ಕ್ರಿಕೆಟ್‌ | ಮಲೇಷ್ಯಾ ಟೂರ್ 2025: ಬೌಲರನ ವಿಚಿತ್ರ ಬೌಲಿಂಗ್ ಆಕ್ಷನ್ ವೀಡಿಯೊ ವೈರಲ್…! ಈ ವಿಚಿತ್ರ ಶೈಲಿ ನೋಡಿದ್ರೆ ಬೆರಗಾಗ್ತೀರಾ…!!

ಕೌಲಾಲಂಪುರ: ಕ್ರಿಕೆಟ್ ಜಗತ್ತಿನಲ್ಲಿ ಹೊಸ ಹೊಸ ಹೊಸ ಶೈಲಿಗಳ ಬೌಲಿಂಗ್ ಆಕ್ಷನ್‌ಗಳನ್ನು ನೋಡಿರುತ್ತೇವೆ. ಆದರೆ, ಮಲೇಷ್ಯಾ ಟೂರ್ 2025ರ (Malaysia Tour 2025) ಪಂದ್ಯವೊಂದರಲ್ಲಿ ಕಂಡುಬಂದ ಸ್ಪಿನ್ನರ್‌ನ ವಿಲಕ್ಷಣ ಬೌಲಿಂಗ್ ಶೈಲಿಯು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಆಟಗಾರನ ಬವಲಿಂಗ್‌ ಶೈಲಿಯು ಕ್ರಿಕೆಟ್ ಆಟ ನೋಡುಗರಲ್ಲಿ ಗೊಂದಲ ಮತ್ತು ಕುತೂಹಲ ಮೂಡಿಸಿದೆ.
ನಲ್ವಾ ವಾರಿಯರ್ಸ್ (Nalwa Warriors) ತಂಡದ ಆಟಗಾರ ಸುಪನದೀಪ್ ಸಿಂಗ್ (Supandeep Singh) ಅವರ ಬೌಲಿಂಗ್ ಆಕ್ಷನ್ ತೀರಾ ಅಸಾಮಾನ್ಯವಾದ ಬೌಲಿಂಗ್‌ ಶೈಲಿಯಾಗಿದೆ. ಆರಂಭದಲ್ಲಿ ಅವರು ಚೆಂಡನ್ನು ತಮ್ಮ ಎಡಗೈಯಲ್ಲಿ ಹಿಡಿದು ಓಡಲು ಪ್ರಾರಂಭಿಸುತ್ತಾರೆ. ಈ ವೇಳೆ ಎರಡು ಬಾರಿ ವಿಚಿತ್ರವಾಗಿ ಜಿಗಿಯುತ್ತಾರೆ. ನಂತರ ಓಡುವ ಮಧ್ಯೆಯೇ ಚೆಂಡನ್ನು ತಮ್ಮ ಬಲಗೈಗೆ ವರ್ಗಾಯಿಸಿ, ಇಡೀ ದೇಹವನ್ನು ತಿರುಗಿಸಿ, ಅಂತಿಮವಾಗಿ ಬಲಗೈ ಮಣಿಕಟ್ಟಿನ ಸ್ಪಿನ್ನರ್ ಆಗಿ ಅತ್ಯಂತ ಅಸಾಮಾನ್ಯ ಶೈಲಿಯಲ್ಲಿ ಚೆಂಡನ್ನು ಎಸೆಯುತ್ತಾರೆ.

ಈ ವಿಡಿಯೋ ಹಂಚಿಕೊಂಡ ‘X’ (ಹಿಂದಿನ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗಿದೆ. ಈ ಬೌಲಿಂಗ್ ಆಕ್ಷನ್ ಅನ್ನು ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ಅನಿಲ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಅವರ ಶೈಲಿಗಳ ವಿಶಿಷ್ಟ ಸಂಯೋಜನೆ ಇರಬಹುದು ಎಂದು ಕೆಲವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಹಾಡಹಗಲೇ ಶಸ್ತ್ರಸಜ್ಜಿತರಿಂದ ಚಿನ್ನಾಭರಣ ಅಂಗಡಿ ದರೋಡೆ ; ಚಿನ್ನ-ನಗದು ಲೂಟಿ, ಹಲವು ಸುತ್ತು ಗುಂಡು ಹಾರಿಸಿ ಪರಾರಿ...!

ಈ ವಿಡಿಯೋ ಹಂಚಿಕೊಂಡ ‘X’ (ಹಿಂದಿನ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗಿದೆ. ಈ ಬೌಲಿಂಗ್ ಆಕ್ಷನ್ ಅನ್ನು ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ಅನಿಲ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಅವರ ಶೈಲಿಗಳ ವಿಶಿಷ್ಟ ಸಂಯೋಜನೆ ಇರಬಹುದು ಎಂದು ಕೆಲವರು ಹೇಳಿದ್ದಾರೆ.
ಬೌಲಿಂಗ್ ಶೈಲಿಯಿಂದ ಗೊಂದಲ
ಆರಂಭದಲ್ಲಿ ಎಡಗೈ ಬೌಲರ್ ಎಂದು ಭಾವಿಸಲಾಗಿದ್ದ ಸುಪನದೀಪ್ ಸಿಂಗ್, ತಮ್ಮ ರನ್‌ಅಪ್‌ನಲ್ಲಿ ಕೈ ಬದಲಾಯಿಸಿ ಬಲಗೈ ಸ್ಪಿನ್ನರ್ ಆದಾಗ ನೋಡುಗರು ಅಚ್ಚರಿಗೊಳಗಾದರು. ಈ ವಿಚಿತ್ರ ಆಕ್ಷನ್ ನೋಡಿದ ಬ್ಯಾಟರ್ ದೊಡ್ಡ ಹೊಡೆತಕ್ಕೆ ಯತ್ನಿಸಿ ಸ್ಟಂಪ್ ಔಟ್ ಆದರು. “ಈ ರೀತಿ ಬೌಲಿಂಗ್ ಆಕ್ಷನ್ ಮಧ್ಯದಲ್ಲಿ ಕೈ ಬದಲಾಯಿಸಿದ್ದು ಮಾಯಾಜಾಲದಂತೆ ಇತ್ತು. ಚೆಂಡು ಯಾವ ಕೈಯಿಂದ ಬಂತು ಎಂದು ಬ್ಯಾಟರ್‌ಗೆ ಗೊಂದಲವಾಗಿದೆ,” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
“ಇದು ಕಾನೂನುಬದ್ಧವೇ? ಬೌಲರ್ ತನ್ನ ಬೌಲಿಂಗ್ ಕೈಯನ್ನು ಅಂಪೈರ್‌ಗೆ ತಿಳಿಸಬೇಕು. ಓವರ್ ಮಧ್ಯೆ ಬದಲಾಯಿಸಬೇಕಾದರೆ ಅಂಪೈರ್‌ಗೆ ಹೇಳಬೇಕು. ಹೀಗೆ ಹೇಳದೆ ಕೈ ಬದಲಾಯಿಸುವುದು ನಿಯಮಕ್ಕೆ ವಿರುದ್ಧವಲ್ಲವೇ?” ಎಂದು ಮತ್ತೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶ್ನೆ ಎತ್ತಿದ್ದಾರೆ.

ಎಂಸಿಸಿ ನಿಯಮ ಏನು ಹೇಳುತ್ತದೆ?
ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ (MCC) ನಿಯಮ 21.1.1 ರ ಪ್ರಕಾರ, ಬೌಲರ್ ಯಾವ ಕೈನಲ್ಲಿ ಬೌಲಿಂಗ್ ಮಾಡುತ್ತಾರೆ (ಬಲಗೈ ಅಥವಾ ಎಡಗೈ) ಮತ್ತು ಯಾವ ಕಡೆಯಿಂದ ಬೌಲಿಂಗ್ ಮಾಡುತ್ತಾರೆ ಎಂಬುದನ್ನು ಅಂಪೈರ್ ಖಚಿತಪಡಿಸಿಕೊಂಡು ಬ್ಯಾಟರ್‌ಗೆ ತಿಳಿಸಬೇಕು. ಬೌಲರ್ ಈ ಬಗ್ಗೆ ಅಂಪೈರ್‌ಗೆ ತಿಳಿಸಲು ವಿಫಲವಾದರೆ, ಅದನ್ನು ಬ್ಯಾಟರ್‌ಗೆ ಅನ್ಯಾಯವೆಂದು ಪರಿಗಣಿಸಿ, ಅಂಪೈರ್‌ಗೆ ಆ ಎಸೆತವನ್ನು ನೋ-ಬಾಲ್ ಎಂದು ಘೋಷಿಸುವ ಅಧಿಕಾರವಿದೆ.
ಸುಪನದೀಪ್ ಸಿಂಗ್ ಅವರ ಈ ಬೌಲಿಂಗ್ ಆಕ್ಷನ್ ಕುರಿತು ಇದೀಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ.

ಪ್ರಮುಖ ಸುದ್ದಿ :-   ದಾಂಪತ್ಯ ಜಗಳದಲ್ಲಿ ಉದ್ಯೋಗದಾತರಿಗೆ ಹೆಂಡತಿ ದೂರು ನೀಡುವುದು ಏಕೆ..? ಈ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಕಳವಳ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement