ಖ್ಯಾತ ಕಾದಂಬರಿಕಾರ, ಎಸ್.ಎಲ್. ಭೈರಪ್ಪ SL Bhyrappa)ಅವರು 94ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಆದರೆ ಭೈರಪ್ಪ ( ಅವರ ಬಾಲ್ಯ ಅತ್ಯಂತ ದುರಂತದಿಂದ ಕೂಡಿತ್ತು. ಅವರು ಬಾಲ್ಯದಲ್ಲಿ ಪ್ಲೇಗ್‌ಗೆ ತುತ್ತಾಗಿದ್ದರು. ಹೇಗೋ ಅದರಿಂದ ಪಾರಾದರು. ಆದರೆ ಅವರ ಕುಟುಂಬದ ಸದಸ್ಯರನ್ನು ಹೆಮ್ಮಾರಿ ಪ್ಲೇಗ್ ಬಲಿ ತೆಗೆದುಕೊಂಡಿತ್ತು.
ಈ ಬಗ್ಗೆ ಅವರು ತಮ್ಮ ಆತ್ಮಕಥನ ಭಿತ್ತಿಯಲ್ಲಿಯೂ ಬರೆದಿದ್ದಾರೆ. ಅವರ ಅಣ್ಣ, ಅಕ್ಕ ಪ್ಲೇಗ್ ಬಂದು ಒಂದೇ ದಿವಸ ಒಂದು ತಾಸಿನ ಒಳಗಡೆ ಮೃತಪಟ್ಟಿದ್ದರು. ಅವರಿಗೆ 11 ವರ್ಷ ಇದ್ದಾಗ ತಾಯಿ ಪ್ಲೇಗ್‌ಗೆ ತುತ್ತಾಗಿ ಮೃತಪಟ್ಟರು. ಇದಾದ 3 ವರ್ಷದ ನಂತರ ತಂಗಿ ಮೃತಪಟ್ಟಳು. ಒಂದು ವರ್ಷದ ಬಳಿಕ ತಮ್ಮ ಸಾವಿಗೀಡಾದ. ತಮ್ಮನ ಹೆಣವನ್ನು ನಾನು ಹೊತ್ತುಕೊಂಡು ಹೋಗಿ ಸುಟ್ಟು ಬಂದಿದ್ದೆ. ನನಗೂ ಪ್ಲೇಗ್ ಬಂದಿತ್ತು. ಆದರೆ ನಾನು ಹೇಗೋ ಪಾರಾಗಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
5 ವರ್ಷದ ತಮ್ಮ ಪ್ಲೇಗ್‌ನಿಂದ ಮೃತಪಟ್ಟಾಗ ಅಂತ್ಯಸಂಸ್ಕಾರ ಮಾಡಲು ಯಾರೂ ಸಹಾಯ ಮಾಡಿರಲಿಲ್ಲ. ಅವರು ದೂರದ ಊರಿನಲ್ಲಿ ಸುನೆಮಾ ಟಾಕೀಸಿನಲ್ಲಿ ಟಿಕೆಟ್ ಕೊಡಲು ಇದ್ದರು. ಅವರಿಗೆ 15 ವರ್ಷ. ಅವರಿಗೆ ಊರಿನ ಇಲೆಕ್ಟ್ರಿಕ್ ಕಚೇರಿಯವರು ಬಂದು ವಿಷಯ ತಿಳಿಸಿದರು. ಹೆಣ ಹೊತ್ತುಕೊಂಡು ಹೋಗಲು ಯಾರೂ ಬರಲಿಲ್ಲ. ಆಗ ತಮ್ಮನಿಗೆ 6 ವರ್ಷ. 16 ಕಿಮೀ ದೂರದಿಂದ ಬಾಡಿಗೆ ಸೈಕಲ್ ಮೇಲೆ ಮನೆಗೆ ಬಂದರೆ ಅಲ್ಲಿ ಅಜ್ಜಿ ಬಿಟ್ಟರೆ ಯಾರೂ ಇರಲಿಲ್ಲ. ನಂತರ ತಮ್ಮನ ಹೆಣವನ್ನು ಹೆಗಲ ಮೇಲೆ ಹೊತ್ತುಕೊಂಡು ಸ್ಮಶಾನಕ್ಕೆ ಹೋಗಿದ್ದರು. ಒಂದು ಕೈಯಲ್ಲಿ ಮಡಕೆಯನ್ನು ಕೈಯಲ್ಲಿ ಹಿಡಿದುಕೊಂಡಿದ್ದರು. ಹೆಗಲ ಮೇಲೆ ತಮ್ಮನ ಹೆಣ ಹೊತ್ತುಕೊಂಡಿ ಸ್ಮಶಾನಕ್ಕೆ ಹೋಗಿದ್ದರು. ಸ್ಮಶಾನದಲ್ಲಿ ತಮ್ಮನ ಮೃತದೇಹಕ್ಕೆ ಬೆಂಕಿ ಇಟ್ಟು ಮನೆಗೆ ಬಂದರೆ ತಿನ್ನಲು ಏನೂ ಇರಲಿಲ್ಲ. ನಂತರ ಸೈಕಲ್ ಹೊಡೆದುಕೊಂಡು ಮತ್ತೆ ತಾನು ಸಿನೆಮಾ ಟಾಕೀಸ್ ಇದ್ದ ಊರಿಗೆ ಹೋದೆ” ಎಂದು ಭೈರಪ್ಪ ಈ ಘಟನೆಯನ್ನು ಅನೇಕ ಬಾರಿ ನೆನೆಪಿಸಿಕೊಂಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ