ಬ್ರಿಟಿಷ್ ಅಧಿಕಾರಿಗಳಿಂದ ತಿಹಾರ್ ಜೈಲು ಪರಿಸ್ಥಿತಿ ಪರಿಶೀಲನೆ; ಭಾರತಕ್ಕೆ ಮಲ್ಯ, ಮೋದಿ ಇತರರ ಹಸ್ತಾಂತರದ ಕಾಲ ಸನ್ನಿಹಿತ..?

ನವದೆಹಲಿ : ಭಾರತದಲ್ಲಿ ವಿವಿಧ ಹಗರಣಗಳಲ್ಲಿ ಭಾಗಿಯಾದ ಆರೋಪಗಳನ್ನು ಹೊತ್ತು ದೇಶದ ಕಾನೂನಿನಿಂದ ತಪ್ಪಿಸಿಕೊಳ್ಳು ಬ್ರಿಟನ್ನಿ​ಗೆ ಪಲಾಯನಗೈದ ವಿಜಯ ಮಲ್ಯ, ನೀರವ್ ಮೋದಿ ಮತ್ತಿತರರು ಭಾರತದ ವಶಕ್ಕೆ ಹಸ್ತಾಂತರವಾಗುವ ಸನ್ನಿಹಿತವಾದಂತೆ ಕಾಣುತ್ತಿದೆ.
ಬ್ರಿಟನ್​ನ ಅಧಿಕಾರಿಗಳ ತಂಡವೊಂದು ದೆಹಲಿಯ (Delhi) ತಿಹಾರ್ ಜೈಲಿನ ಪರಿಸ್ಥಿತಿಯನ್ನು ಇತ್ತೀಚಿಗೆ ಪರಿಶೀಲನೆ ನಡೆಸಿದೆ ಎಂದು ವರದಿಯಾಗಿದ್ದು, ಇದು ಅವರು ಭಾರತಕ್ಕೆ ಹಸ್ತಾಂತರವಾಗುವ ಕಾಲ ಸನ್ನಿಹಿತವಾಗಿದೆ ಎಂಬುದ್ಕ್ಕೆ ಪುಷ್ಟಿ ನೀಡುತ್ತಿದೆ. ಎಎನ್​ಐ ವರದಿ ಪ್ರಕಾರ ಬ್ರಿಟಿಷ್ ಕ್ರೌನ್ ಪ್ರಾಸಿಕ್ಯೂಶನ್ ಸರ್ವಿಸ್​ನಿಂದ ಒಂದು ತಂಡವನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ಈ ಅಧಿಕಾರಿಗಳು ಕಾರಾಗೃಹಕ್ಕೆ ಹೋಗಿ ಅಲ್ಲಿರುವ ಖೈದಿಗಳ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಬ್ರಿಟನ್ ದೇಶದಲ್ಲಿ ಜೈಲು ನಿಯಮಾವಳಿಗಳು ಬಿಗಿಯಾಗಿವೆ. ಅಲ್ಲಿ ಆರೋಪಿ ಮತ್ತು ಅಪರಾಧಿಗಳನ್ನು ಮಾನವೀಯತೆಯಿಂದ ನಡೆಸಿಕೊಳ್ಳಬೇಕು ಎಂಬ ಕಾನೂನುಗಳಿವೆ. ಭಾರತದ ಜೈಲುಗಳಲ್ಲಿ ಖೈದಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತದೆ. ಕಾರಾಗೃಹಗಳಲ್ಲಿ ಮೂಲಭೂತ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ಭಾರತದಲ್ಲಿ ಹಗರಣಗಳನ್ನು ಮಾಡಿ ಪರಾರಿಯಾಗಿರುವ ಹಲವರು ಇವೇ ವಿಚಾರ ಮುಂದಿಟ್ಟುಕೊಂಡು ಅಲ್ಲಿರುವ ನ್ಯಾಯಾಲಯಗಳಿಂದ ಭಾರತಕ್ಕೆ ಹಸ್ತಾಂತರಗೊಳ್ಳುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ವಿಜಯ ಮಲ್ಯ, ನೀರವ್ ಮೋದಿ ಮೊದಲಾದವರು ಇದೇ ತಂತ್ರ ಅನುಸರಿಸುತ್ತಿರುವುದು ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಆದರೆ, ಭಾರತವು ಈ ಆರೋಪಿಗಳನ್ನು ಒಪ್ಪಿಸಬೇಕು ಎಂದು ಬ್ರಿಟನ್ ಮೇಲೆ ಹೆಚ್ಚಿನ ಒತ್ತಡ ಹಾಕುತ್ತಿದೆ. ಈ ಕಾರಣಕ್ಕೆ ಅಧಿಕಾರಿಗಳ ತಂಡವೊಂದನ್ನು ಬ್ರಿಟನ್ ತಿಹಾರ್ ಜೈಲಿಗೆ ಕಳುಹಿಸಿದೆ. ಅಗತ್ಯ ಬಿದ್ದರೆ ತಿಹಾರ್ ಜೈಲಿನ ಅಂಗಳದಲ್ಲೇ ವಿಶೇಷ ಸೆಲ್‌ ನಿರ್ಮಿಸಲು ಸಿದ್ಧರಿರುವುದಾಗಿ ಬ್ರಿಟನ್ ಅಧಿಕಾರಿಗಳಿಗೆ ತಿಹಾರ್ ಜೈಲಿನ ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ. ಇಂಡಿಯಾ ಟುಡೇ ವರದಿ ಪ್ರಕಾರ ಜುಲೈ ತಿಂಗಳಲ್ಲಿ ಬ್ರಿಟಿಷ್ ಅಧಿಕಾರಿಗಳು ತಿಹಾರ್ ಜೈಲಿಗೆ ಭೇಟಿ ಕೊಟ್ಟಿರುವುದು ಗೊತ್ತಾಗಿದೆ. ಈ ತಂಡದಲ್ಲಿ ಬ್ರಿಟನ್ ರಾಯಭಾರಿ ಅಧಿಕಾರಿಗಳೂ ಕೂಡ ಇದ್ದರು ಎಂಬ ಮಾಹಿತಿ ಇದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement