ಹಾಕಿ | 8 ವರ್ಷಗಳ ನಂತರ ಏಷ್ಯಾ ಕಪ್ ಪ್ರಶಸ್ತಿ ಗೆದ್ದ ಭಾರತ; ವಿಶ್ವಕಪ್‌ ಗೆ ಅರ್ಹತೆ

ನವದೆಹಲಿ: ಸೆಪ್ಟೆಂಬರ್ 7 ರ ಭಾನುವಾರ ರಾಜಗಿರ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೊರಿಯಾ ವಿರುದ್ಧ 4-1 ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತನ್ನ 8 ವರ್ಷಗಳ ನಂತರ ಏಷ್ಯಾ ಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಭಾರತದ ಪರವಾಗಿ ದಿಲ್‌ಪ್ರೀತ್ ಸಿಂಗ್ ಎರಡು ಗೋಲುಗಳನ್ನು ಗಳಿಸಿದರೆ, ಸುಖಜೀತ್ ಸಿಂಗ್ ಮೊದಲ ನಿಮಿಷದಲ್ಲೇ ಗೋಲು ಗಳಿಸಿದರು ಮತ್ತು ಅಮಿತ್ ರೋಹಿದಾಸ್ ಅಂತಿಮ ಕ್ವಾರ್ಟರ್‌ನಲ್ಲಿ ಗೋಲು ಹೊಡೆದರು. ಇದು ಭಾರತದ ನಾಲ್ಕನೇ ಏಷ್ಯಾ ಕಪ್ ಪ್ರಶಸ್ತಿಯಾಗಿದೆ.
2017 ರಲ್ಲಿ ಢಾಕಾದಲ್ಲಿ ನಡೆದ ಫೈನಲ್‌ನಲ್ಲಿ ಮಲೇಷ್ಯಾವನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದು ಏಷ್ಯಾಕಪ್‌ ಸ್ಪರ್ಧೆಯಲ್ಲಿ ಭಾರತದ ಕೊನೆಯ ಪ್ರಶಸ್ತಿಯಾಗಿತ್ತು. ಭಾರತವು ಈಗ ಪ್ರಶಸ್ತಿಯ ಬರವನ್ನು ನೀಗಿಸಿದೆ. ಆತಿಥೇಯ ತಂಡವಾದ ಭಾರತವು ಏಷ್ಯಾಕಪ್‌ ಪಂದ್ಯವಾಳಿಯಲ್ಲಿ ಅಜೇಯ ತಂಡವಾಗಿ ಪ್ರಶಸ್ತಿ ಗೆದ್ದಿರುವುದು ಮತ್ತೊಂದು ವಿಶೇಷವಾಗಿದೆ.

ಭಾನುವಾರ ನಡೆದ ಆರಂಭಿಕ ಪಂದ್ಯದಲ್ಲಿ ಮಲೇಷ್ಯಾವು ಚೀನಾ ವಿರುದ್ಧ 4-1 ಅಂತರದ ಜಯದೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿತು ಮತ್ತು ಜಪಾನ್ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ 5 ನೇ ಸ್ಥಾನ ಗಳಿಸಿತು.
ಭಾರತ-ದಕ್ಷಿಣ ಕೊರಿಯಾದ ನಡುವಿನ ಪ್ರಶಸ್ತಿ ಪಂದ್ಯದಲ್ಲಿ ಭಾರತ ತಂಡವು 30 ಸೆಕೆಂಡುಗಳ ಒಳಗೆ ಮೊದಲ ಗೋಲು ಗಳಿಸುವ ಮೂಲಕ ಅತ್ಯುತ್ತಮ ಆರಂಭವನ್ನು ಪಡೆಯಿತು. ಗೋಲು ಗಳಿಸಿದ ತಕ್ಷಣ ಕೊರಿಯಾ ಆತಿಥೇಯರ ಮೇಲೆ ಒತ್ತಡ ಹೇರಲು ಪ್ರಾರಂಭಿಸಿತು, ಆದರೆ ಪಂದ್ಯಾವಳಿಯಲ್ಲಿ ಎರಡೂ ತಂಡಗಳ ನಡುವಿನ ಮೊದಲ ಮುಖಾಮುಖಿಯಲ್ಲಿ ಭಾರತ ತನ್ನ ತಪ್ಪುಗಳಿಂದ ಪಾಠ ಕಲಿತಂತೆ ತೋರುತ್ತಿತ್ತು.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

ಆದರೆ ಹರ್ಮನ್‌ಪ್ರೀತ್‌ ಅವರಿಂದ ಸಂಜಯಗೆ ಬಂದ ಲಾಂಗ್ ಬಾಲ್ 28 ನೇ ನಿಮಿಷದಲ್ಲಿ ಆತಿಥೇಯರಿಗೆ ಎರಡನೇ ಗೋಲು ಗಳಿಸಲು ಕಾರಣವಾಯಿತು. ಡಿಫೆಂಡರ್ ದಿಲ್‌ಪ್ರೀತ್ ಸಿಂಗ್‌ಗೆ ಅವಕಾಶ ಮಾಡಿಕೊಟ್ಟರು. ನಂತರ ಸಂಜಯಗೆ ಸ್ವತಃ ಗೋಲು ಗಳಿಸುವ ಅವಕಾಶ ಸಿಕ್ಕಿತು ಆದರೆ ಅವರ ರಿವರ್ಸ್ ಶಾಟ್ ಗುರಿ ತಪ್ಪಿತು. 44 ನೇ ನಿಮಿಷದಲ್ಲಿ ದಿಲ್‌ಪ್ರೀತ್ ತನ್ನ ಎರಡನೇ ಗೋಲು ಗಳಿಸಿದರು. ಅಂತಿಮವಾಗಿ ಭಾರತದ ತಂಡವು ಕೊರುಯಾ ವಿರುದ್ಧ 4-1 ಗೋಲುಗಳಿಂದ ಜಯಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement