ಟಿ20 ಏಶಿಯಾ ಕಪ್‌ 2025 ; ಪಾಕಿಸ್ತಾನದ ವಿರುದ್ಧ ಭಾರತಕ್ಕೆ 7 ವಿಕೆಟ್‌ ಗಳ ಭರ್ಜರಿ ಜಯ

ದುಬೈ: ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಗ್ರೂಪ್ ಎ ಪಂದ್ಯದಲ್ಲಿ ಇನ್ನೂ 25 ಎಸೆತಗಳು ಬಾಕಿ ಇರುವಾಗಲೇ ಭಾರತವು ಪಾಕಿಸ್ತಾನದ ವಿರುದ್ಧ 7 ವಿಕೆಟ್‌ಗಳಿಂದ ಭರ್ಜರಿ ಜಯಗಳಿಸಿತು.
ಭಾರತದ ಆರಂಭಿಕ ಆಟಗಾರರಾದ ಶುಭಮನ್ ಗಿಲ್ 10 ರನ್ ಗಳಿಸಿ ಸ್ಟಂಪ್ಡ್ ಆದ ನಂತರ ಕೇವಲ 13 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 31 ರನ್ ಗಳಿಸಿದ್ದ ಅಭಿಷೇಕ ಶರ್ಮಾ ಸಹ ನಿರ್ಗಮಿಸಿದರು.
ಆದರೆ ಭಾರತದ ತಂಡದ ನಾಯಕ ಸೂರ್ಯಕುಮಾರ ಯಾದವ್ ಮತ್ತು ತಿಲಕ್ ವರ್ಮಾ ಮೂರನೇ ವಿಕೆಟ್‌ಗೆ 56 ರನ್‌ಗಳ ಜೊತೆಯಾಟ ನೀಡಿದರು. ನಂತರ ಸೈಮ್ ಅಯೂಬ್ 31 ರನ್ ಗಳಿಸಿದ್ದ ತಿಲಕ್ ವರ್ಮಾ ಅವರನ್ನು ಕ್ಲೀನ್ ಬೌಲ್ಡ್‌ ಮಾಡಿದರು. ಭಾರತದ ನಾಯಕ ಅಜೇಯ 37 ಎಸೆತಗಳಲ್ಲಿ 47 ರನ್ ಗಳಿಸಿದರು ಮತ್ತು ಶಿವಂ ದುಬೆ ಅವರ ಜೊತೆ ಸೇರಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು.
ಟಾಸ್‌ ಗೆದ್ದು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನವನ್ನು ಕಟ್ಟಿ ಹಾಕುವಲ್ಲಿ ಭಾರತದ ಸ್ಪಿನ್ನರ್‌ಗಳಾದ
ಕುಲದೀಪ ಯಾದವ್, ಅಕ್ಷರ ಪಟೇಲ್ ಅವರ ಶಿಸ್ತು ಮತ್ತು ವರುಣ ಚಕ್ರವರ್ತಿ ಯಶಸ್ವಿಯಾದರು. ಭಾರತದ ಉತ್ತಮ ಬೌಲಿಂಗ್‌ನಿಂದಾಗಿ ಪಾಕಿಸ್ತಾನವು ನಿಗದಿತ 20 ಓವರ್‌ಗಳಲ್ಲಿ ಕೇವಲ 127/9ಕ್ಕೆ ಸೀಮಿತಗೊಳ್ಳುವಂತಾಯಿತು.
ಸ್ಪಿನ್ನರ್‌ಗಳಾದ ಅಕ್ಷರ್ (4 ಓವರ್‌ಗಳಲ್ಲಿ 2/18), ಕುಲದೀಪ ಯಾದವ್‌ (4 ಓವರ್‌ಗಳಲ್ಲಿ 3/18), ಮತ್ತು ವರುಣ ಚಕ್ರವರ್ತಿ (4 ಓವರ್‌ಗಳಲ್ಲಿ 1/24) ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ‌ ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳು ಹೆಣಗಾಡುವಂತೆ ಮಾಡಿದರು.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

ಅಕ್ಷರ, ಕುಲದೀಪ ಮತ್ತು ವರುಣ ಸೇರಿ 40 ಡಾಟ್ ಬಾಲ್‌ಗಳನ್ನು ಮಾಡಿದರು. ಪಾಕಿಸ್ತಾನದ ಬೌಲರ್‌ ಶಹೀನ್ ಶಾ ಅಫ್ರಿದಿ (16 ಎಸೆತಗಳಲ್ಲಿ 33 ನಾಟ್ ಔಟ್) ಅವರ ಆಕ್ರಮಣಕಾರಿ ಬ್ಯಾಟಿಂಗ್ ಇಲ್ಲದಿದ್ದರೆ, ಸ್ಕೋರ್ ಪಾಕಿಸ್ತಾನದ ಮೊತ್ತವು 120 ಅನ್ನು ದಾಟುತ್ತಿರಲಿಲ್ಲ.
ಟಾಸ್‌ಗೆ ಬಂದ ಸೂರ್ಯಕುಮಾರ ಯಾದವ್ ಹಾಗೂ ಪಾಕಿಸ್ತಾನದ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಪರಸ್ಪರ ಕೈಕುಲುಕಲಿಲ್ಲ, ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಆರಂಭದಲ್ಲೇ ಎಡವಿದರು. ಹೆಚ್ಚು ರೇಟಿಂಗ್ ಪಡೆದ ಸೈಮ್ ಅಯೂಬ್ (0) ಹಾರ್ದಿಕ್ ಪಾಂಡ್ಯ (3 ಓವರ್‌ಗಳಲ್ಲಿ 1/34) ಬೌಲಿಂಗ್‌ನಲ್ಲಿ ಬುಮ್ರಾಗೆ ಪಾಯಿಂಟ್‌ನಲ್ಲಿ ಕ್ಯಾಚಿತ್ತು ಔಟಾದರು. ನಂತರ ಬುಮ್ರಾ (4 ಓವರ್‌ಗಳಲ್ಲಿ 2/28) ಕಳೆದ ಪಂದ್ಯದ ಟಾಪ್ ಸ್ಕೋರರ್ ಮೊಹಮ್ಮದ್ ಹ್ಯಾರಿಸ್ (3) ಅವರನ್ನು ಔಟ್ ಮಾಡಿದರು. ಪಾಕಿಸ್ತಾನದ ಪರ ಸಾಹಿಬ್‌ ಜಾದಾ ಫರ್ಹಾನ್ (44 ಎಸೆತಗಳಲ್ಲಿ 40) ಬುಮ್ರಾ ಎಸೆತದಲ್ಲಿ ಕೆಲವು ಸಿಕ್ಸರ್‌ಗಳನ್ನು ಗಳಿಸಿದರು ಆದರೆ ಭಾರತೀಯ ಸ್ಪಿನ್ನರ್‌ಗಳ ವಿರುದ್ಧ ಪಾಕಿಸ್ತಾನದ ಆಟಗಾರರು ಪರದಾಡಿದರು. ಅಂತಿಮವಾಗಿ ಭಾರತವು ಪಾಕಿಸ್ತಾನದ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಜಯಗಳಿಸಿತು.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement