ಗಂಗಾವತಿ : ಭರತನಾಟ್ಯ ಮಾಡುತ್ತಲೇ ಅಂಜನಾದ್ರಿ ಬೆಟ್ಟದ 574 ಮೆಟ್ಟಿಲುಗಳನ್ನು ಏರಿದ ಕಲಾವಿದೆ ; ವೀಡಿಯೊ ವೈರಲ್‌

ಕೊಪ್ಪಳ : ಭರತನಾಟ್ಯ ಕಲಾವಿದೆಯೊಬ್ಬರು ಭರತನಾಟ್ಯ ಮಾಡುತ್ತಲೇ 575 ಮೆಟ್ಟಿಲುಗಳನ್ನು ಏರಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ನಿವಾಸಿಯಾಗಿರುವ ಹರ್ಷಿತಾ ಎಂಬವರು 8 ನಿಮಿಷ 54 ಸೆಕೆಂಡ್​ನಲ್ಲಿ ನೃತ್ಯ ಮಾಡುತ್ತಾ ಅಂಜನಾದ್ರಿ ಬೆಟ್ಟವನ್ನು ಏರಿದ್ದಾರೆೆಂದು ವರದಿಯಾಗಿದೆ.
ಹನುಮ ವ್ರತಾಚರಣೆ ಸಂದರ್ಭದಲ್ಲಿ, ಪಾಲಕರ ಮಾರ್ಗದರ್ಶನದಲ್ಲಿ 574 ಮೆಟ್ಟಿಲುಗಳ ಮೇಲೆ ವಿವಿಧ ಭಂಗಿಯಲ್ಲಿ ನಾಟ್ಯ ನಡೆಸುತ್ತ ಅವರು ಶಿಖರವನ್ನು ತಲುಪಿದ್ದಾರೆ. ಸದ್ಯ ಹರ್ಷಿತಾಳ ಭರತನಾಟ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗುತ್ತಿದೆ.

ಬೆಟ್ಟದ ತುದಿಯ ಆವರಣದಲ್ಲಿ ಭರತನಾಟ್ಯ ಪ್ರದರ್ಶಿಸಿ, ದೇವರ ದರ್ಶನ ಪಡೆದ ಆರ್. ಹರ್ಷಿತಾ ಅವರನ್ನು ನಂತರ ದೇವಸ್ಥಾನದಲ್ಲಿ ಗೌರವಿಸಿಲಾಯಿತು. ಹನುಮಮಾಲಾ ವಿಸರ್ಜನೆ ಹಾಗೂ ಹನುಮ ವ್ರತಾಚರಣೆಯ ಸಂದರ್ಭದಲ್ಲಿ, ಲಕ್ಷಾಂತರ ಭಕ್ತರು ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದರು.
ಹನುಮಮಾಲಾ ವಿಸರ್ಜನೆ ಅಂಗವಾಗಿ ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟಕ್ಕೆ ಲಕ್ಷಾಂತರ ಭಕ್ತಾದಿಗಳು ಆಗಮಿಸಿದ್ದರು. ಇಡೀ ಅಂಜನಾದ್ರಿ ಬೆಟ್ಟವೇ ಕೇಸರಿಮಯವಾಗುವಂತೆ ಮಾಡಿತು.

ಆಂಜನೇಯನ ದರ್ಶನ ಪಡೆಯಲು ಮಂಗಳವಾರ ಮಧ್ಯ ರಾತ್ರಿಯಿಂದಲೇ ಹನುಮ ಮಾಲಾಧಾರಿಗಳು ಬೆಟ್ಟ ಏರಲು ಆರಂಭಿಸಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ಹನುಮಾಲಾಧಾರಿಗಳು ಹನುಮ ಮಾಲೆ ವಿಸರ್ಜನೆ ಮಾಡಿ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ  ದರ್ಶನ ಪಡೆಯುತ್ತಾರೆ.
ಕಳೆದ ಎರಡು ದಿನಗಳಿಂದ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪವಮಾನ ಹೋಮ, ವಿವಿಧ ಹೋಮ ಹವನ, ವಿಶೇಷ ಪೂಜೆಗಳು ನಡೆಯಿತು. ಆಂಜನೇಯ ಸ್ವಾಮಿಗೆ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಯಿತು. ದೇವಾಲಯದ ಒಳಗೂ ಹೊರಗೂ ಹೂಗಳಿಂದ ಅಲಂಕರಿಸಲಾಗಿತ್ತು.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement