದ ಲೆಕ್ಕಾಚಾರ ಮತ್ತು ಕ್ರಮಗಳು ಅನೇಕರನ್ನು ದಿಗ್ಭ್ರಮೆಗೊಳಿಸಿದೆ, ಅದರ ಗಮನಾರ್ಹ ಬುದ್ಧಿವಂತಿಕೆಗೆ ವ್ಯಾಪಕ ಪ್ರಶಂಸೆ ಮತ್ತು ಮೆಚ್ಚುಗೆ ವ್ಯಕ್ತವಾಗಿದೆ. ಅನೇಕರು ಆನೆಯ ಕಾರ್ಯತಂತ್ರದ ಚಿಂತನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಕೃತಿಯ ಈ ಒಳನೋಟಗಳು ನಮ್ಮನ್ನು ಅದಕ್ಕೆ ಹತ್ತಿರ ತರುತ್ತವೆ ಎಂದು ಹೇಳಿದ್ದಾರೆ. ನಿ“ನಾವು ಪ್ರಕೃತಿಯಿಂದ ಎಷ್ಟು ಹೆಚ್ಚು ಕಲಿಯಬೇಕು ಎಂಬುದನ್ನು ಇದು ತೋರಿಸುತ್ತದೆ. ಇದು ನಮಗೆ ಅದ್ಭುತ. ಆದರೆ ಪ್ರಕೃತಿ ಎಂದಿಗೂ ಆಶ್ಚರ್ಯಪಡುವುದಿಲ್ಲ ಎಂದು ಒಬ್ಬರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನೀಟ್ 2026 ಮರುಪರೀಕ್ಷೆ ; ಟೆಲಿಗ್ರಾಂ ತಾತ್ಕಾಲಿಕ ನಿರ್ಬಂಧ : ಕೇಂದ್ರದ ನಿರ್ಧಾರ ಎತ್ತಿ ಹಿಡಿದ ದೆಹಲಿ ಹೈಕೋರ್ಟ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement