ವೀಡಿಯೊ…| ಜೈಸಲ್ಮೇರಿನಲ್ಲಿ 21 ಕೋಟಿ ವರ್ಷಗಳಷ್ಟು ಜುರಾಸಿಕ್ ಯುಗದ ಹಳೆಯ ಪಳೆಯುಳಿಕೆಗಳು ಪತ್ತೆ…!

ಜೈಸಲ್ಮೇರ್: ರಾಜಸ್ಥಾನದ ಜೈಸಲ್ಮೇರ್‌ನ ಭೂ ವಿಜ್ಞಾನಿಗಳು ಬಹುಶಃ ಡೈನೋಸಾರ್ ಅವಶೇಷಗಳು ಸೇರಿದಂತೆ ಜುರಾಸಿಕ್ ಯುಗದ ಅಪರೂಪದ ಕಶೇರುಕದ(vertebrate) ಪಳೆಯುಳಿಕೆಗಳನ್ನು ಪತ್ತೆಹಚ್ಚಿದ್ದಾರೆ. ಇದು ಈ ಪ್ರದೇಶದ ಇತಿಹಾಸಪೂರ್ವ ಪರಿಸರ ವಿಜ್ಞಾನ ಮತ್ತು ಜೀವವೈವಿಧ್ಯದ ಬಗ್ಗೆ ಹೊಸ ಒಳನೋಟಗಳನ್ನು ನೀಡುತ್ತವೆ ಎಂದು ನಿರೀಕ್ಷಿಸಲಾಗಿದೆ.
ಪ್ರಾಥಮಿಕ ಅಧ್ಯಯನಗಳು ಪಳೆಯುಳಿಕೆಗಳು ಫೈಟೊಸಾರ್‌ಗೆ ಸೇರಿವೆ ಎಂದು ಸೂಚಿಸುತ್ತವೆ, ಫೈಟೊಸಾರ್‌ ಎಂಬುದು ನದಿ ವ್ಯವಸ್ಥೆಗಳ ಬಳಿಯ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಮೊಸಳೆ ತರಹದ ಸರೀಸೃಪವಾಗಿದೆ. ಭಾರತದಲ್ಲಿ ಜುರಾಸಿಕ್ ಶಿಲಾ ರಚನೆಗಳಲ್ಲಿ ಫೈಟೊಸಾರ್ ಪಳೆಯುಳಿಕೆಗಳು ಕಂಡುಬಂದಿರುವುದು ಇದೇ ಮೊದಲು. ಇದು ದೇಶದ ಪ್ಯಾಲಿಯಂಟೋಲಾಜಿಕಲ್ ದಾಖಲೆಯಲ್ಲಿ ಪ್ರಮುಖ ಮೈಲಿಗಲ್ಲು ಎಂದು ಹೇಳಲಾಗಿದೆ.

21 ಕೋಟಿ ವರ್ಷಗಳಷ್ಟು ಹಳೆಯ ಪಳೆಯುಳಿಕೆಗಳು
ಸುಮಾರು 21 ಕೋಟಿ ವರ್ಷಗಳಷ್ಟು ಹಳೆಯದಾದ ಪಳೆಯುಳಿಕೆಗಳು ಸೆಡಿಮೆಂಟರಿ ಬಂಡೆಯಲ್ಲಿ ಹುದುಗಿದ್ದವು ಮತ್ತು ಒಮ್ಮೆ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಇತರ ಇತಿಹಾಸಪೂರ್ವ ಸರೀಸೃಪಗಳ ಅವಶೇಷಗಳನ್ನು ಸಹ ಇದು ಒಳಗೊಂಡಿರಬಹುದು ಎಂದು ಊಹಿಸಲಾಗಿದೆ. ಭಾಗಶಃ ಸಂರಕ್ಷಿಸಲ್ಪಟ್ಟ ಫೈಟೊಸಾರ್‌ಗೆ ಸೇರಿದ ಅಸ್ಥಿಪಂಜರವು ಸುಮಾರು 1.5 ರಿಂದ 2 ಮೀಟರ್ ಉದ್ದವನ್ನು ಹೊಂದಿದೆ, ಇದು ಮಧ್ಯಮ ಗಾತ್ರದ ಜೀವಿ ಆಕಾರವನ್ನು ಸೂಚಿಸುತ್ತದೆ. ಅಲ್ಲದೆ, ಮಾದರಿಯ ಪಕ್ಕದಲ್ಲಿ ಒಂದು ಮೊಟ್ಟೆ ಸಹ ಪತ್ತೆಯಾಗಿದೆ, ಇದು ಅದರ ಎಡಭಾಗದಲ್ಲಿ ಇತ್ತು.
ಈ ಸಂಶೋಧನೆಯು ಅಪಾರ ವೈಜ್ಞಾನಿಕ ಮೌಲ್ಯವನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ, ಏಕೆಂದರೆ ಇದು ಪಶ್ಚಿಮ ರಾಜಸ್ಥಾನದ ಪ್ರಾಚೀನ ಪರಿಸರದ ಮೇಲೆ ಬೆಳಕು ಚೆಲ್ಲುತ್ತದೆ ಮತ್ತು ಭಾರತದಲ್ಲಿ ಅಪರೂಪವಾಗಿರುವ ಕಶೇರುಕ ಪಳೆಯುಳಿಕೆಗಳು ಪತ್ತೆಯಾಗಿರುವುದು ಆವಿಷ್ಕಾರಕ್ಕೆ ಜಾಗತಿಕ ಮಹತ್ವವನ್ನು ನೀಡುತ್ತದೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ರಾಜಸ್ಥಾನದಲ್ಲಿ ಜುರಾಸಿಕ್ ಯುಗದ ಬಗ್ಗೆ ಸುಳಿವುಗಳು
ಸಂಶೋಧನೆಯ ನೇತೃತ್ವ ವಹಿಸಿರುವ ರಾಜಸ್ಥಾನದ ಭೂವಿಜ್ಞಾನಿ ಮತ್ತು ಹಿರಿಯ ಅಂತರ್ಜಲ ವಿಜ್ಞಾನಿ ನಾರಾಯಣ ದಾಸ ಇನಿಖಿಯಾ ಅವರು, “ಈ ಪಳೆಯುಳಿಕೆಗಳು ಪಶ್ಚಿಮ ರಾಜಸ್ಥಾನದ ಜುರಾಸಿಕ್ ಯುಗದ ಪರಿಸರದ ಬಗ್ಗೆ ಪ್ರಮುಖ ಸುಳಿವುಗಳನ್ನು ನೀಡುತ್ತವೆ. ಕಾರ್ಬನ್ ಡೇಟಿಂಗ್ ಸೇರಿದಂತೆ ಹೆಚ್ಚಿನ ಅಧ್ಯಯನಗಳು ಈ ಅವಶೇಷಗಳು ಡೈನೋಸಾರ್‌ಗೆ ಸೇರಿವೆಯೇ ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದ್ದಾರೆ.
ಉತ್ಖನನ ಸ್ಥಳದಲ್ಲಿ ಸ್ಥಳೀಯ ಅಧಿಕಾರಿಗಳು ಮತ್ತು ಸಂಶೋಧಕರು ಪಳೆಯುಳಿಕೆಗಳನ್ನು ಸಂರಕ್ಷಿಸಲು ಮತ್ತು ಹೆಚ್ಚುವರಿ ಅಗೆಯುವಿಕೆಯನ್ನು ಯೋಜಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಜೈಸಲ್ಮೇರ್‌ನ ಮರುಭೂಮಿ ತನ್ನ ಪ್ರಾಚೀನ ಗತಕಾಲದ ರಹಸ್ಯಗಳನ್ನು ಬಹಿರಂಗಪಡಿಸುತ್ತಲೇ ಇದೆ, ಈ ಆವಿಷ್ಕಾರವು ಭೂವಿಜ್ಞಾನಿಗಳು, ಇತಿಹಾಸಕಾರರು ಮತ್ತು ಸ್ಥಳೀಯ ನಿವಾಸಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement