ಕ್ರಿಕೆಟ್‌ | ತಿಲಕ್ ವರ್ಮಾ ಅಮೋಘ ಆಟ; ರೋಮಾಂಚನಕಾರಿ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ಮಣಿಸಿ ಏಷ್ಯಾ ಕಪ್ ಗೆದ್ದ ಭಾರತ

ದುಬೈ: ದುಬೈನಲ್ಲಿ ನಡೆದ ಫೈನಲ್‌ನಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿ 2025ರ ಏಷ್ಯಾಕಪ್ ಚಾಂಪಿಯನ್ ಆಗಿದೆ. ತಿಲಕ್ ವರ್ಮಾ ಅವರ ಅಜೇಯ ಅರ್ಧಶತಕದ ನೆರವಿನಿಂದ ಹಾಗೂ ಕೊನೆಯಲ್ಲಿ ಶಿವಂ ದುಬೆ ಅವರ ಬಿರುಸಿನ ಬ್ಯಾಟಿಂಗ್‌ನಿಂದ ಭಾರತವು ಪಾಕಿಸ್ತಾನದ ವಿರುದ್ಧ5 ವಿಕೆಟ್‌ಗಳಿಂದ ಜಯಗಳಿಸಿ 2025ರ ಏಷ್ಯಾಕಪ್ ಅನ್ನು ಮುಡಿಗೇರಿಸಿಕೊಂಡಿತು.
ಭಾರತದ ಆರಂಭಿಕ ಬ್ಯಾಟಿಂಗ್ ಆರಂಭದಿಂದಲೇ ಆಘಾತ ಅನುಭವಿಸಿದರೂ ಸಂಕಷ್ಟದ ಸ್ಥಿತಿಯಲ್ಲಿ ಬ್ಯಾಟಿಂಗ್‌ಗೆ ಬಂದ ತಿಲಕ್ ವರ್ಮಾ ಸ್ಫೂರ್ತಿದಾಯಕ ಅರ್ಧಶತಕದಿಂದ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿ ಚಾಂಪಿಯನ್‌ ಪಟ್ಟದ ವರೆಗೆ ಕೊಂಡೊಯ್ದರು. ಭಾರತದ ಆರಂಭಿಕ ಆಟಗಾರ ಅಭಿಷೇಕ ಶರ್ಮಾ (5), ನಾಯಕ ಸುರ್ಯಕುಮಾರ ಯಾದವ್ (1) ಹಾಗೂ ಶುಭಮನ್ ಗಿಲ್ (12) ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡರು. ಕೇವಲ ೨೧ ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಭಾರತವು ದುಸ್ಥಿತಿಯಲ್ಲಿತ್ತು. ಆಗ ತಿಲಕ ವರ್ಮಾ (ಅಜೇಯ 69) ಹಾಗೂ. ಸಂಜು ಸ್ಯಾಮ್ಸನ್ (24 ರನ್) ಭಾರತವನ್ನು ಮೇಲಕ್ಕತ್ತಿದರು. ಆದರೆ ಸಂಜು ಸಾಮ್ಸನ್‌ ಔಟಾದ ನಂತರ ಭಾರತ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿತ್ತು.

ಪ್ರಮುಖ ಸುದ್ದಿ :-   ದೆಹಲಿ ಹೋಟೆಲ್‌ನಲ್ಲಿ ಅಗ್ನಿ ಅವಘಡ : 21 ಮಂದಿ ಸಾವು ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಧುಮುಕಿದ ಇಬ್ಬರು ಮಹಿಳೆಯರು

ಆಗ ಶಿವಂ ದುಬೆ ಆಕ್ರಮಣಕಾರಿ 33 ರನ್‌ಗಳಿಸಿ 19ನೇ ಓವರ್‌ನ ಕೊನೆಯ ಎಸೆತದಲ್ಲಿ ಔಟಾದರು. ಆಗ ಭಾರತಕ್ಕೆ ಗೆಲ್ಲಲು ಆರು ರನ್‌ ಬೇಕಿತ್ತು. ನಂತರ ತಿಲಕ್‌ ವರ್ಮಾ ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ ಸಿಕ್ಸರ್‌ ಎತ್ತುವ ಮೂಲಕ ಭಾರತದ ಗೆಲುವನ್ನು ನಿಶ್ಚಿತಗೊಳಿಸಿದರು. ಅಂತಿಮವಾಗಿ ಭಾರತವು ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ ಪಾಕಿಸ್ತಾನದ ವಿರುದ್ಧ ಐದು ವಿಕೆಟ್‌ಗಳಿಂದ ಜಯಗಳಿಸಿತು. ತಿಲಕ್ ವರ್ಮಾ ಶಾಂತ ಮತ್ತು ಸ್ಥಿರ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ದಡ ಸೇರ್ಪಡೆ ಮಾಡಿದರು. ಭಾರತ ಮಿತವಾದ ಓವರ್‌ಗಳಲ್ಲಿ ಗೆಲುವು ಸಾಧಿಸಿ 2025 ಏಷ್ಯಾಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಇದಕ್ಕೂ ಮುನ್ನ, ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನವನ್ನು ಕೇವಲ 146 ರನ್‌ಗಳಿಗೆ (19.1 ಓವರ್‌ಗಳಲ್ಲಿ) ಆಲ್‌ಔಟ್ ಆಯಿತು. ಭಾರತದ ಸ್ಪಿನ್ ತ್ರಯರು ಪಾಕಿಸ್ತಾನದ ಹಠಾತ್‌ ಕುಸಿತಕ್ಕೆ ಕಾರಣರಾದರು.. ಕುಲದೀಪ್ ಯಾದವ್ 4 ವಿಕೆಟ್‌ಗಳನ್ನು ಪಡೆದು ಮಿಂಚಿದರು. ವರುಣ್ ಚಕ್ರವರ್ತಿ (2/30), ಅಕ್ಸರ್ ಪಟೇಲ್ (2/26), ಮತ್ತು ಜಸ್ಪ್ರಿತ್ ಬುಮ್ರಾ (2/25) ಕೂಡ ಉತ್ತಮ ದಾಳಿ ನಡೆಸಿದರು.
ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಾಗ, ಪಾಕಿಸ್ತಾನಕ್ಕೆ ಉತ್ತಮ ಆರಂಭ ಲಭಿಸಿತು. ಆರಂಭಿಕರಾದ ಸಾಹಿಬ್‌ಜಾದಾ ಫರ್ಹಾನ್ (57 ರನ್ – 38 ಎಸೆತ), ಫಖರ್ ಜಮಾನ (46 ರನ್ – 35 ಎಸೆತ) ಒಟ್ಟಾಗಿ 84 ರನ್‌ಗಳ ಭದ್ರ ಅಡಿಪಾಯ ಹಾಕಿದರು. ಆದರೆ ನಂತರದ ಇನಿಂಗ್ಸ್‌ನಲ್ಲಿ ಭಾರತದ ಸ್ಪಿನ್ ದಾಳಿ ಬೃಹತ್ ಪತನಕ್ಕೆ ಕಾರಣವಾಯಿತು. ಪಾಕಿಸ್ತಾನ 33 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಕೇವಲ 146 ರನ್‌ಗಳಿಗೆ ಆಲ್‌ಔಟ್ ಆಯಿತು.

ಪ್ರಮುಖ ಸುದ್ದಿ :-   ಬಂಗಾಳ ರಾಜಕೀಯದಲ್ಲಿ ಸುನಾಮಿ ; ದೀದಿಗೆ ಬಿಗ್ ಶಾಕ್ : ಟಿಂಎಂಸಿ ಶಾಸಕರ ಬೆಂಬಲದಿಂದಲೇ ವಿಧಾನಸಭೆ ವಿಪಕ್ಷದ ನಾಯಕನಾದ ಉಚ್ಚಾಟಿತ ಶಾಸಕ..!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement