H-1B ವೀಸಾಗಳ ಮೇಲೆ ಹೊಸದಾಗಿ ಘೋಷಿಸಲಾದ $1,00,000 ವಾರ್ಷಿಕ ಶುಲ್ಕವು ಅಸ್ತಿತ್ವದಲ್ಲಿರುವ ವೀಸಾ ಹೊಂದಿರುವವರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಟ್ರಂಪ್ ಆಡಳಿತ ಸ್ಪಷ್ಟಪಡಿಸಿದೆ.
“ದೇಶಕ್ಕೆ ಭೇಟಿ ನೀಡುವವರು ಅಥವಾ ದೇಶವನ್ನು ತೊರೆಯುವವರು ಅಥವಾ ಭಾರತಕ್ಕೆ ಭೇಟಿ ನೀಡುವವರು, ಭಾನುವಾರದ ಮೊದಲು ಹಿಂತಿರುಗುವ ಅಗತ್ಯವಿಲ್ಲ ಅಥವಾ $1,00,000 ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. $100,000 ಶುಲ್ಕವು ಹೊಸಬರಿಗೆ ಮಾತ್ರ ಅನ್ವಯಿಸುತ್ತದೆ. ಇದು ಈಆಗಗಲೇ ವೀಸಾ ಹೊಂದಿರುವವರಿಗೆ ಅಲ್ಲ,” ಎಂದು ಅಮೆರಿಕದ ಹಿರಿಯ ಆಡಳಿತ ಅಧಿಕಾರಿಯೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.
ಎಲ್ಲಾ H-1B ವೀಸಾ ಅರ್ಜಿಗಳಿಗೆ $100,000 ವಾರ್ಷಿಕ ಅರ್ಜಿ ಶುಲ್ಕವನ್ನು ವಿಧಿಸುವ ಹೊಸ ಕಾರ್ಯನಿರ್ವಾಹಕ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ, ಇದು ಅಮೆರಿಕದಲ್ಲಿ H-1B ವೀಸಾ ಹೊಂದಿರುವವರಲ್ಲಿ ಅತಿದೊಡ್ಡ ಪಾಲನ್ನು ಹೊಂದಿರುವ ಸಾವಿರಾರು ಭಾರತೀಯರ ಮೇಲೆ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ.
H-1B ವೀಸಾ ಹೊಂದಿರುವ ಭಾರತೀಯರು ಭಾನುವಾರ (ಸೆಪ್ಟೆಂಬರ್ 21) ರೊಳಗೆ ಅಮೆರಿಕಕ್ಕೆ ಹಿಂತಿರುಗುವ ಅಗತ್ಯವಿಲ್ಲ ಅಥವಾ ದೇಶವನ್ನು ಮತ್ತೆ ಪ್ರವೇಶಿಸಲು $100,000 ಪಾವತಿಸುವ ಅಗತ್ಯವಿಲ್ಲ, ಏಕೆಂದರೆ ಹೊಸ H-1B ವೀಸಾ ನಿಯಮಗಳು ಹೊಸದಾಗಿ ವೀಸಾ ಪಡೆಯುವವರಿಗೆ ಮಾತ್ರ ಎಂದು ಹೆಸರು ಬಹಿರಂಗಪಡಿಸದ ಹಿರಿಯ ಅಮೆರಿಕ ಆಡಳಿತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊಸ ಶುಲ್ಕವು ಸೆಪ್ಟೆಂಬರ್ 21, 2025 ರಂದು ಬೆಳಿಗ್ಗೆ 12:01 ರಂದು ಅಥವಾ ನಂತರ ಸಲ್ಲಿಸಲಾದ ಹೊಸ ಅರ್ಜಿಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಈಗಾಗಲೇ ವೀಸಾ ಹೊಂದಿರುವವರಿಗೆ ಇದು ಅಲ್ಲ ಎಂದು ಅವರು ಹೇಳಿದ್ದಾರೆ.
ಈ ಘೋಷಣೆ ಆರಂಭದಲ್ಲಿ ಎಚ್ಚರಿಕೆಯ ಕಿಡಿ ಹೊತ್ತಿಸಿತ್ತು, ತಂತ್ರಜ್ಞಾನ ಕಂಪನಿಗಳು ಪ್ರಸ್ತುತ ವಿದೇಶದಲ್ಲಿರುವ H-1B ಕಾರ್ಮಿಕರು ಗಡುವಿನ ಮೊದಲು ಹಿಂತಿರುಗುವಂತೆ ಸೂಚಿಸಿದ್ದರು. ಹಾಗೂ ಬರಲು ವಿಫಲವಾದರೆ ಸಿಕ್ಕಿಹಾಕಿಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದ್ದರು. $100,000 ಶುಲ್ಕವು ಮರು-ಪ್ರವೇಶಕ್ಕೂ ಅನ್ವಯಿಸುತ್ತದೆ ಎಂದು ಹಲವರು ಭಯಪಟ್ಟರು.
H-1B ವೀಸಾ ವಲಸೆರಹಿತ ವೀಸಾ ಆಗಿದ್ದು, ಇದು ಅಮೆರಿಕದ ಕಂಪನಿಗಳು ಐಟಿ, ಎಂಜಿನಿಯರಿಂಗ್, ಹಣಕಾಸು, ಆರೋಗ್ಯ ರಕ್ಷಣೆ ಮತ್ತು ವಿಜ್ಞಾನದಂತಹ ತಾಂತ್ರಿಕ ಅಥವಾ ಸೈದ್ಧಾಂತಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ವೃತ್ತಿಪರರನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳ ಕೌಶಲ್ಯಪೂರ್ಣ ಕೆಲಸಗಾರರು ತಾತ್ಕಾಲಿಕವಾಗಿ ಅಮೆರಿಕದಲ್ಲಿ ಕೆಲಸ ಮಾಡಲು ಇದು ಸಾಮಾನ್ಯ ಮಾರ್ಗಗಳಲ್ಲಿ ಒಂದಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ