ವೈದ್ಯಕೀಯ ಕೇಂದ್ರವೊಂದರಲ್ಲಿ ಭಾರವಾದ ಲೋಹದ ಹಾರವನ್ನು ಧರಿಸಿದ್ದ 61 ವರ್ಷದ ವ್ಯಕ್ತಿಯೊಬ್ಬರನ್ನು ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ಯಂತ್ರವು ಒಳಗೆ ಎಳೆದುಕೊಂಡ ಪರಿಣಾಮ ಸಾವಿಗೀಡಾದ ಘಟನೆ ನಡೆದಿದೆ.
ನ್ಯೂಯಾರ್ಕ್ನ ಲಾಂಗ್ ಐಲ್ಯಾಂಡ್ನ ವೆಸ್ಟ್ಬರಿಯಲ್ಲಿರುವ ನಸ್ಸೌ ಓಪನ್ ಎಂಆರ್ಐ (MRI) ಯಂತ್ರ ಚಾಲನೆಯಲ್ಲಿದ್ದಾಗ ಆ ವ್ಯಕ್ತಿ ಅನುಮತಿಯಿಲ್ಲದೆ ಕೋಣೆಗೆ ಪ್ರವೇಶಿಸಿದ್ದಾನೆ ಎಂದು ನಸ್ಸೌ ಕೌಂಟಿ ಪೊಲೀಸ್ ಇಲಾಖೆ ತಿಳಿಸಿದೆ. ತನ್ನ ಸ್ಕ್ಯಾನ್ ಮಾಡುವಾಗ ತಾನೇ ಗಂಡನನ್ನು ಎಂಆರ್ಐ ಯಂತ್ರದ ಕೋಣೆಗೆ ಕರೆಸಿಕೊಂಡಿದ್ದೆ, ಆದರೆ ಆತ ಹಾಕಿಕೊಂಡಿದ್ದ ಚೈನ್ ಅನ್ನು ಯಂತ್ರವು ಎಳೆದುಕೊಂಡಿತು ಎಂದು ಆತನ ಪತ್ನಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಎಂಆರ್ಐ ಯಂತ್ರಗಳು ವಿವರವಾದ ಚಿತ್ರಗಳನ್ನು ತಯಾರಿಸಲು ಬಲವಾದ ಆಯಸ್ಕಾಂತೀಯ ಕ್ಷೇತ್ರವನ್ನು ಬಳಸುತ್ತವೆ. ಅದಕ್ಕಾಗಿಯೇ ಎಂಆರ್ಐ (MRI) ಸ್ಕ್ಯಾನ್ಗಳಿಗೆ ಒಳಗಾಗುವ ಮೊದಲು ಅಥವಾ ಯಂತ್ರದ ಬಳಿ ಹೋಗುವ ಮೊದಲು ರೋಗಿಗಳಿಗೆ ಸಾಮಾನ್ಯವಾಗಿ ಲೋಹದ ವಸ್ತುಗಳನ್ನು ತೆಗೆದು ಬಟ್ಟೆ ಬದಲಾಯಿಸಲು ಸೂಚಿಸಲಾಗುತ್ತದೆ. “ಮೃತ ವ್ಯಕ್ತಿ ತನ್ನ ಕುತ್ತಿಗೆಗೆ ದೊಡ್ಡ ಲೋಹದ ಸರಪಣಿಯನ್ನು ಧರಿಸಿದ್ದರಿಂದ ಆತನನ್ನು ಯಂತ್ರದ ಮ್ಯಾಗ್ನೆಟ್ ಈ ವ್ಯಕ್ತಿಯನ್ನು ಎಳೆದುಕೊಂಡಿದೆ ಎಂದು ಘಟನೆಯ ತನಿಖೆ ನಡೆಸುತ್ತಿರುವ ನಸ್ಸೌ ಕೌಂಟಿ ಪೊಲೀಸ್ ಇಲಾಖೆ ತಿಳಿಸಿದೆ.
ಪೊಲೀಸರು ಮೃತ ವ್ಯಕ್ತಿಯ ಹೆಸರನ್ನು ತಿಳಿಸದಿದ್ದರೂ, ಆಡ್ರಿಯೆನ್ ಜೋನ್ಸ್-ಮ್ಯಾಕ್ಆಲಿಸ್ಟರ್ ಸ್ಥಳೀಯ ದೂರದರ್ಶನ ಕೇಂದ್ರ ನ್ಯೂಸ್ 12 ಲಾಂಗ್ ಐಲ್ಯಾಂಡ್ಗೆ ನೀಡಿದ ಸಂದರ್ಶನದಲ್ಲಿ, ಮೃತಪಟ್ಟಿದ್ದು ತನ್ನ ಪತಿ ಕೀತ್ ಎಂದು ಹೇಳಿದ್ದಾರೆ.
ಶ್ರೀಮತಿ ಜೋನ್ಸ್-ಮ್ಯಾಕ್ಆಲಿಸ್ಟರ್ ಅವರು ತಾನು ಮೊಣಕಾಲಿಗೆ ಎಂಆರ್ಐ ಸ್ಕ್ಯಾನ್ ಮಾಡಿಸಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ ಮತ್ತು ತನಗೆ ಎದ್ದೇಳಲು ಕಷ್ಟವಾಗುವುದರಿಂದ ಎದ್ದೇಳಲು ಸಹಾಯ ಮಾಡುವ ಸಲುವಾಗಿ ತಮ್ಮ ಪತಿಯನ್ನು ಒಳಗೆ ಬರಲು ಕೇಳಿಕೊಂಡಿದ್ದೆ. ಅವರು ತೂಕ ತರಬೇತಿಗಾಗಿ ಬಳಸುತ್ತಿದ್ದ ಲಾಕ್ ಜೊತೆ 20 ಪೌಂಡ್ (9 ಕೆಜಿ) ಸರವನ್ನು ಧರಿಸಿದ್ದರು. ಅದನ್ನು ಅವರು ತೂಕ ತರಬೇತಿಗಾಗಿ ಬಳಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
“ಆ ಕ್ಷಣದಲ್ಲಿ, ಯಂತ್ರವು ಅವರನ್ನು ತಿರುಗಿಸಿ, ಒಳಗೆ ಎಳೆದುಕೊಂಡಿತು ಎಂದು ಅವರು ಹೇಳಿದ್ದಾರೆ. ತಂತ್ರಜ್ಞರು ತಮ್ಮ ಗಂಡನನ್ನು ಯಂತ್ರದಿಂದ ದೂರ ಎಳೆಯಲು ಪ್ರಯತ್ನಿಸಿದರು, ಆದರೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
“ಅಪಾಯಗಳು ದುರಂತವಾಗಬಹುದು, ಮತ್ತು ನಾವು ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಏಕೆ ತೆಗೆದುಕೊಳ್ಳುತ್ತೇವೆ ಎಂಬುದನ್ನು ಇದು ಒತ್ತಿಹೇಳುತ್ತದೆ” ಎಂದು ಡಾ. ಪಾಯಲ್ ಸೂದ್ ಸಿಬಿಎಸ್ ನ್ಯೂಸ್ಗೆ ತಿಳಿಸಿದ್ದಾರೆ.
ಎಂಆರ್ಐ ಯಂತ್ರಗಳಲ್ಲಿನ ಕಾಂತೀಯ ಕ್ಷೇತ್ರಗಳು ಕೀಲಿಗಳು, ಮೊಬೈಲ್ ಫೋನ್ಗಳು ಮತ್ತು ಆಮ್ಲಜನಕ ಟ್ಯಾಂಕ್ಗಳಂತಹ ವಸ್ತುಗಳನ್ನು ಆಕರ್ಷಿಸುತ್ತವೆ. ಇದು ಸ್ಕ್ಯಾನರ್ಗೆ ಹಾನಿಯನ್ನುಂಟುಮಾಡಬಹುದು ಅಥವಾ “ರೋಗಿ ಅಥವಾ ವೈದ್ಯಕೀಯ ವೃತ್ತಿಪರರಿಗೆ” ಗಾಯವನ್ನುಂಟುಮಾಡಬಹುದು ಎಂದು ಅಮೆರಿಕ ಆಹಾರ ಮತ್ತು ಔಷಧ ಮಂಡಳಿ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ