8ನೇ ತರಗತಿಯ ಹುಡುಗಿ ಮದುವೆಯಾದ 40 ವರ್ಷದ ವ್ಯಕ್ತಿ…! ಹುಡುಗಿಯ ಶಿಕ್ಷಕರಿಂದ ಪ್ರಕರಣ ಬೆಳಕಿಗೆ

ತೆಲಂಗಾಣದಲ್ಲಿ ರಂಗಾ ರೆಡ್ಡಿ ಜಿಲ್ಲೆಯಲ್ಲಿ ನಿಜ ಜೀವನದ ‘ಬಾಲಿಕಾ ವಧು’ ಪ್ರಕರಣ ವರದಿಯಾಗಿದೆ. ಆಕೆಯ ಶಿಕ್ಷಕರು ಜಿಲ್ಲಾ ಮಕ್ಕಳ ರಕ್ಷಣೆ ಸೇವೆಗಳ ಸಿಬ್ಬಂದಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಆಕೆಯನ್ನು ರಕ್ಷಿಸಲಾಗಿದೆ.
ಮೇ 28 ರಂದು 8 ನೇ ತರಗತಿಯ ವಿದ್ಯಾರ್ಥಿನಿಯನ್ನು ರಂಗಾರೆಡ್ಡಿ ಜಿಲ್ಲೆಯ ಕಂಡಿವಾಡಾದ 40 ವರ್ಷದ ಶ್ರೀನಿವಾಸ್ ಗೌಡ್‌ ಎಂಬ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿದೆ ಎಂದು ವರದಿಯಾಗಿದೆ.
ಬಾಲಕಿ ತನ್ನ ಶಿಕ್ಷಕರ ಬಳಿ ಈ ವಿಷಯ ತಿಳಿಸಿದ ನಂತರ ಘಟನೆ ಬೆಳಕಿಗೆ ಬಂದಿದ್ದು, ಅವರು ತಹಶೀಲ್ದಾರ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಸಿಬ್ಬಂದಿ ಕಾರ್ಯಪ್ರವೃತ್ತರಾದರು.
“ಹುಡುಗಿ ತನ್ನ ತಾಯಿ ಮತ್ತು ಸಹೋದರನೊಂದಿಗೆ ವಾಸಿಸುತ್ತಾಳೆ. ತಾಯಿ ತಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮನೆ ಮಾಲೀಕರಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡಲು ಬಯಸುವುದಾಗಿ ತಿಳಿಸಿದ್ದಾಳೆ. ನಂತರ ಮಧ್ಯವರ್ತಿಯೊಬ್ಬರ ಮೂಲಕ 40 ವರ್ಷದ ವ್ಯಕ್ತಿಯ ಜೊತೆ ಮದುವೆ ಮಾಡಲಾಯಿತು. ಮತ್ತು ‘ಮದುವೆ’ ಮೇ ತಿಂಗಳಲ್ಲಿ ನಡೆಯಿತು” ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

ಮದುವೆಯಾದ ಹುಡುಗಿಯ ತಾಯಿ, ಮಧ್ಯವರ್ತಿ, ಮದೆವಯಾದ ವ್ಯಕ್ತಿ ಶ್ರೀನಿವಾಸ್ ಗೌಡ್, ಮದುವೆ ವಿಧಿವಿಧಾನ ನೆರವೇರಿಸಿದ ಅರ್ಚಕ ಮತ್ತು ಈ ವ್ಯವಸ್ಥೆಗೆ ಅನುಕೂಲ ಮಾಡಿಕೊಟ್ಟ ಮಹಿಳೆಯನ್ನು ಬಂಧಿಸಿ ಬಾಲ್ಯ ವಿವಾಹ ತಡೆ ಕಾಯ್ದೆಯಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಪ್ರವೀಣಕುಮಾರ ಮಾತನಾಡಿ, ” ಹುಡುಗಿಯನ್ನು ಬಲವಂತವಾಗಿ ಲೈಂಗಿಕ ಸಂಬಂಧಕ್ಕೆ ಒಳಪಡಿಸಿದರೆ, ಶ್ರೀನಿವಾಸ ಗೌಡ್ ಎಂಬ ವ್ಯಕ್ತಿಯ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು” ಎಂದು ಹೇಳಿದ್ದಾರೆ.
ಬಾಲಕಿಯನ್ನು ಸಖಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ, ಅಲ್ಲಿ ಆಕೆಗೆ ಸಮಾಲೋಚನೆ ಮತ್ತು ರಕ್ಷಣೆ ನೀಡಲಾಗುತ್ತಿದೆ. ಸರ್ಕಾರ ನಿಗದಿಪಡಿಸಿದಂತೆ ಪುರುಷರಿಗೆ ವಿವಾಹದ ವಯಸ್ಸು 21 ಮತ್ತು ಮಹಿಳೆಯರಿಗೆ 18 ವರ್ಷವಾಗಿದೆ. ಅಪ್ರಾಪ್ತ ವಯಸ್ಕರ ಜೊತೆಗಿನ ಲೈಂಗಿಕ ಸಂಬಂಧವು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿಯಲ್ಲಿ ಶಿಕ್ಷಾರ್ಹವಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement