ಕಾರವಾರ : ಮೀನು ಚುಚ್ಚಿ ಗಾಯಗೊಂಡು ಮೀನುಗಾರ ಸಾವು

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ದಂಡೇಭಾಗ ಪ್ರದೇಶದ ಬಳಿ ಮೀನುಗಾರಿಕೆಗೆ ತೆರಳಿದ್ದ ವೇಳೆ 24 ವರ್ಷದ ಮೀನುಗಾರ ಹಾರುವ ತೊಳೆ ಕಾಂಡೆ ಮೀನು (Flying fish) ಚುಚ್ಚಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಕ್ಟೋಬರ್ 14, ಮಂಗಳವಾರ ಅಕ್ಷಯ ಮಾಜಾಳೀಕರ ಎಂಬವರು ದೋಣಿಯಲ್ಲಿ ಮೀನುಗಾರಿಕೆಗೆ ಹೋಗಿದ್ದರು. ಈ ವೇಳೆ ಸುಮಾರು 8 ರಿಂದ 10 ಇಂಚು ಉದ್ದದ, ಚೂಪು ಮೂತಿಯ ಮೀನು ಅಥವಾಹಾರುವ ತೊಳೆ ಕಾಂಡೆ ಮೀನು ನೀರಿನಿಂದ ಹಾರಿ ಅವರ ಹೊಟ್ಟೆಗೆ ಚುಚ್ಚಿದೆ. ಮೀನಿನ ಈ ಚೂಪು ಮೂತಿಯಿಂದ ಉಂಟಾದ ಗಂಭೀರ ಗಾಯದಿಂದಾಗಿ, ಕರುಳು ಸೇರಿದಂತೆ ಆಂತರಿಕ ಅಂಗಗಳಿಗೆ ತೀವ್ರ ಹಾನಿಯಾಗಿದೆ ಎಂದು ಹೇಳಲಾಗಿದೆ.
ತಕ್ಷಣವೇ ಅಕ್ಷಯ ಅವರನ್ನು ಕಾರವಾರದ ಕ್ರಿಮ್ಸ್ (KRIMS) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಎರಡು ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು. ವೈದ್ಯರು ಗಾಯಗಳಿಗೆ ಹೊಲಿಗೆ ಹಾಕಿ ಡಿಸ್ಚಾರ್ಜ್ ಮಾಡಿದ್ದರು. ಆದರೆ, ನೋವು ಕಡಿಮೆಯಾಗದ ಕಾರಣ ಅವರು ಆಸ್ಪತ್ರೆಯಲ್ಲಿಯೇ ಉಳಿದಿದ್ದರು. ವೈದ್ಯರ ಪ್ರಯತ್ನದ ಹೊರತಾಗಿಯೂ, ಗುರುವಾರ (ಅಕ್ಟೋಬರ್ 16) ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

3.8 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement