ನರೇಂದ್ರ ಮೋದಿ ಅವರು ಭಾರತದ ಚುಕ್ಕಾಣಿ ಹಿಡಿದ 11 ವರ್ಷಗಳಲ್ಲಿ ಪ್ರತಿಕೂಲ ಪರಿಸ್ಥಿತಿಗಳಿದ್ದರೂ ಜನಪ್ರಿಯತೆಯಲ್ಲಿ ಯಾವಾಗಲೂ ಉತ್ತಮ ನಾಯಕರಾಗಿ ಹೊರಹೊಮ್ಮಿದ್ದಾರೆ. ಈಗ ಅವರ ಮೂರನೇ ಅವಧಿಯ ಎರಡನೇ ವರ್ಷದಲ್ಲಿ ಕಠಿಣ ಸವಾಲನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ಅಮೆರಿಕ ವಿಧಿಸಿದ ಸುಂಕದಿಂದ ಈ ಸವಾಲು ಎದುರಾಗಿದೆ. ಟ್ರಂಪ್ ಭಾರತದ ರಫ್ತಿನ ಮೇಲೆ 50 ಪ್ರತಿಶತ ಸುಂಕವನ್ನು ವಿಧಿಸಿದ್ದು, ಇದು ಭಾರತದ ಆರ್ಥಿಕ ಬೆಳವಣಿಗೆಗೆ ಹಾನಿ ಮಾಡುವ ಸಾಧ್ಯತೆಯಿದೆ.
ಈ ನಿರ್ಣಾಯಕ ಹಂತದಲ್ಲಿ, ಇಂಡಿಯಾ ಟುಡೇ ದ್ವೈವಾರ್ಷಿಕ ಮೂಡ್ ಆಫ್ ದಿ ನೇಷನ್ (MOTN) ಸರ್ವೆಯು ಪ್ರಧಾನ ಮಂತ್ರಿಗೆ ಇನ್ನೂ ಭಾರತೀಯ ಮತದಾರರ ಬೆಂಬಲ ಮತ್ತು ನಂಬಿಕೆ ಇದೆ ಎಂದು ಪ್ರತಿಬಿಂಬಿಸಿದೆ. ಸರ್ವೆಗೆ ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 58 ರಷ್ಟು ಜನರು ಪ್ರಧಾನಿಯಾಗಿ ಮೋದಿಯವರ ಕಾರ್ಯಕ್ಷಮತೆ ‘ಉತ್ತಮ’ ಅಥವಾ ‘ಅತ್ಯುತ್ತಮ’ ಎಂದು ನಂಬಿದ್ದಾರೆ. ಇದು ಫೆಬ್ರವರಿ 2025 ರ ಮೂಡ್ ಆಫ್ ದಿ ನೇಷನ್ (MOTN) ಸರ್ವೆಗಿಂತ 3.8 ಶೇಕಡಾ ಕುಸಿತವಾಗಿರಬಹುದು, ಆದರೆ 2024 ರ ಸಾರ್ವತ್ರಿಕ ಚುನಾವಣೆಯ ನಂತರ ಅವರ ರೇಟಿಂಗ್‌ಗಳಿಗೆ ಹೊಂದಿಕೆಯಾಗುತ್ತದೆ.
ಭಾರತದ ಮುಂದಿನ ಪ್ರಧಾನಿಯಾಗಲು ಯಾರು ಸೂಕ್ತ ಎಂಬುದಕ್ಕೆ ಪ್ರತಿಕ್ರಿಯಿಸಿದವರಲ್ಲಿ ಫೆಬ್ರವರಿಯಲ್ಲಿ ಶೇ. 51.2 ಕ್ಕೆ ಹೋಲಿಸಿದರೆ ಈಗ ಮೋದಿ ಶೇ. 51.5 ರಷ್ಟು ಅನುಮೋದನೆ ಪಡೆದಿದ್ದಾರೆ ಅವರ ಪ್ರಮುಖ ಎದುರಾಳಿ – ವಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ರೇಟಿಂಗ್ ಶೇಕಡಾ 24.7 ರಷ್ಟಿದೆ, ಅಂದರೆ ಮೋದಿಯವರು ಶೇಕಡಾ 27 ರಷ್ಟು ಮುನ್ನಡೆ ಉಳಿಸಿಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಯೋಗಿ ಆದಿತ್ಯನಾಥ್ ತಲಾ 2%ರಷ್ಟು ಜನಪ್ರಿಯತೆ ಪಡೆದಿದ್ದಾರೆ. ಆದರೂ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ದೇಶದ ಅತ್ಯುತ್ತಮ ಮುಖ್ಯಮಂತ್ರಿ ಎಂದು ಪ್ರತಿಕ್ರಿಯಿಸಿದವರು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಕೂಡ ಇತ್ತೀಚಿನ ಮೂಡ್ ಆಫ್ ದಿ ನೇಷನ್ (MOTN) ಸರ್ವೆಯಲ್ಲಿ ಸ್ವಲ್ಪ ಸಮಾಧಾನ ಪಡೆದಿದೆ. ಈಗ ಸಾರ್ವತ್ರಿಕ ಚುನಾವಣೆ ನಡೆದರೆ, ಎನ್‌ಡಿಎ ಲೋಕಸಭೆಯ 543 ಸ್ಥಾನಗಳಲ್ಲಿ 324 ಸ್ಥಾನಗಳನ್ನು ಪಡೆಯುತ್ತದೆ, ಇದು ಸರಳ ಬಹುಮತಕ್ಕೆ ಅಗತ್ಯಕ್ಕಿಂತ 52 ಹೆಚ್ಚಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ