ಬ್ರಿಟನ್‌ ಪ್ರಧಾನಿ ಸ್ಟಾರ್ಮರ್ ಜೊತೆಗಿನ ಸಭೆಯಲ್ಲಿ ಖಲಿಸ್ತಾನಿ ಉಗ್ರವಾದದ ವಿಷಯ ಎತ್ತಿದ ಪ್ರಧಾನಿ ಮೋದಿ

ನವದೆಹಲಿ : ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಭೇಟಿ ವೇಳೆ ಖಲಿಸ್ತಾನಿ ಉಗ್ರವಾದದ ವಿಷಯವನ್ನು ವಿವರವಾಗಿ ಚರ್ಚಿಸಲಾಯಿತು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಶ್ರಿ ಹೇಳಿದ್ದಾರೆ.
“ಪ್ರಜಾಪ್ರಭುತ್ವದಲ್ಲಿ ಮೂಲಭೂತವಾದ ಮತ್ತು ಹಿಂಸಾತ್ಮಕ ಉಗ್ರವಾದಕ್ಕೆ ಯಾವುದೇ ಸ್ಥಳವಿಲ್ಲ. ಸಮಾಜಗಳು ಒದಗಿಸಿದ ಸ್ವಾತಂತ್ರ್ಯಗಳನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡಬಾರದು. ಎರಡೂ ಕಡೆಗಳಲ್ಲಿ ಲಭ್ಯವಿರುವ ಕಾನೂನು ಚೌಕಟ್ಟಿನೊಳಗೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು ಎಂದು ಮಿಶ್ರಿ ತಿಳಿಸಿದರು.
ಭಾರತ ಮತ್ತು ಯುಕೆ ಉಭಯ ರಾಷ್ಟ್ರಗಳ ನಡುವಿನ ಹೆಗ್ಗುರುತು ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಭಾರತದ ವೀಕ್ಷಿತ್‌ ಭಾರತದ ದೃಷ್ಟಿಕೋನವನ್ನು ಬೆಂಬಲಿಸುತ್ತದೆ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಗಮನಿಸಿದರು.

ಸ್ಟಾರ್ಮರ್ ಜೊತೆ ಉನ್ನತ ಮಟ್ಟದ ನಿಯೋಗವೊಂದು ಬಂದಿದ್ದು, ಇದರಲ್ಲಿ ಯುಕೆಯ 125 ಪ್ರಮುಖ ವ್ಯಾಪಾರ ಮುಖಂಡರು, ಉದ್ಯಮಿಗಳು ಮತ್ತು ಶಿಕ್ಷಣ ತಜ್ಞರು – ಭಾರತಕ್ಕೆ ಭೇಟಿ ನೀಡಿದ ಅತಿದೊಡ್ಡ ಯುಕೆ ವ್ಯಾಪಾರ ನಿಯೋಗ, ಪ್ರಮುಖ ಯುಕೆ ವಿಶ್ವವಿದ್ಯಾಲಯಗಳ ಒಂಬತ್ತು ಉಪಕುಲಪತಿಗಳು ಸೇರಿದ್ದಾರೆ. ಪ್ರಧಾನಿ ಮೋದಿ ಅವರು ಈ ಒಂಬತ್ತು ಯುಕೆ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್‌ಗಳನ್ನು ತೆರೆಯಲಿವೆ ಎಂದು ಹೇಳಿದರು.
“ಈ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಾಮರ್ಥ್ಯವನ್ನು ಹೆಚ್ಚಿಸಲು ನಾವು ನಿಮ್ಮನ್ನು ಬೆಂಬಲಿಸಲು ಬಯಸುತ್ತೇವೆ” ಎಂದು ಸ್ಟಾರ್ಮರ್ ಹೇಳಿದರು, ಜುಲೈನಲ್ಲಿ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) ಸಹಿ ಹಾಕಿದ ಮೂರು ತಿಂಗಳಲ್ಲಿ ವ್ಯಾಪಾರ ಮತ್ತು ಹೂಡಿಕೆ ಈಗಾಗಲೇ £6 ಬಿಲಿಯನ್ ಹೆಚ್ಚಳ ಕಂಡಿದೆ ಎಂದು ಹೇಳಿದರು.
ಮಾರ್ಚ್‌ನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ ಲಂಡನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಚಾಥಮ್ ಹೌಸ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಪ್ರತಿಭಟನಾಕಾರರು ಅಡ್ಡಿಪಡಿಸಿದಾಗ ಭದ್ರತಾ ಉಲ್ಲಂಘನೆಯಾದ ಹಿನ್ನೆಲೆಯ ಕುರಿತು ಚರ್ಚೆ ನಡೆಯಿತು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕೆ ಭಾರತವು ಬ್ರಿಟನ್ ಬೆಂಬಲವನ್ನು ಪಡೆದುಕೊಂಡಿದೆ ಎಂದು ಮಿಸ್ರಿ ಹೇಳಿದರು. ಇದು ಪರಸ್ಪರ ಮೆಚ್ಚುಗೆಯ ಮಹತ್ವದ ಸೂಚಕವಾಗಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement