ಎದೆ ಝಲ್‌ ಎನ್ನುವ ವೀಡಿಯೊ…| ಪಾಕಿಸ್ತಾನದ ಪ್ರವಾಹದಲ್ಲಿ ಕೊಚ್ಚಿಹೋದ ಒಂದೇ ಕುಟುಂಬದ 9 ಜನ ; ದುರಂತವಾದ ಪಿಕ್ನಿಕ್‌

ಪಾಕಿಸ್ತಾನದಲ್ಲಿ ಸ್ವಾತ್ ನದಿಯ ಹಠಾತ್ ಪ್ರವಾಹದಲ್ಲಿ ಕುಟುಂಬದ 18 ಜನರಲ್ಲಿ ಒಂಬತ್ತು ಮಂದಿ ಕೊಚ್ಚಿಹೋಗಿ ಸಾವಿಗೀಡಾದ ನಂತರ, ಕುಟುಂಬಕ್ಕೆ ಪಿಕ್ನಿಕ್ ಪ್ರವಾಸವು ದುರಂತವಾಗಿ ಪರಿಣಮಿಸಿತು. ಶುಕ್ರವಾರ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಈ ಘಟನೆ ಸಂಭವಿಸಿದೆ.
ಮೈ ಜುಂ ಎನ್ನುವ ವೀಡಿಯೊದಲ್ಲಿ, ಬಲವಾದ ಪ್ರವಾಹದ ಮಧ್ಯೆ ನದಿ ಉಕ್ಕಿ ಹರಿಯುತ್ತಿದ್ದು, ಅದರ ಮಧ್ಯದಲ್ಲಿ ದಿನ್ನೆಯಂತೆ ಕಾಣುವ ಸ್ಥಳದಲ್ಲಿ ಕೆಲವರು ಸಿಲುಕಿಕೊಂಡಿರುವುದು ಕಂಡುಬಂದಿದೆ. ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗಿಲ್ಲ.
ಐದು ವಿಭಿನ್ನ ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಮತ್ತು ರೆಸ್ಕ್ಯೂ 1122 ರ 80 ಸಿಬ್ಬಂದಿ ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದಾರೆ” ಎಂದು ರೆಸ್ಕ್ಯೂ 1122 ರ ಮಹಾನಿರ್ದೇಶಕ ಶಾ ಫಹಾದ್ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಗುಂಪಿನ ಸದಸ್ಯರೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದು, ಅವರು ಉಪಾಹಾರವನ್ನು ಸೇವಿಸುತ್ತ ಆನಂದಿಸುತ್ತಿದ್ದರು ಮತ್ತು ಮಕ್ಕಳು ನೀರಿನಲ್ಲಿ ಆಟವಾಡುತ್ತಾ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದರು. ಅವರು ಕೆಲವು ಸೆಲ್ಫಿಗಳನ್ನು ತೆಗೆದುಕೊಳ್ಳಲು ಹೋದರು. ಆ ಸಮಯದಲ್ಲಿ ಹೆಚ್ಚು ನೀರಿರಲಿಲ್ಲ. ಇದ್ದಕ್ಕಿದ್ದಂತೆ, ಪ್ರವಾಹದ ನೀರು ಬಂದು ಮಕ್ಕಳನ್ನು ಕೊಚ್ಚಿಕೊಂಡು ಹೋಯಿತು. ನೀರಿನ ಹರಿವು ತುಂಬಾ ಪ್ರಬಲವಾಗಿದೆ ಎಂದು ಅವರು ಹೇಳಿದರು. “ಅಧಿಕೃತ ರಕ್ಷಣಾ ಸೇವೆಗಳು ಬರುವವರೆಗೆ ಅವರು ಎರಡು ಗಂಟೆಗಳಿಗೂ ಹೆಚ್ಚು ಕಾಲ ದಿನ್ನೆಯಂತಹ ಸ್ಥಳದಲ್ಲಿ ಉಸಿರುಬಿಗಿ ಹಿಡಿದುಕೊಂಡು ಕಾಯುತ್ತಿದ್ದರು” ಎಂದು ಅವರು ಹೇಳಿದರು.
ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಬರುವ ಹೊತ್ತಿಗೆ, ನಾಲ್ಕು ಜನರು ನೀರಿನಲ್ಲಿ ಕೊಚ್ಚಿ ಹೋಗಿದ್ದರು ಎಂದು ಅಧಿಕಾರಿಗಳು ಹೇಳಿದರು.

“ಅವರು ಸಹಾಯಕ್ಕಾಗಿ ಎರಡು ಗಂಟೆಗಳ ಕಾಲ ಕೂಗುತ್ತ ಅಳುತ್ತಿದ್ದರು” ಎಂದು ಸ್ಥಳೀಯ ಮತ್ತು ಪ್ರತ್ಯಕ್ಷದರ್ಶಿ ಶಿರಾಜ್ ಖಾನ್ ಹೇಳಿದ್ದಾರೆ.
ದರಂತದ ನಂತರ ನಿರ್ಲಕ್ಷ್ಯಕ್ಕಾಗಿ ಹಲವಾರು ಆಡಳಿತ ಮತ್ತು ರಕ್ಷಣಾ ಸೇವಾ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ನಂತರ ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹೆಚ್ಚಿನ ಪ್ರವಾಹದ ಮಟ್ಟವಿದೆ ಎಂದು ಎಚ್ಚರಿಕೆ ನೀಡಿತು ಮತ್ತು ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿತು.
ಪ್ರವಾಸಿಗರ ಸಾವಿನ ಬಗ್ಗೆ ಪ್ರಧಾನಿ ಶೆಹಬಾಜ್ ಷರೀಫ್ “ದುಃಖ ವ್ಯಕ್ತಪಡಿಸಿದ್ದಾರೆ” ಎಂದು ತಮ್ಮ ಕಚೇರಿಯ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೊಳೆಗಳು ಮತ್ತು ನದಿಗಳ ಸುತ್ತಲೂ ಭದ್ರತೆಯನ್ನು ಸುಧಾರಿಸಲು ಅಧಿಕಾರಿಗಳನ್ನು ಒತ್ತಾಯಿಸಿದ್ದೇನೆ ಎಂದು ಷರೀಫ್ ಹೇಳಿದರು.

ಪ್ರಮುಖ ಸುದ್ದಿ :-   ಪಾಕಿಸ್ತಾನದಲ್ಲಿ ಆತ್ಮಾಹುತಿ ಕಾರ್ ಬಾಂಬ್ ದಾಳಿಗೆ 13 ಸೈನಿಕರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement