ಕಾರವಾರ ಚೆಕ್‌ಪೋಸ್ಟ್‌ ನಲ್ಲಿ ದಾಖಲೆ ರಹಿತ ₹1 ಕೋಟಿ ನಗದು ವಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಗೋವಾ ಗಡಿಭಾಗದ ಮಾಜಾಳಿ ಚೆಕ್‌ಪೋಸ್ಟ್ ಬಳಿ ಗೋವಾದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್‌ನಲ್ಲಿ ದಾಖಲೆಯಿಲ್ಲದ ₹1 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಚಿತ್ತಾಕುಲ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸೋಮವಾರ ತಡರಾತ್ರಿ ಕಾರ್ಯಾಚರಣೆಯಲ್ಲಿ, ಪೊಲೀಸರು ಖಾಸಗಿ ಬಸ್ ಪರಿಶೀಲನೆ ಮಾಡುವ ಒಂದು ಕೋಟಿ ರೂ.ಹಣ ಪತ್ತೆಯಾಗಿದೆ. ಈ ಹಣವನ್ನು ಗೋವಾದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ.
ಕರ್ತವ್ಯ ನಿರತ ಅಧಿಕಾರಿಗಳ ತಂಡವು ದಿನನಿತ್ಯದಂತೆ ಖಾಸಗಿ ಬಸ್ ಪ್ರಯಾಣಿಕರ ಬ್ಯಾಗ್ ಪರಿಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.‌ ತಪಾಸಣೆಯ ಸಮಯದಲ್ಲಿ, ಕಲ್ಪೇಶಕುಮಾರ ಎಂದು ಗುರುತಿಸಲಾದ ಪ್ರಯಾಣಿಕರೊಬ್ಬರಿಗೆ ಸೇರಿದ ಬ್ಯಾಗ್‌ನಲ್ಲಿ ದೊಡ್ಡ ಮೊತ್ತವನ್ನು ಬಚ್ಚಿಟ್ಟಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದರು.

ಆತನ ಜೊತೆ‌ ಇನ್ನೊಬ್ಬ ವ್ಯಕ್ತಿ ಪ್ರಯಾಣಿಸುತ್ತಿದ್ದ. ಅವರ ಹೆಸರನ್ನು ಪೊಲೀಸರು ಬಹಿರಂಗ ಮಾಡಿಲ್ಲ. ಹಣದ ಮೂಲ ಮತ್ತು ಉದ್ದೇಶಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಆರೋಪಿಗಳು ಹಾಜರುಪಡಿಸಿಲ್ಲ ಎನ್ನಲಾಗಿದೆ.
500 ರೂ.ಮುಖಬೆಲೆಯ ನೋಟುಗಳ ಬಂಡಲ್ ಅನ್ನು ಮಾಡಲಾಗಿದೆ. ವಶಪಡಿಸಿಕೊಂಡ ಹಣವನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಆದರೆ ಅದರ ಮಾಲೀಕಕರು ಯಾರು ಮತ್ತು ಮೂಲ ಯಾವುದು ಎಂಬುದು ಸ್ಪಷ್ಟವಾಗಿಲ್ಲ. ಸದಾಶಿವಗಡದ ಚಿತ್ತಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಣ ಮೂಲ ಮತ್ತು ಸಾಗಾಟದ ಉದ್ದೇಶವನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.
ಹಣವು ಹವಾಲಾ ಕಾರ್ಯಾಚರಣೆಗಳು ಅಥವಾ ಇತರ ಅಕ್ರಮ ವ್ಯವಹಾರಗಳ ಭಾಗವಾಗಿರಬಹುದೇ ಎಂದು ಹೆಚ್ಚಿನ ತನಿಖೆ ನಡೆಯುತ್ತಿದೆ.
ಹಣವನ್ನು ವಶಪಡಿಸಿಕೊಂಡ ನಂತರ ಅಧಿಕಾರಿಗಳು ಮಾಜಾಳಿ ಚೆಕ್ ಪೋಸ್ಟ್ ಅಂತರರಾಜ್ಯ ಮಾರ್ಗದಲ್ಲಿ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement