ಕಾಸರಗೋಡು : ಆಮ್ಲೆಟ್ ತಿನ್ನುವಾಗ ಗಂಟಲಿನಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ಬದಿಯಡ್ಕದ ಚುಲ್ಲಿಕ್ಕಾನ ಮೂಲದ ಪ್ರಸ್ತಕ್ತ ಬರಡ್ಕದ ನಿವಾಸಿ ವಿನ್ಸೆಂಟ್ ಕ್ರಾಸ್ತಾ (52) ಎಂದು ಗುರುತಿಸಲಾಗಿದೆ.
ಭಾನುವಾರ ಸಂಜೆ ಅವರು ತಮ್ಮ ಮನೆಯ ಸಮೀಪವಿರುವ ಸಣ್ಣ ಅಂಗಡಿಯಲ್ಲಿ ಆಮ್ಲೆಟ್ ತಿನ್ನುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಆಹಾರವು ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಅವರು ಒದ್ದಾಡಲು ಆರಂಭಿಸಿದರು. ತಕ್ಷಣವೇ ಅವರನ್ನು ಕುಂಬ್ಳೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ತಲುಪುವ ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ವಿನ್ಸೆಂಟ್ ಬೇಲಾ ಕಟ್ಟತಂಗಡಿಯ ವೆಲ್ಡಿಂಗ್ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದರು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ, ಶವವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ