ಡಿಸೆಂಬರ್ 6 ರಂದು ದೆಹಲಿಯಲ್ಲಿ 6 ಕಡೆ ಸ್ಫೋಟಕ್ಕೆ ಯೋಜನೆ : ‘ಡಾಕ್ಟರ್ ಮಾಡ್ಯೂಲ್’ ನ ಆತಂಕಕಾರಿ ಸಂಚು ಬಯಲು….!

ನವದೆಹಲಿ: ದೆಹಲಿಯ ಪ್ರಸಿದ್ಧ ಕೆಂಪುಕೋಟೆ ಬಳಿ ನಡೆದ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಒಂದು ಆತಂಕಕಾರಿ ಯೋಜನೆಯನ್ನು ಬಯಲು ಮಾಡಿದ್ದಾರೆ. ಜೈಶ್-ಎ-ಮೊಹಮ್ಮದ್‌ಗೆ (Jaish-e-Mohammad) ಸಂಬಂಧ ಹೊಂದಿದೆಯೆಂದು ಶಂಕಿಸಲಾದ ವೈದ್ಯರನ್ನು ಒಳಗೊಂಡ ಭಯೋತ್ಪಾದಕ ತಂಡವು ಡಿಸೆಂಬರ್ 6 ರಂದು ದೆಹಲಿಯ (NCR) ಆರು ಸ್ಥಳಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿತ್ತು ಎಂಬುದು ಬಯಲಾಗಿದೆ ಎಂದು ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿವೆ.
1992 ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೆಡವಿದ ದಿನವಾದ ಡಿಸೆಂಬರ್ 6 ರಂದು ಆರು ಸ್ಥಳಗಳಲ್ಲಿ ಸ್ಫೋಟಿಸಲು ಸಂಚು ರೂಪಿಸಲಾಗಿತ್ತು. ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಶಂಕಿತ ಭಯೋತ್ಪಾದಕರು, ಬಾಬರಿ ಮಸೀದಿ ಧ್ವಂಸಕ್ಕೆ “ಪ್ರತೀಕಾರ ತೀರಿಸಿಕೊಳ್ಳಲು” ಬಯಸಿ ಈ ದಿನಾಂಕವನ್ನು ಆಯ್ಕೆ ಮಾಡಲಾಗಿತ್ತು ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಐದು ಹಂತಗಳ ಭಯೋತ್ಪಾದಕ ಯೋಜನೆ
ವರದಿ ಹೇಳುವಂತೆ ಉನ್ನತ ಗುಪ್ತಚರ ಮೂಲಗಳ ಪ್ರಕಾರ, ಶಂಕಿತ ಭಯೋತ್ಪಾದಕ ತಂಡದ ಸದಸ್ಯರು ವಿಚಾರಣೆಯ ಸಮಯದಲ್ಲಿ, ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಸರಣಿ ಸ್ಫೋಟಗಳನ್ನು ನಡೆಸಲು ಹಂತ-ಹಂತದ ಯೋಜನೆಯನ್ನು ಸಿದ್ಧಪಡಿಸಿದ್ದರು. ಅಧಿಕಾರಿಗಳು ಈ ಐದು ಹಂತದ ಯೋಜನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ:
ಹಂತ 1: ಜೈಶ್-ಎ-ಮೊಹಮ್ಮದ್ ಮತ್ತು ಅನ್ಸಾರ್ ಗಜವಾತ್-ಉಲ್-ಹಿಂದ್‌ನೊಂದಿಗೆ ಸಂಪರ್ಕ ಹೊಂದಿದ ಭಯೋತ್ಪಾದಕ ತಂಡದ ರಚನೆ.
ಹಂತ 2: ಸುಧಾರಿತ ಸ್ಫೋಟಕ ಸಾಧನಗಳನ್ನು (IEDs) ಜೋಡಿಸಲು ಕಚ್ಚಾ ವಸ್ತುಗಳ ಸಂಗ್ರಹ ಮತ್ತು ಹರಿಯಾಣದ ನುಹ್ ಮತ್ತು ಗುರುಗ್ರಾಮ್‌ನಿಂದ ಮದ್ದುಗುಂಡುಗಳನ್ನು ವ್ಯವಸ್ಥೆಗೊಳಿಸುವುದು.
ಹಂತ 3: ಮಾರಕ ರಾಸಾಯನಿಕ IED ಗಳನ್ನು ತಯಾರಿಸುವುದು ಮತ್ತು ಸಂಭಾವ್ಯ ಗುರಿ ಸ್ಥಳಗಳ ಪರಿಶೀಲನೆ (ರೆಕಾನೈಸೆನ್ಸ್).
ಹಂತ 4: ಪರಿಶೀಲನೆಯ ನಂತರ, ತಯಾರಿಸಿದ ಬಾಂಬ್‌ಗಳನ್ನು ತಂಡದ ಸದಸ್ಯರ ನಡುವೆ ವಿತರಿಸುವುದು.
ಹಂತ 5 (ಅಂತಿಮ): ದೆಹಲಿಯ 6ರಿಂದ 7 ಸ್ಥಳಗಳಲ್ಲಿ ಸಮನ್ವಯಗೊಳಿಸಿದ ಸ್ಫೋಟಗಳನ್ನು ನಡೆಸುವುದು.

ಪ್ರಮುಖ ಸುದ್ದಿ :-   ಒಎಸ್‌ಎಂ ಮೌಲ್ಯಮಾಪನ ವಿವಾದದ ಬೆನ್ನಲ್ಲೇ ಬಿಗ್ ಸರ್ಜರಿ: ಸಿಬಿಎಸ್‌ಇ ನೂತನ ಮುಖ್ಯಸ್ಥರಾಗಿ ಲೋಖಂಡೆ ಪ್ರಶಾಂತ ಸೀತಾರಾಮ ನೇಮಕ

ವಿಳಂಬದ ನಂತರ ಹೊಸ ದಿನಾಂಕ
ತನಿಖಾಧಿಕಾರಿಗಳ ಪ್ರಕಾರ, ಮೂಲ ಯೋಜನೆ ಈ ವರ್ಷದ ಆಗಸ್ಟ್‌ನಲ್ಲಿ ದಾಳಿಗಳನ್ನು ನಡೆಸುವುದಾಗಿತ್ತು, ಆದರೆ ಕಾರ್ಯಾಚರಣೆಯ ವಿಳಂಬದ ನಂತರ, ಬಾಬರಿ ಮಸೀದಿ ಧ್ವಂಸದ ದಿನವಾದ ಡಿಸೆಂಬರ್ 6 ಅನ್ನು ಹೊಸ ದಿನಾಂಕವಾಗಿ ಆಯ್ಕೆ ಮಾಡಲಾಗಿತ್ತು.
ಸುದೀರ್ಘ ಕಾನೂನು ಹೋರಾಟದ ನಂತರ, ಭಗವಾನ್ ರಾಮನ ಜನ್ಮಸ್ಥಳವೆಂದು ನಂಬಲಾದ ರಾಮಜನ್ಮಭೂಮಿಯಲ್ಲಿ ಹೊಸ ರಾಮಮಂದಿರವನ್ನು ನಿರ್ಮಿಸಲಾಯಿತು.

ಬಂಧಿತ ವೈದ್ಯರು ಮತ್ತು ಹಿನ್ನೆಲೆ
ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಟ್ರಾಫಿಕ್ ಸಿಗ್ನಲ್ ಬಳಿ ಕಾರು ಸ್ಫೋಟಗೊಂಡಾಗ ಹರ್ಯಾಣದ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಕಾಶ್ಮೀರಿ ವೈದ್ಯ ಡಾ. ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ಉನ್-ನಬಿ ಈ ಕಾರನ್ನು ಚಲಾಯಿಸುತ್ತಿದ್ದ.ಫರಿದಾಬಾದ್‌ನಲ್ಲಿ ದಾಳಿ ನಡೆಸಿ, 2,900 ಕೆ.ಜಿ. ಸ್ಫೋಟಕ ಸಾಮಗ್ರಿ (ಅಮೋನಿಯಂ ನೈಟ್ರೇಟ್ ಎಂದು ಶಂಕಿಸಲಾಗಿದೆ)ಯನ್ನು ವಶಪಡಿಸಿಕೊಂಡ ನಂತರ ಮತ್ತು ವೈದ್ಯರಾದ ಮುಜಮ್ಮಿಲ್ ಶೇಖ್ ಮತ್ತು ಶಾಹೀನ್ ಸಯೀದ್ ಅವರನ್ನು ಬಂಧಿಸಿದ ನಂತರ ಈ ಸ್ಫೋಟ ಸಂಭವಿಸಿದೆ.
ಈ ವೈದ್ಯರು ಉನ್ನತ ಶಿಕ್ಷಣ ಪಡೆದ ವೃತ್ತಿಪರರನ್ನು ಒಳಗೊಂಡ ಜೈಶ್‌ಉಗ್ರಗಾಮಿ ಸಂಘಟನೆಯ ಹೊಸ ಭಯೋತ್ಪಾದಕ ತಂಡದ ಭಾಗವಾಗಿದ್ದಾರೆಂದು ಶಂಕಿಸಲಾಗಿದೆ. ಸಹಚರರು ಬಂಧಿತರಾದ ನಂತರ ಭಯಗೊಂಡ ಉಮರ್, ಹತಾಶೆಯಿಂದ ಕಾರ್ ಸ್ಫೋಟವನ್ನು ನಡೆಸಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ತನಿಖಾಧಿಕಾರಿಗಳು, ದೆಹಲಿಯಲ್ಲಿ ಬೃಹತ್ ದಾಳಿಗೆ ಸಂಚು ರೂಪಿಸಲಾಗಿತ್ತು ಮತ್ತು ವಶಪಡಿಸಿಕೊಂಡ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಅದನ್ನು ಕಾರ್ಯಗತಗೊಳಿಸಲು ಸಂಗ್ರಹಿಸಲಾಗಿತ್ತು ಎಂದು ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ಹೋಟೆಲ್‌ನಲ್ಲಿ ಅಗ್ನಿ ಅವಘಡ : 21 ಮಂದಿ ಸಾವು ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಧುಮುಕಿದ ಇಬ್ಬರು ಮಹಿಳೆಯರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement