ವೀಡಿಯೊ…| ಪತ್ರಿಕಾಗೋಷ್ಠಿ ವೇಳೆ ಅಮೆರಿಕ ಅಧ್ಯಕ್ಷ ಟ್ರಂಪ್ ಪಕ್ಕದಲ್ಲಿ ಕುಸಿದುಬಿದ್ದ ಔಷಧ ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ

ವಾಷಿಂಗ್ಟನ್ ಡಿ.ಸಿ.: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಚೇರಿಯಲ್ಲಿ (ಓವಲ್ ಆಫೀಸ್) ಹೊಸ ಬೊಜ್ಜು ನಿವಾರಕ ಔಷಧಗಳ ಬೆಲೆ ಕಡಿಮೆ ಮಾಡುವ ಕುರಿತು ಘೋಷಣೆ ಮಾಡುತ್ತಿದ್ದ ವೇಳೆ ಫಾರ್ಮಾಸ್ಯುಟಿಕಲ್ ಕಂಪನಿಯ ಕಾರ್ಯನಿರ್ವಾಹಕರೊಬ್ಬರು ಪಕ್ಕದಲ್ಲಿ ಕುಸಿದು ಬಿದ್ದ ಘಟನೆ ನಡೆದಿದೆ. ಇದರಿಂದಾಗಿ ನೇರ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವು ದಿಢೀರನೆ ಸ್ಥಗಿತಗೊಂಡಿತು.
ಟ್ರಂಪ್ ಅವರು ಪ್ರಸಿದ್ಧ GLP-1 ಬೊಜ್ಜು ಇಳಿಸುವ ಔಷಧಿಗಳಾದ ವೆಗೊವಿ (Wegovy) ಮತ್ತು ಝೆಪ್‌ಬೌಂಡ್ (Zepbound) ಗಳ ಬೆಲೆಯನ್ನು ಕಡಿಮೆ ಮಾಡಲು ಔಷಧ ತಯಾರಿಕಾ ಕಂಪನಿಗಳಾದ ಎಲಿ ಲಿಲ್ಲಿ (Eli Lilly) ಮತ್ತು ನೋವೊ ನಾರ್ಡಿಸ್ಕ್ (Novo Nordisk) ಜೊತೆಗಿನ ಮಹತ್ವದ ಒಪ್ಪಂದವನ್ನು ಬಹಿರಂಗಪಡಿಸಿದ ಕೆಲವೇ ಕ್ಷಣಗಳಲ್ಲಿ ಈ ಘಟನೆ ಸಂಭವಿಸಿದೆ.

ಅಸೋಸಿಯೇಟೆಡ್ ಪ್ರೆಸ್ (AP) ವರದಿಯ ಪ್ರಕಾರ, ನೋವೊ ನಾರ್ಡಿಸ್ಕ್‌ನ ಕಾರ್ಯನಿರ್ವಾಹಕ ಗಾರ್ಡನ್ ಫಿಂಡ್ಲೆ ಎಂದು ಗುರುತಿಸಿದ ಈ ವ್ಯಕ್ತಿ ಸಮತೋಲನ ಕಳೆದುಕೊಂಡು ನೆಲಕ್ಕೆ ಬಿದ್ದಿದ್ದಾರೆ. ಪ್ರಸ್ತುತ ಮೆಡಿಕೇರ್ ಮತ್ತು ಮೆಡಿಕೈಡ್ ಸೇವೆಗಳ ಕೇಂದ್ರಗಳ ಮುಖ್ಯಸ್ಥರಾಗಿರುವ ಡಾ. ಮೆಹ್ಮೆತ್ ಓಜ್ ಅವರು ತಕ್ಷಣವೇ ಧಾವಿಸಿ ಬಂದು ಸಹಾಯ ಮಾಡಿದ್ದಾರೆ ಮತ್ತು ಆ ವ್ಯಕ್ತಿ ನೆಲಕ್ಕೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಳ್ಳುವುದನ್ನು ತಪ್ಪಿಸಿದ್ದಾರೆ.
ಕೋಣೆಯಲ್ಲಿ ಇದ್ದಕ್ಕಿದ್ದಂತೆ ನೀರವ ಮೌನ ಆವರಿಸಿತು. ರಹಸ್ಯ ಸೇವೆ (Secret Service) ಮತ್ತು ವೈದ್ಯಕೀಯ ಸಿಬ್ಬಂದಿ ತಕ್ಷಣವೇ ಬಂದರು ಟ್ರಂಪ್ ಅವರು ತೀವ್ರವಾಗಿ ಆತಂಕಗೊಂಡಂತೆ ಕಂಡುಬಂದರು” ಎಂದು ಓರ್ವ ವರದಿಗಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ವೈದ್ಯಕೀಯ ಘಟಕದ ತ್ವರಿತ ಕ್ರಮ
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಅವರು ನಂತರ ಈ ಘಟನೆಯನ್ನು ದೃಢಪಡಿಸಿ, “ಮೆಚ್ಚಿನ ರಾಷ್ಟ್ರಗಳ ಕುರಿತಾದ (Most Favored Nations) ಓವಲ್ ಆಫೀಸ್ ಪ್ರಕಟಣೆಯ ಸಂದರ್ಭದಲ್ಲಿ, ಕಂಪನಿಗಳ ಪ್ರತಿನಿಧಿಯೊಬ್ಬರು ಮೂರ್ಛೆ ಹೋದರು. ಶ್ವೇತಭವನದ ವೈದ್ಯಕೀಯ ಘಟಕವು ತ್ವರಿತವಾಗಿ ಕಾರ್ಯಪ್ರವೃತ್ತವಾಯಿತು ಮತ್ತು ಆ ವ್ಯಕ್ತಿ ಈಗ ಕ್ಷೇಮವಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮವು ಆಡಳಿತದ ಹೊಸ ‘ಮೆಚ್ಚಿನ ರಾಷ್ಟ್ರಗಳ ಔಷಧ ಬೆಲೆ ನಿರ್ಧಾರ’ (Most Favored Nations drug pricing initiative) ಯೋಜನೆಯನ್ನು ಎತ್ತಿ ತೋರಿಸಲು ಉದ್ದೇಶಿಸಿದ್ದ ಕಾರ್ಯಕ್ರಮವಾಗಿತ್ತು. ಈ ಯೋಜನೆಯು ಲಕ್ಷಾಂತರ ಅಮೆರಿಕನ್ನರಿಗೆ GLP-1 ಔಷಧಿಗಳನ್ನು ಹೆಚ್ಚು ಕೈಗೆಟಕುವಂತೆ ಮಾಡುವ ಗುರಿಯನ್ನು ಹೊಂದಿದೆ.
ಈ ಒಪ್ಪಂದವು ತಯಾರಕರಿಗೆ ಈ ಔಷಧಿಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅವಕಾಶ ನೀಡುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಮುಂದಿನ ವರ್ಷ ಪ್ರಾರಂಭಿಸಲು ಸಿದ್ಧವಾಗಿರುವ ಫೆಡರಲ್ ವೆಬ್‌ಸೈಟ್ TrumpRx ಮೂಲಕ, ಮೌಖಿಕ ಆವೃತ್ತಿಯ ಔಷಧಗಳು ಎಫ್‌ಡಿಎ ಅನುಮೋದನೆ ಬಾಕಿ ಉಳಿದಿರುವಂತೆ, ತಿಂಗಳಿಗೆ ಕೇವಲ $149 ರಷ್ಟು ಕಡಿಮೆ ಬೆಲೆಗೆ ಲಭ್ಯವಾಗಲಿದೆ ಎಂದು ಅವರು ಘೋಷಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement