ವೀಡಿಯೊ…| ವಿಶ್ವದ ಅತಿದೊಡ್ಡ ಜೇಡರ ಬಲೆ: ಇದರಲ್ಲಿವೆ 1,11,000 ಜೇಡಗಳು-ವೀಕ್ಷಿಸಿ

ಬುಚರೆಸ್ಟ್ (ರೊಮೇನಿಯಾ): ರೊಮೇನಿಯಾದ ವಿಜ್ಞಾನಿಗಳು ವಿಶ್ವದಲ್ಲೇ ಅತಿ ದೊಡ್ಡದಾದ ಜೇಡರ ಬಲೆಯನ್ನು ಪತ್ತೆಹಚ್ಚಿದ್ದಾರೆ. ಇದರ ಗಾತ್ರದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಕುತೂಹಲ ಕೆರಳಿಸಿದೆ.
‘ಸಬ್‌ಟೆರೇನಿಯನ್ ಬಯಾಲಜಿ’ ಎಂಬ ಜರ್ನಲ್‌ನಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ, ಈ ಬೃಹತ್ ಜೇಡರ ಬಲೆಯು ಸುಮಾರು 1,11,000 (ಒಂದು ಲಕ್ಷದ ಹನ್ನೊಂದು ಸಾವಿರ) ಜೇಡಗಳಿಗೆ ನೆಲೆಯಾಗಿದೆ. ಅಚ್ಚರಿಯೆಂದರೆ, ಈ ಜೇಡಗಳಲ್ಲಿ ಸಾಮಾನ್ಯವಾಗಿ ಪರಸ್ಪರ ವೈರಿಗಳಾಗಿರುವ ಎರಡು ಪ್ರಭೇದಗಳು ಇಲ್ಲಿ ಶಾಂತಿಯುತವಾಗಿ ಒಟ್ಟಿಗೆ ವಾಸಿಸುತ್ತಿರುವುದು ಕಂಡುಬಂದಿದೆ.

ಸಾವಿರಾರು ಜೇಡಗಳ ‘ರೇಷ್ಮೆ ಡೇರೆ ನಗರ’
ಲೈವ್‌ ಸೈನ್ಸ್ ವರದಿ ಮಾಡಿದಂತೆ, ಈ ಬೃಹತ್ ಬಲೆಯು ಗ್ರೀಸ್ ಮತ್ತು ಅಲ್ಬೇನಿಯಾ ಗಡಿಯಲ್ಲಿ ಸುಮಾರು 1,140 ಅಡಿ ಆಳದಲ್ಲಿರುವ, ಗಂಧಕ ಸಮೃದ್ಧ ಗುಹೆಯೊಂದರ ಕತ್ತಲ ಕೋಣೆಯಲ್ಲಿ ಹರಡಿಕೊಂಡಿದೆ. ಗುಹೆಯ ಗೋಡೆಗಳ ಉದ್ದಕ್ಕೂ, ತಗ್ಗು ಸೂರಿದ್ದ ಸುರಂಗದೊಳಗೆ ಇದು ವಿಸ್ತರಿಸಿಕೊಂಡಿದೆ.
ಸಾವಿರಾರು ಸಣ್ಣ ಸಣ್ಣ ಕೊಳವೆಯಾಕಾರದ ಬಲೆಗಳು (funnel webs) ಒಂದಕ್ಕೊಂದು ಹೆಣೆದುಕೊಂಡು ಈ ವಿಸ್ತಾರವಾದ ಕಾಲೋನಿಯನ್ನು ಸೃಷ್ಟಿಸಿವೆ. ಇದನ್ನು ಸಂಶೋಧಕರು ‘ರೇಷ್ಮೆ ಡೇರೆ ನಗರ’ (Silky Tent City) ಎಂದು ಬಣ್ಣಿಸಿದ್ದಾರೆ. ದಾಖಲಾದ ಜೇಡರ ಬಲೆಗಳ ಪೈಕಿ ಇದು ಅತಿದೊಡ್ಡದಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಬಲೂಚಿಸ್ತಾನದಲ್ಲಿ ‘ಸ್ವಾತಂತ್ರ್ಯದ ಘೋಷಣೆ’: ಪಾಕ್‌ ಆಕ್ರಮಿತ ಕಾಶ್ಮೀರಕ್ಕಿಂತಲೂ ಇದು ಪಾಕಿಸ್ತಾನಕ್ಕೆ ಹೆಚ್ಚು ಆತಂಕದ ವಿಷಯ ಯಾಕೆ ?

ವೈರಿ ಪ್ರಭೇದಗಳ ಜೇಡಗಳ ಶಾಂತಿಯುತ ಸಹಬಾಳ್ವೆ
ಈ ಬೃಹತ್ ‘ಜೇಡರ ನಗರ’ದಲ್ಲಿ ಎರಡು ಮುಖ್ಯ ಜೇಡ ಪ್ರಭೇದಗಳು ವಾಸಿಸುತ್ತಿವೆ: ಅವುಗಳಲ್ಲಿ ಒಂದು ‘ಬಾರ್ನ್ ಫನಲ್ ವೀವರ್’ (ಸಾಕು ಮನೆ ಜೇಡ) ಮತ್ತು ಇನ್ನೊಂದು ‘ಶೀಟ್ ಅಥವಾ ಡ್ವಾರ್ಫ್ ವೀವರ್’. ಸಾಮಾನ್ಯವಾಗಿ ಏಕಾಂಗಿಯಾಗಿ ಜೀವಿಸುವ ಮತ್ತು ಪರಸ್ಪರ ಕಾದಾಡುವ ಈ ಪ್ರಭೇದಗಳು, ಇದೇ ಮೊದಲ ಬಾರಿಗೆ ಇಂತಹ ಬೃಹತ್ ಬಲೆಯಲ್ಲಿ ಶಾಂತಿಯುತವಾಗಿ ಒಟ್ಟಿಗೆ ಬದುಕುವುದು ವಿಜ್ಞಾನಿಗಳಿಗೆ ಅಚ್ಚರಿ ಮೂಡಿಸಿದೆ.
ಈ ಅನ್ವೇಷಣೆಯನ್ನು ಕುರಿತು ಮಾತನಾಡಿದ ಸಂಶೋಧನಾ ತಂಡದ ಮುಖ್ಯ ಲೇಖಕರಾದ, ರೊಮೇನಿಯಾದ ಸ್ಯಾಪಿಯೆಂಟಿಯಾ ಹಂಗೇರಿಯನ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಇಸ್ಟ್ವಾನ್ ಉರಾಕ್ ಅವರು, “ಅದನ್ನು ನಿಜವಾಗಿಯೂ ಅನುಭವಿಸಿದರೆ ಮಾತ್ರ ಅದರ ಭಾವನೆ ತಿಳಿಯುತ್ತದೆ” ಎಂದಿದ್ದಾರೆ. “ನಾನು ಬಲೆಯನ್ನು ನೋಡಿದಾಗ ನನ್ನ ಮನದಲ್ಲಿ ಮೂಡಿದ ಎಲ್ಲಾ ಭಾವನೆಗಳನ್ನು ವಿವರಿಸಲು ಪ್ರಯತ್ನಿಸಿದರೆ, ಅವುಗಳಲ್ಲಿ ಮೆಚ್ಚುಗೆ, ಗೌರವ ಮತ್ತು ಕೃತಜ್ಞತೆಗಳು ಪ್ರಮುಖವಾಗಿವೆ,” ಎಂದು ಅವರು ಲೈವ್‌ ಸೈನ್ಸ್‌ಗೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಇರಾನ್‌ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಇರಾನ್‌ನಲ್ಲಿ ಇಲ್ವಂತೆ?; ಇಸ್ರೇಲಿ ಮೂಲ ಉಲ್ಲೇಖಿಸಿ ಸೌದಿ ಮಾಧ್ಯಮದ ವರದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement