ಶಿರಸಿ : ಬೆಣ್ಣೆಹೊಳೆ ಜಲಪಾತಕ್ಕೆ ಹೋಗಿದ್ದ ಓರ್ವ ನಾಪತ್ತೆ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಂಡಲ ಸಮೀಪದ ಬೆಣ್ಣೆಹೊಳೆ ಜಲಪಾತ ನೋಡಲು ಭಾನುವಾರ ತೆರಳಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ನಾಪತ್ತೆಯಾಗಿದ್ದಿನ್ನೋರ್ವ ವಿದ್ಯಾರ್ಥಿಯನ್ನು ಶೋಧ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಲಾಗಿದೆ ಎಂದು ಹೇಳಲಾಗಿದೆ.
ನಗರದ ಅರಣ್ಯ ಪದವಿ ಕಾಲೇಜಿನ ರಾಹುಲ್ ಎಂಬಾತ ನೀರಿನಲ್ಲಿ ಕಣ್ಮರೆಯಾದ ವಿದ್ಯಾರ್ಥಿ. ಎನ್ನಲಾಗಿದೆ. ಪೊಲೀಸರು, ಮುಳುಗು ತಜ್ಞ ಗೋಪಾಲಗೌಡ ನೇತೃತ್ವದ ತಂಡ, ಅಗ್ನಿಶಾಮಕದಳದವರು ಶೋಧ ಕಾರ್ಯ ನಡೆಸಿದ್ದಾರೆ. ಅಪಾಯಕ್ಕೆ ಸಿಲುಕಿದ್ದ ಇನ್ನೊಬ್ಬ ವಿದ್ಯಾರ್ಥಿ ಶ್ರೀನಿವಾಸ ಎಂಬಾತನನ್ನು ಹಗ್ಗ ಹಾಕಿ ಮೇಲಕ್ಕೆ ತರಲಾಯಿತಲ್ಲದೇ ಅಸ್ವಸ್ಥಗೊಂಡಿದ್ದ ಆತನನ್ನು ಅಲ್ಲಿಂದ ಬೆಟ್ಟದ ಹಾದಿಯಲ್ಲಿ ಕಂಬಳಿಯಲ್ಲಿ ಹೊತ್ತು ತಂದು ನಗರದ ಆಸ್ಪತ್ರೆಗೆ ಸೇರಿಸಲಾಗಿದೆ ಎನ್ನಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 / 5. 2

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ನಿಮ್ಮ ಕಾಮೆಂಟ್ ಬರೆಯಿರಿ

advertisement