62 ವರ್ಷಗಳ ಸುದೀರ್ಘ ಕಾನೂನು ಹೋರಾಟ ನಡೆಸಿ ಗೆದ್ದ 82ರ ವೃದ್ಧ…!

ಚಂಡೀಗಢ: ದೇಶದ ಅತ್ಯಂತ ಸುದೀರ್ಘ ಆಸ್ತಿ ವಿವಾದವೊಂದಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 62 ವರ್ಷಗಳಷ್ಟು ಹಳೆಯದಾದ ಭೂ ವಿವಾದದಲ್ಲಿ ಮೂಲ ಹಂಚಿಕೆದಾರರ ಪರವಾಗಿ ತೀರ್ಪು ನೀಡಿದ ನ್ಯಾಯಾಲಯವು, ಫರಿದಾಬಾದ್‌ನಲ್ಲಿರುವ ನಿವೇಶನವನ್ನು 1963ರಲ್ಲಿ ನಿಗದಿ ಪಡಿಸಲಾದ ಬೆಲೆಗೆ ಮೂಲ ಖರೀದಿದಾರರಿಗೆ ಹಸ್ತಾಂತರಿಸುವಂತೆ ಖಾಸಗಿ ಡೆವಲಪರ್‌ಗೆ ಆದೇಶಿಸಿದೆ.
ಈ ತೀರ್ಪಿನ ಫಲವಾಗಿ, ಮೂಲ ಖರೀದಿದಾರರ ಕಾನೂನು ಉತ್ತರಾಧಿಕಾರಿಗೆ ಪ್ರಸ್ತುತ ₹7 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯು ಅತ್ಯಲ್ಪ ಬೆಲೆಗೆ ಲಭ್ಯವಾಗಲಿದೆ.
80 ವರ್ಷದ ಏಕೈಕ ಉತ್ತರಾಧಿಕಾರಿ
ಈ ತೀರ್ಪಿನ ಫಲಾನುಭವಿ 82 ವರ್ಷವರಾದ ಸಿ.ಕೆ. ಆನಂದ ಎಂಬವರು. ಇವರು ಮೂಲ ಖರೀದಿದಾರರ ಏಕೈಕ ಕಾನೂನು ಉತ್ತರಾಧಿಕಾರಿಯಾಗಿದ್ದಾರೆ. ದಶಕಗಳಿಂದ ತನ್ನ ಒಪ್ಪಂದದ ಬಾಧ್ಯತೆಗಳನ್ನು ವಿಳಂಬ ಮಾಡಿದ ಪಕ್ಷವು ಸರಿಯಾದ ಮಾಲೀಕತ್ವವನ್ನು ನಿರಾಕರಿಸಲು ಭೂ ಬೆಲೆಗಳಲ್ಲಿನ ಏರಿಕೆಯನ್ನು ಸಮರ್ಥನೆಯಾಗಿ ಉಲ್ಲೇಖಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ…?
ಈ ಪ್ರಕರಣವು 1963ರಲ್ಲಿ ಪ್ರಾರಂಭವಾಗುತ್ತದೆ. ಆ ಸಮಯದಲ್ಲಿ ಎಂ/ಎಸ್ ಆರ್.ಸಿ. ಸೂದ್ & ಕಂಪನಿ ಲಿಮಿಟೆಡ್ ಪ್ರಸ್ತುತ ಫರಿದಾಬಾದ್‌ನ ಹೊರವಲಯದಲ್ಲಿರುವ ಸೂರಜಕುಂಡ್ ಬಳಿ ‘ಅರೋಸ್ ಗಾರ್ಡನ್ಸ್’ ಎಂಬ ವಸತಿ ಕಾಲೋನಿಯನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿತ್ತು.
ಆನಂದ ಅವರ ತಾಯಿ ನಂಕಿ ದೇವಿ ಅವರು  1963ರಲ್ಲಿ 14,000 ರೂ.ಗಳಿಗೆ ಫರೀದಾಬಾದ್‌ನಲ್ಲಿ ಆರ್‌ಸಿ ಸೂದ್‌ ಮತ್ತು ಕಂಪನಿಯ ಎರೋಸ್‌ ಗಾರ್ಡನ್ಸ್‌ ರೆಸಿಡೆನ್ಸಿ ಎಂಬುವರಿಂದ 350 ಮತ್ತು 217 ಚದರಡಿಯ 2 ಸೈಟ್‌ಗಳನ್ನು ಖರೀದಿಸಿದ್ದರು. ಇದರ ಅರ್ಧದಷ್ಟು ಹಣವನ್ನು ಸಹ ಪಾವತಿ ಮಾಡಿದ್ದರು. ಆದರೆ ಇದಾದ ಬಳಿಕ ಪಂಜಾಬ್‌ ಮತ್ತು ಹರ್ಯಾಣ ಸರ್ಕಾರಗಳು ತಂದಿದ್ದ ನಿಯಮಗಳಿಂದ ಅಡೆಚಣೆಯಾಗಿ, ಕಂಪನಿಯು ಸೈಟು ವಿತರಿಸುವಲ್ಲಿ ವಿಳಂಬ ಮಾಡಿತ್ತು. ನಿವೇಶನಗಳನ್ನು ಎಂದಿಗೂ ಹಸ್ತಾಂತರಿಸಿರಲಿಲ್ಲ.
ನಿವೇಶನಗಳ ಬುಕಿಂಗ್ ಆದ ನಂತರ, ಪಂಜಾಬ್ ನಿಗದಿತ ರಸ್ತೆಗಳು ಮತ್ತು ನಿಯಂತ್ರಿತ ಪ್ರದೇಶಗಳ ಕಾಯ್ದೆ, 1963, ಜಾರಿಗೆ ಬಂದಿತು. ಇದನ್ನು ಅನುಸರಿಸಿ, 1975 ರಲ್ಲಿ ಹರಿಯಾಣ ನಗರಾಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ ಜಾರಿಯಾಯಿತು. ಡೆವಲಪರ್ ಪದೇ ಪದೇ ಈ ಕಾಯ್ದೆಯ ಅಡೆತಡೆಗಳನ್ನು ಉಲ್ಲೇಖಿಸಿ, ಶಾಸನಬದ್ಧ ಅನುಮೋದನೆ ಪಡೆದ ನಂತರ ನಿವೇಶನಗಳನ್ನು ಹಸ್ತಾಂತರಿಸಲಾಗುವುದು ಎಂದು ಆಶ್ವಾಸನೆ ನೀಡುತ್ತಲೇ ಬಂದಿದ್ದರು.
ಆದರೆ, ದಶಕಗಳು ಮುಗಿದರೂ ಈ ಆಶ್ವಾಸನೆಗಳು ಈಡೇರಲಿಲ್ಲ. ಡೆವಲಪರ್ ಹಣವನ್ನು ಮರಳಿಸಲಿಲ್ಲ, ವರ್ಗಾವಣೆಯನ್ನು ಪೂರ್ಣಗೊಳಿಸಲಿಲ್ಲ. 1980ರ ದಶಕದ ಮಧ್ಯಭಾಗದಲ್ಲಿ, ನಿವೇಶನಗಳನ್ನು ಬೇರೆಯವರಿಗೆ ಮಾರಾಟ ಮಾಡಬಹುದು ಎಂಬ ಆತಂಕ ಹೆಚ್ಚಿದ್ದರಿಂದ, ಕುಟುಂಬವು  ಕೋರ್ಟ್‌ಗೆ ಮೊರೆ ಹೋಗಿತ್ತು.  ಸ್ಥಳೀಯ ಕೋರ್ಟು ಅರ್ಜಿದಾರರ ಪರವಾಗಿ ತೀರ್ಪು ನೀಡಿತ್ತು.
2002ರಲ್ಲಿ ಅಂತಿಮ ಕಾನೂನು ಹೋರಾಟ ಆರಂಭ
ಸ್ಥಳೀಯ ಕೋರ್ಟ್‌  ಪ್ರಶ್ನಿಸಿ ಕಂಪನಿಯು 2002ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಕಾನೂನು ಸಮರದ ನಿರ್ಣಾಯಕ ಹಂತ 2002 ರಲ್ಲಿ ಪ್ರಾರಂಭವಾಯಿತು. ಆನಂದ ಅವರು ಮೂಲ ಒಪ್ಪಂದದ ಜಾರಿಗೆ ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋದರು. ಕೆಳ ನ್ಯಾಯಾಲಯಗಳು ಸತತವಾಗಿ ಆನಂದ್ ಅವರ ಪರವಾಗಿ ತೀರ್ಪು ನೀಡಿದವು. ಈ ತೀರ್ಪುಗಳನ್ನು ಪ್ರಶ್ನಿಸಿ ಡೆವಲಪರ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು.
ನ್ಯಾಯಮೂರ್ತಿ ದೀಪಕ ಗುಪ್ತಾ ಅವರು ತಮ್ಮ 22 ಪುಟಗಳ ವಿವರವಾದ ತೀರ್ಪಿನಲ್ಲಿ, ಡೆವಲಪರ್ ಎತ್ತಿರುವ ಎಲ್ಲಾ ಆಕ್ಷೇಪಣೆಗಳನ್ನು ತಳ್ಳಿಹಾಕಿದರು. “ದೀರ್ಘ ವಿಳಂಬಕ್ಕೆ ಸಂಪೂರ್ಣವಾಗಿ ಡೆವಲಪರ್ ಕಾರಣ, ಮತ್ತು ತನ್ನದೇ ನಿಷ್ಕ್ರಿಯತೆಯಿಂದ ಅವರು ಲಾಭ ಪಡೆಯಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ನ್ಯಾಯಾಲಯವು 1963ರ ಮೂಲ ಒಪ್ಪಂದದ ದರದಲ್ಲಿಯೇ ನಿವೇಶನವನ್ನು ಹಂಚಿಕೆ ಮಾಡಲು ನಿರ್ದೇಶಿಸಿದೆ.

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement