ತನ್ನ ಮೇಲೆ ದಾಳಿ ಮಾಡಿದ ನರಿ ಜೊತೆ 30 ನಿಮಿಷ ಹೋರಾಡಿ ನರಿಯನ್ನೇ ಕೊಂದು ಹಾಕಿದ 65 ವರ್ಷದ ವೃದ್ಧೆ…!

ಭೋಪಾಲ : ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದ ಅಸಾಮಾನ್ಯ ಘಟನೆಯೊಂದರಲ್ಲಿ 65 ವರ್ಷದ ಮಹಿಳೆಯೊಬ್ಬರು ನರಿಯ ದಾಳಿಯನ್ನು ಧೈರ್ಯದಿಂದ ಎದುರಿಸಿ ಅದನ್ನೇ ಸಾಯಿಸಿದ್ದಾರೆ ಎಂದು ವರದಿಯಾಗಿದೆ.
ಹೊಲದಲ್ಲಿ ಮೇವು ಕತ್ತರಿಸುತ್ತಿದ್ದಾಗ ನರಿ 65 ವರ್ಷದ ವೃದ್ಧೆಯ ಮೇಲೆ ದಾಳಿ ಮಾಡಿದೆ. ಸುಮಾರು 30 ನಿಮಿಷಗಳ ಕಾಲ ನರಿಯೊಂದಿಗೆ ಹೋರಾಡಿದ ವೃದ್ಧೆ, ನಂತರ ತನ್ನ ಸೀರೆಯ ಅಂಚಿನಿಂದ ನರಿಯ ಕುತ್ತಿಗೆ ಸುತ್ತಿ ಉಸಿರುಗಟ್ಟಿಸಿ ಸಾಯಿಸಿದ್ದಾರೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಸೂರಜಿಯಾ ಬಾಯಿ ಜಾತವ್ ಎಂಬ ವೃದ್ಧೆ ನರಿಯ ದಾಳಿಯಿಂದ ಗಾಯಗೊಂಡಿದ್ದಾರೆ. ನಂತರ ಪ್ರಜ್ಞೆ ತಪ್ಪಿದರು. ಗ್ರಾಮಸ್ಥರು ಆಕೆಯನ್ನು ಹೊಲದಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದನ್ನು ಕಂಡ ನಂತರ ಆಸ್ಪತ್ರೆಗೆ ಕರೆದೊಯ್ದರು. ಮಂಗಳವಾರ ಆಕೆಗೆ ಪ್ರಜ್ಞೆ ಬಂದಾಗ ಅವರು ಆಸ್ಪತ್ರೆಯ ಹಾಸಿಗೆಯ ಮೇಲಿದ್ದರು.

ಶಿವಪುರಿ ಜಿಲ್ಲೆಯ ಬದರ್ವಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಬರ್ಖಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಧವೆ ಮತ್ತು ಸಣ್ಣ ರೈತೆಯಾಗಿರುವ ಸೂರಜಿಯಾ ಬಾಯಿ ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಮೇವು ಕತ್ತರಿಸಲು ಹೊಲಕ್ಕೆ ಹೋಗಿದ್ದರು. ಹುಲ್ಲಿನ ಕಟ್ಟು ಎತ್ತಲು ಬಾಗುತ್ತಿದ್ದಾಗ, ಇದ್ದಕ್ಕಿದ್ದಂತೆ ನರಿ ಆಕೆಯ ಮೇಲೆ ದಾಳಿ ಮಾಡಿತು. ಆ ನರಿ ಮೊದಲು ಆಕೆಯ ಕಾಲುಗಳು ಮತ್ತು ಕೈಗಳನ್ನು ಪದೇ ಪದೇ ಕಚ್ಚಿತು. “ಆ ಕ್ಷಣದಲ್ಲಿ, ನಾನು ಸಾಯುತ್ತೇನೆ ಎಂದು ನಾನು ಭಾವಿಸಿದ್ದೆ ಎಂದು ಸೂರಜಿಯಾ ಬಾಯಿ ಹೇಳಿದ್ದಾರೆ.
ಧೈರ್ಯ ಮತ್ತು ಬದುಕುಳಿಯುವ ಹೋರಾಟ
ಒಂಟಿಯಾಗಿದ್ದರೂ, ನರಿ ದಾಳಿಯಿಂದ ರಕ್ತದಲ್ಲಿ ತೊಯ್ದು ದುರ್ಬಲಳಾಗಿದ್ದರೂ, ಸೂರಾಜಿಯಾ ಬಾಯಿ ಧೈರ್ಯ ಕಳೆದುಕೊಳ್ಳಲಿಲ್ಲ. ಅವರು ಎರಡೂ ಕೈಗಳಿಂದ ನರಿಯ ದವಡೆಗಳನ್ನು ಗಟ್ಟಿಯಾಗಿ ಹಿಡಿದು ಸುಮಾರು 20 ನಿಮಿಷಗಳ ಕಾಲ ಅದರೊಂದಿಗೆ ಹೋರಾಡಿದರು.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ದಣಿದು ರಕ್ತಸ್ರಾವವಾಗುತ್ತಿದ್ದ ಅವರು ನಂತರ ತನ್ನ ಸೀರೆಯ ಒಂದು ಭಾಗವನ್ನು ಹರಿದು, ಕುಣಿಕೆಯನ್ನು ಮಾಡಿ, ಅದನ್ನು ನರಿಯ ಕುತ್ತಿಗೆಗೆ ಸುತ್ತಿ, ನರಿ ಸಾಯುವವರೆಗೂ ತನ್ನ ಎಲ್ಲಾ ಶಕ್ತಿ ಹಾಕಿ ಬಿಗಿಯಾಗಿ ಎಳೆದುಹಿಡಿದುಕೊಂಡರು. ನಂತರ ಪ್ರಜ್ಞೆ ತಪ್ಪಿದರು.
ತಡರಾತ್ರಿಯವರೆಗೆ ಅವರು ಹೊಲದಿಂದ ಬರದೇ ಇರುವುದನ್ನು ಗ್ರಾಮಸ್ಥರು ಸೂರಾಜಿಯಾ ಬಾಯಿ ಅವರನ್ನು ಹುಡುಕಲು ಪ್ರಾರಂಭಿಸಿದರು. ಕೆಲವು ಗಂಟೆಗಳ ನಂತರ ಪ್ರಜ್ಞಾಹೀನರಾಗಿ ಹೊದಲ್ಲಿ ಬಿದ್ದಿರುವುದು ಕಂಡಬಂತು. ತಕ್ಷಣವೇ ಅವರನ್ನು ಮೊದಲು ಬದರ್ವಾಸ್ ಆರೋಗ್ಯ ಕೇಂದ್ರಕ್ಕೆ ಮತ್ತು ನಂತರ ಶಿವಪುರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಮಧ್ಯರಾತ್ರಿಯ ನಂತರ ಅವರಿಗೆ ಪ್ರಜ್ಞೆ ಮರಳಿ ಬಂದಾಗ ಕುಟುಂಬ ಸದಸ್ಯರು ನಿಟ್ಟುಸಿರು ಬಿಟ್ಟರು. ವೈದ್ಯರು ಅವರ ದೇಹದ ಮೇಲೆ 18 ಆಳವಾದ ಗಾಯಗಳಾಗಿವೆ ಎಂದು ಹೇಳಿದ್ದಾರೆ. ಆದರೆ ತಲೆ, ಕುತ್ತಿಗೆ ಮತ್ತು ಹೊಟ್ಟೆಯಂತಹ ಪ್ರಮುಖ ಪ್ರದೇಶಗಳಿಗೆ ಗಾಯಗಳಾಗಿರಲಿಲ್ಲ.

5 / 5. 1

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement