ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ : ಶಾರುಖ್ ಖಾನ್, ವಿಕ್ರಾಂತ ಮಸ್ಸಿ ಅತ್ಯುತ್ತಮ ನಟರು, ರಾಣಿ ಮುಖರ್ಜಿ ಅತ್ಯುತ್ತಮ ನಟಿ, ಕಂದೀಲು ಅತ್ಯುತ್ತಮ ಕನ್ನಡ ಚಿತ್ರ-ಪೂರ್ಣ ಪಟ್ಟಿ ಇಲ್ಲಿದೆ

ನವದೆಹಲಿ: ಭಾರತೀಯ ಚಿತ್ರರಂಗದ 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಇಂದು, ಶುಕ್ರವಾರ ನವದೆಹಲಿಯಲ್ಲಿ ಘೋಷಿಸಲಾಗಿದೆ. ನಟನೆ, ನಿರ್ದೇಶನ, ಸಂಗೀತ ಮತ್ತು ನಿರ್ಮಾಣದಂತಹ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ.
ಈ ವರ್ಷದ ಅತ್ಯುತ್ತಮ ನಟ ಪ್ರಶಸ್ತಿಯನ್ನು ‘ಜವಾನ್’ ಚಿತ್ರದ ಅಭಿನಯಕ್ಕಾಗಿ ಶಾರುಖ್ ಖಾನ್ ಮತ್ತು ‘ಟ್ವೆಲ್ತ್‌ ಫೇಲ್’ ಚಿತ್ರದ ಅಭಿನಯಕ್ಕಾಗಿ ವಿಕ್ರಾಂತ ಮಾಸ್ಸಿ ಜಂಟಿಯಾಗಿ ಪಡೆದಿದ್ದಾರೆ. ‘ಶ್ರೀಮತಿ ಚಟರ್ಜಿ Vs ನಾರ್ವೆ’ ಚಿತ್ರದ ಪಾತ್ರಕ್ಕಾಗಿ ರಾಣಿ ಮುಖರ್ಜಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಹಿಂದಿ ವಿಭಾಗದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ‘ಕಥಲ್’ ಚಿತ್ರಕ್ಕೆ ನೀಡಲಾಯಿತು.
ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಅವರ ಕಥೆಯನ್ನು ಆಧರಿಸಿದ ಟ್ವೆಲ್ತ್‌ ಫೇಲ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಸಹ ಗೆದ್ದಿದೆ. ಸುದೀಪ್ತೋ ಸೇನ್ ಅವರ ದಿ ಕೇರಳ ಸ್ಟೋರಿಗಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದರೆ, ಕರಣ ಜೋಹರ್ ಅವರ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿಗೋತ್‌ ಅತ್ಯುತ್ತಮ ಚಲನಚಿತ್ರ ಆರೋಗ್ಯಕರ ಮನರಂಜನೆಯನ್ನು ಒದಗಿಸುವ ಪ್ರಶಸ್ತಿಯನ್ನು ಪಡೆದರು.

ಅತ್ಯುತ್ತಮ ಪ್ರಾದೇಶಿಕ ಚಿತ್ರಗಳು
ಅತ್ಯುತ್ತಮ ತೈ ಫೇಕ್ ಚಿತ್ರ : ಪೈ ಟ್ಯಾಂಗ್ ಸ್ಟೆಪ್ ಆಫ್ ಹೋಪ್
ಅತ್ಯುತ್ತಮ ಗಾರೊ ಚಿತ್ರ: ರಿಮ್‌ಡೋಟಿಯಾಂಗಾ
ಅತ್ಯುತ್ತಮ ತೆಲುಗು ಚಿತ್ರ: ಭಗವಂತ ಕೇಸರಿ
ಅತ್ಯುತ್ತಮ ತಮಿಳು ಚಿತ್ರ: ಪಾರ್ಕಿಂಗ್
ಅತ್ಯುತ್ತಮ ಪಂಜಾಬಿ ಚಿತ್ರ: ಗಾಡ್ಡೇ ಗಾಡ್ಡೇ ಚಾ
ಅತ್ಯುತ್ತಮ ಒಡಿಯಾ ಚಿತ್ರ: ಪುಷ್ಕರ
ಅತ್ಯುತ್ತಮ ಮರಾಠಿ ಚಿತ್ರ: ಶ್ಯಾಮ್ಚಿ ಆಯಿ
ಅತ್ಯುತ್ತಮ ಮಲಯಾಳಂ ಚಿತ್ರ: ಉಲ್ಲೋಜುಕ್ಕು
ಅತ್ಯುತ್ತಮ ಕನ್ನಡ ಚಿತ್ರ: ಕಂದೀಲು
ಅತ್ಯುತ್ತಮ ಹಿಂದಿ ಚಿತ್ರ: ಕಥಲ್
ಅತ್ಯುತ್ತಮ ಗುಜರಾತಿ ಚಿತ್ರ: ವಶ್
ಅತ್ಯುತ್ತಮ ಬೆಂಗಾಲಿ ಚಿತ್ರ: ಡೀಪ್ ಫ್ರಿಡ್ಜ್
ಅತ್ಯುತ್ತಮ ಅಸ್ಸಾಮಿ ಚಲನಚಿತ್ರ: ರೊಂಗಾತಪು 1982
ಅತ್ಯುತ್ತಮ ಸಾಹಸ ನಿರ್ದೇಶನ: ನಂದು-ಪೃಧ್ವಿ (ಹನುಮಾನ್)
ಅತ್ಯುತ್ತಮ ನೃತ್ಯ ಸಂಯೋಜನೆ: ವೈಭವಿ ಮರ್ಚೆಂಟ್ (ದಿಂಧೋರಾ ಬಜೆ ರೇ – ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಅತ್ಯುತ್ತಮ ಸಾಹಿತ್ಯ: ಕಾಸರ್ಲಾ ಶ್ಯಾಮ್ (ಊರು ಪಲ್ಲೆತೂರು – ಬಳಗ)
ಅತ್ಯುತ್ತಮ ಸಂಗೀತ ನಿರ್ದೇಶನ: ಜಿವಿ ಪ್ರಕಾಶಕುಮಾರ (ವಾತಿ), ಹರ್ಷವರ್ಧನ್ ರಾಮೇಶ್ವರ (ಅನಿಮಲ್‌)
ಅತ್ಯುತ್ತಮ ಮೇಕಪ್: ಶ್ರೀಕಾಂತ ದೇಸಾಯಿ (ಸ್ಯಾಮ್ ಬಹದ್ದೂರ್)
ಅತ್ಯುತ್ತಮ ವಸ್ತ್ರ ವಿನ್ಯಾಸ: ಸಚಿನ್, ದಿವ್ಯಾ, ನಿಧಿ (ಸ್ಯಾಮ್ ಬಹದ್ದೂರ್)
ಅತ್ಯುತ್ತಮ ನಿರ್ಮಾಣ ವಿನ್ಯಾಸ: ಮೋಹನದಾಸ್ (2018)
ಅತ್ಯುತ್ತಮ ಸಂಕಲನ: ಮಿಥುನ್ ಮುರಳಿ (ಪೂಕ್ಕಳಂ)
ಅತ್ಯುತ್ತಮ ಧ್ವನಿ ವಿನ್ಯಾಸ: ಸಚಿನ್ ಸುಧಾಕರನ್, ಹರಿಹರನ್ (ಅನಿಮಲ್‌)
ಅತ್ಯುತ್ತಮ ಚಿತ್ರಕಥೆ: ಸಾಯಿ ರಾಜೇಶ (ಬೇಬಿ), ರಾಮಕುಮಾರ ಬಾಲಕೃಷ್ಣನ್ (ಪಾರ್ಕಿಂಗ್)
ಅತ್ಯುತ್ತಮ ಸಂಭಾಷಣೆ: ದೀಪಕ ಕಿಂಗ್ರಾನಿ (ಸಿರ್ಫ್ ಏಕ್ ಬಂಧ ಕಾಫಿ ಹೈ)
ಅತ್ಯುತ್ತಮ ಛಾಯಾಗ್ರಹಣ: ಪ್ರಶಾಂತನು ಮಹಾಪಾತ್ರ (ದಿ ಕೇರಳ ಸ್ಟೋರಿ)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಶಿಲ್ಪಾ ರಾವ್ (ಚಲಿಯಾ – ಜವಾನ್), ರೋಹಿತ್ (ಪ್ರೇಮಿಸ್ತುನ್ನ – ಬೇಬಿ)
ಅತ್ಯುತ್ತಮ ಬಾಲ ಕಲಾವಿದೆ: ಸುಕೃತಿ ಬಂಡಿರೆಡ್ಡಿ (ಗಾಂಧಿ ತಥಾ ಚೆಟ್ಟು), ಕಬೀರ್ ಖಂಡಾರೆ (ಜಿಪ್ಸಿ), ತ್ರೀಶಾ ತೋಷರ್, ಶ್ರೀನಿವಾಸ ಪೋಕಳೆ, ಭಾರ್ಗವ್ (ನಾಲ್‌ 2)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ: ಊರ್ವಶಿ (ಉಲ್ಲೋಜುಕ್ಕು), ಜಾಂಕಿ ಬೋಡಿವಾಲ (ವಶ್), ವಿಜಯರಾಘವನ್ (ಪೂಕಳಂ), ಮುತ್ತುಪೆಟ್ಟೈ ಸೋಮು ಭಾಸ್ಕರ (ಪಾರ್ಕಿಂಗ್)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ: ರಾಣಿ ಮುಖರ್ಜಿ (ಶ್ರೀಮತಿ ಚಟರ್ಜಿ vs ನಾರ್ವೆ)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ: ಶಾರುಖ್ ಖಾನ್ (ಜವಾನ್), ವಿಕ್ರಾಂತ್ ಮ್ಯಾಸ್ಸಿ (ಟ್ವೆಲ್ತ್‌ (12th) ಫೇಲ್)
ಅತ್ಯುತ್ತಮ ನಿರ್ದೇಶನ: ಸುದೀಪ್ತೋ ಸೇನ್ (ದಿ ಕೇರಳ ಸ್ಟೋರಿ)
ಎವಿಜಿಸಿ(AVGC)ಯಲ್ಲಿ ಅತ್ಯುತ್ತಮ ಚಿತ್ರ: ಹನು-ಮಾನ್
ಅತ್ಯುತ್ತಮ ಮಕ್ಕಳ ಚಿತ್ರ: ನಾಲ್ 2
ರಾಷ್ಟ್ರೀಯ, ಸಾಮಾಜಿಕ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಿತ್ರ: ಸ್ಯಾಮ್ ಬಹದ್ದೂರ್
ಆರೋಗ್ಯಕರ ಮನರಂಜನೆಯನ್ನು ಒದಗಿಸುವ ಅತ್ಯುತ್ತಮ ಜನಪ್ರಿಯ ಚಿತ್ರ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
ಅತ್ಯುತ್ತಮ ಚೊಚ್ಚಲ ಚಿತ್ರ: ಆತ್ಮಪಾಫ್ಲೆಟ್
ಅತ್ಯುತ್ತಮ ಚಿತ್ರ: ಟ್ವೆಲ್ತ್‌ (12th) ಫೇಲ್

ಪ್ರಮುಖ ಸುದ್ದಿ :-   ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಪ್ರಮಾಣ ವಚನ, 13 ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ

ನಾನ್-ಫೀಚರ್ ಚಲನಚಿತ್ರಗಳು:
ವಿಶೇಷ ಉಲ್ಲೇಖಗಳು: ನೆಕಲ್ – ಕ್ರಾನಿಕಲ್ ಆಫ್ ದಿ ಪ್ಯಾಡಿ ಮ್ಯಾನ್, ದಿ ಸೀ ಅಂಡ್ ದಿ ಸೆವೆನ್ ವಿಲೇಜಸ್
ಅತ್ಯುತ್ತಮ ಸ್ಕ್ರಿಪ್ಟ್: ಸನ್‌ಫ್ಲವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ
ಅತ್ಯುತ್ತಮ ಧ್ವನಿಮುದ್ರಿಕೆ: ಹರಿ ಕೃಷ್ಣನ್ ಎಸ್ (ದಿ ಸೇಕ್ರೆಡ್ ಜ್ಯಾಕ್ – ಎಕ್ಸ್‌ಪ್ಲೋರಿಂಗ್ ದಿ ಟ್ರೀ ಆಫ್ ವಿಶಸ್)
ಅತ್ಯುತ್ತಮ ಸಂಗೀತ ನಿರ್ದೇಶನ: ಪ್ರಣಿಲ್ ದೇಸಾಯಿ (ಮೊದಲ ಚಿತ್ರ)
ಅತ್ಯುತ್ತಮ ಎಡಿಟಿಂಗ್‌: ನೀಲಾದ್ರಿ ರಾಯ್ (ಮೂವಿಂಗ್‌ ಫೋಕಸ್‌)
ಅತ್ಯುತ್ತಮ ಧ್ವನಿ ವಿನ್ಯಾಸ: ಶುಭರುನ್ ಸೇನ್‌ಗುಪ್ತಾ (ಧುಂಧಗಿರಿ ಕೆ ಫೂಲ್)
ಅತ್ಯುತ್ತಮ ಛಾಯಾಗ್ರಹಣ: ಮೀನಾಕ್ಷಿ ಸೋಮನ್, ಸರವಣಮರುತು (ಲಿಟಲ್ ವಿಂಗ್ಸ್)
ಅತ್ಯುತ್ತಮ ನಿರ್ದೇಶನ: ಪಿಯೂಷ್ ಠಾಕೂರ್ (ದಿ ಫಸ್ಟ್‌ ಫಿಲ್ಮ್‌)
ಅತ್ಯುತ್ತಮ ಕಿರುಚಿತ್ರ: ಗಿದ್ಧ್: ದಿ ಸ್ಕ್ಯಾವೆಂಜರ್
ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ನಾನ್-ಫೀಚರ್ ಚಿತ್ರ: ದಿ ಸೈಲೆಂಟ್ ಎಪಿಡೆಮಿಕ್
ಅತ್ಯುತ್ತಮ ಸಾಕ್ಷ್ಯಚಿತ್ರ: ಗಾಡ್ ವಲ್ಚರ್ ಮತ್ತು ಹ್ಯೂಮನ್
ಅತ್ಯುತ್ತಮ ಕಲೆ/ಸಂಸ್ಕೃತಿ ಚಿತ್ರ: ಟೈಮ್‌ಲೆಸ್ ತಮಿಳುನಾಡು
ಅತ್ಯುತ್ತಮ ಜೀವನಚರಿತ್ರೆ/ಐತಿಹಾಸಿಕ ಪುನರ್ನಿರ್ಮಾಣ ಚಿತ್ರ: ಮೊ ಬೌ ಮೊ ಗಾನ್, ಲೆಂಟಿನಾ ಆವೊ
ಅತ್ಯುತ್ತಮ ಚೊಚ್ಚಲ ಚಿತ್ರ: ದಿ ಸ್ಪಿರಿಟ್ ಡ್ರೀಮ್ಸ್ ಆಫ್ ಚೆರಾವ್
ಅತ್ಯುತ್ತಮ ಕಾಲ್ಪನಿಕವಲ್ಲದ ಚಿತ್ರ: ಫ್ಲವರಿಂಗ್ ಮ್ಯಾನ್
ವಿಜೇತರನ್ನು ಅಧಿಕೃತವಾಗಿ ಬಹಿರಂಗಪಡಿಸುವ ಮೊದಲು ತೀರ್ಪುಗಾರರು ತಮ್ಮ ಅಂತಿಮ ವರದಿಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ಡಾ. ಎಲ್ ಮುರುಗನ್ ಅವರಿಗೆ ಸಲ್ಲಿಸಿದರು. ಈ ಪ್ರತಿಷ್ಠಿತ ಸಮಾರಂಭವು ಭಾರತದ ವೈವಿಧ್ಯಮಯ ಚಲನಚಿತ್ರೋದ್ಯಮಕ್ಕೆ ಸಾಕ್ಷಿಯಾಗಿದೆ.

ಪ್ರಮುಖ ಸುದ್ದಿ :-   ಬಂಗಾಳ ರಾಜಕೀಯದಲ್ಲಿ ಸುನಾಮಿ ; ದೀದಿಗೆ ಬಿಗ್ ಶಾಕ್ : ಟಿಂಎಂಸಿ ಶಾಸಕರ ಬೆಂಬಲದಿಂದಲೇ ವಿಧಾನಸಭೆ ವಿಪಕ್ಷದ ನಾಯಕನಾದ ಉಚ್ಚಾಟಿತ ಶಾಸಕ..!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement