ವಿಮಾನ ಅಪಘಾತ | ಆಗ ಥಾಯ್ ಏರ್‌ವೇಸ್, ಈಗ ಏರ್‌ ಇಂಡಿಯಾ : 30 ವರ್ಷಗಳ ಹಿಂದೆಯೂ 11A ಸೀಟು ವ್ಯಕ್ತಿಯ ಜೀವ ಉಳಿಸಿತ್ತು…!

ನವದೆಹಲಿ : ವಿಮಾನದಲ್ಲಿ 11A ಸೀಟು ನಿಜವಾಗಿಯೂ ರಕ್ಷಕವೇ ? ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ಅಪಘಾತದ ನಂತರ ಅದೃಷ್ಟಶಾಲಿ ಎಂದು ಹೇಳಲಾದ ಬದುಕುಳಿದ ಏಕೈಕ ವ್ಯಕ್ತಿ ಕುಳಿತಿದ್ದ 11A ಸೀಟಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಥಾಯ್ ಗಾಯಕನೊಬ್ಬ ವಿಮಾನದಲ್ಲಿಅದೇ ಸೀಟಿನಲ್ಲಿ ಕುಳಿತುಕೊಂಡು ಮಾರಕ ವಿಮಾನ ಅಪಘಾತದಲ್ಲಿ ಬದುಕುಳಿದಿದ್ದನ್ನು ಬಹಿರಂಗಪಡಿಸಿದ್ದಾರೆ.
ಥಾಯ್ ಏರ್‌ವೇಸ್ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದ ರುವಾಂಗ್ಸಾಕ್ ಲೊಯ್ಚುಸಾಕ್ ಎಂಬವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ವಿಮಾನವು ಸ್ಥಗಿತಗೊಂಡು ಜೌಗು ಪ್ರದೇಶಕ್ಕೆ ಅಪ್ಪಳಿಸಿತು, ಇದರ ಪರಿಣಾಮವಾಗಿ 101 ಸಾವುಗಳು ಸಂಭವಿಸಿದವು.
ಈಗ 47 ವರ್ಷ ವಯಸ್ಸಾಗಿರುವ ಥಾಯ್ ಗಾಯಕ ರುವಾಂಗ್ಸಾಕ್ ಜೇಮ್ಸ್ ಲೊಯ್ಚುಸಾಕ್, 1998ರ ಥಾಯ್ ಏರ್‌ವೇಸ್ ವಿಮಾನ ಅಪಘಾತದಲ್ಲಿ ಬದುಕುಳಿದರು. ಘಟನೆಯನ್ನು ನೆನಪಿಸಿಕೊಳ್ಳುತ್ತಾ, ಅಹಮದಾಬಾದ್‌ ವಿಮಾನ ಘಟನೆಯ ನಂತರ ಅವರು 11A ಸೀಟಿನ ಬಗ್ಗೆ ಕಾಕತಾಳೀಯದ ಬಗ್ಗೆ ಹೇಳಿದ್ದಾರೆ.

1998ರ ಥಾಯ್ ಏರ್‌ವೇಸ್ ವಿಮಾನ ಅಪಘಾತದಲ್ಲಿ ತಾವು 11A ನಲ್ಲಿ ಕುಳಿತಿದ್ದೆ ಎಂದು ಹೇಳಿದ್ದಾರೆ “ಭಾರತದಲ್ಲಿ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ನನ್ನಂತೆಯೇ ಅದೇ ಸೀಟ್ ಸಂಖ್ಯೆ 11A ನಲ್ಲಿ ಕುಳಿತಿದ್ದರು ಗೂಸ್‌ಬಂಪ್ಸ್” ಎಂದು ಲೊಯ್ಚುಸಾಕ್ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಈ ಅಪಘಾತವು ತಮಗೆ ಶಾಶ್ವತವಾದ ಆಘಾತವನ್ನುಂಟು ಮಾಡಿದೆ ಎಂದು ರುವಾಂಗ್ಸಾಕ್ ಬಹಿರಂಗಪಡಿಸಿದ್ದಾರೆ. ಅವರು ಒಂದು ದಶಕದಿಂದ ಏರೋಫೋಬಿಯಾ (ಹಾರುವ ಭಯ), ಸಾಮಾಜಿಕ ಹೆದರಿಕೆ ಮತ್ತು ಮೋಡಗಳಿಂದ ಉಂಟಾಗುವ ಆತಂಕದಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ.
“ನಾನು ಯಾರೊಂದಿಗೂ ಮಾತನಾಡುವುದನ್ನು ತಪ್ಪಿಸಿಕೊಳ್ಳುತ್ತಿದ್ದೆ ಮತ್ತು ಯಾವಾಗಲೂ ಕಿಟಕಿಯ ಹೊರಗೆ ದಿಟ್ಟಿಸುತ್ತಿದ್ದೆ, ನನ್ನ ಸುರಕ್ಷತೆಯ ಪ್ರಜ್ಞೆಯನ್ನು ಕಾಪಾಡಿಕೊಳ್ಳಲು ಯಾರೂ ಕಿಟಕಿಯ ಮುಚ್ಚದಂತೆ ತಡೆಯುತ್ತಿದ್ದೆ. ನಾನು ಹೊರಗೆ ಕಪ್ಪು ಮೋಡಗಳು ಅಥವಾ ಮಳೆಗಾಲವನ್ನು ನೋಡಿದರೆ, ನಾನು ನರಕದಲ್ಲಿ ಇದ್ದಂತೆ ಭಯಭೀತನಾಗುತ್ತೇನೆ” ಎಂದು ಮೇಲ್‌ಆನ್‌ಲೈನ್ ಪೋರ್ಟಲ್‌ ಅವರು ಹೇಳಿದ್ದನ್ನು ಉಲ್ಲೇಖಿಸಿದೆ.

ಪ್ರಮುಖ ಸುದ್ದಿ :-   ಅಹಮದಾಬಾದ್ ವಿಮಾನ ಅಪಘಾತ: ಮೃತರ ಸಂಖ್ಯೆ 274ಕ್ಕೆ ಏರಿಕೆ

“ವಿಮಾನ ಅಪಘಾತಕ್ಕೀಡಾದ ಜೌಗು ಪ್ರದೇಶದಲ್ಲಿನ ಶಬ್ದಗಳು, ವಾಸನೆಗಳು ಮತ್ತು ನೀರಿನ ರುಚಿಯನ್ನು ಸಹ ನಾನು ಇನ್ನೂ ನೆನಪಿಸಿಕೊಳ್ಳಬಲ್ಲೆ. ದೀರ್ಘಕಾಲದವರೆಗೆ, ಈ ಭಾವನೆಗಳು ನನ್ನಲ್ಲಿಯೇ ಹಾಗೆಯೇ ಇದೆ” ಎಂದು ಹೇಳಿದ್ದಾರೆ.
ರುವಾಂಗ್ಸಾಕ್ ಅವರ ಮೂಲ ಬೋರ್ಡಿಂಗ್ ಪಾಸ್ ಇಲ್ಲದಿದ್ದರೂ, ವೃತ್ತಪತ್ರಿಕೆ ವರದಿಗಳು ಅವರ ಸೀಟ್ ಸಂಖ್ಯೆಯನ್ನು 11A ಎಂದು ದೃಢಪಡಿಸುತ್ತವೆ. ಇತ್ತೀಚಿನ ಏರ್ ಇಂಡಿಯಾ ದುರಂತದಿಂದ ಪೀಡಿತ ಕುಟುಂಬಗಳಿಗೆ ಅವರು ಸಂತಾಪ ಸೂಚಿಸಿದರು.
ಗುರುವಾರ ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಬೋಯಿಂಗ್ ಡ್ರೀಮ್‌ಲೈನರ್ ಅಪಘಾತಕ್ಕೀಡಾಯಿತು. ವಿಮಾನದಲ್ಲಿದ್ದ 242 ಜನರಲ್ಲಿ, 11A ಸೀಟಿನಲ್ಲಿ ಕುಳಿತಿದ್ದ ವಿಶ್ವಾಸಕುಮಾರ ರಮೇಶ ಮಾತ್ರ ಬದುಕುಳಿದಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement