ಪಾಕಿಸ್ತಾನದ 56,000 ಭಿಕ್ಷುಕರನ್ನು ಗಡೀಪಾರು ಮಾಡಿದ ಸೌದಿ ಅರೇಬಿಯಾ…!

ದುಬೈ/ರಿಯಾದ್: ಭಿಕ್ಷಾಟನೆಯ ಆರೋಪದ ಮೇಲೆ  ಸೌದಿ ಅರೇಬಿಯಾ  56,000 ಪಾಕಿಸ್ತಾನಿಗಳನ್ನು ಗಡಿಪಾರು ಮಾಡಿದೆ. ಈ ಬೆಳವಣಿಗೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಗೌರವಕ್ಕೆ ಧಕ್ಕೆಯುಂಟಾಗಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಗಯುಎಇ ಕೂಡ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ನೀಡಲು ಕಠಿಣ ನಿರ್ಬಂಧಗಳನ್ನು ವಿಧಿಸಿದ್ದು, ಪ್ರವಾಸಿಗರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಇದಕ್ಕೆ ಕಾರಣ ಎಂದು ಹೇಳಿದೆ. ವಿದೇಶಗಳಲ್ಲಿ ಸಂಘಟಿತ ಭಿಕ್ಷಾಟನೆ ಮತ್ತು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಪಾಕಿಸ್ತಾನಿ ಪ್ರಜೆಗಳ ವಿರುದ್ಧ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತೀವ್ರ ನಿಗಾ ವಹಿಸಿವೆ.
ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ (FIA) ಪ್ರಕಾರ, 2025 ರಲ್ಲಿ ಭಿಕ್ಷಾಟನೆ ಜಾಲವನ್ನು ಮಟ್ಟಹಾಕಲು ವಿಮಾನ ನಿಲ್ದಾಣಗಳಲ್ಲಿ ಸುಮಾರು 66,154 ಪ್ರಯಾಣಿಕರನ್ನು ತಡೆಹಿಡಿಯಲಾಗಿದೆ.

ಈ ಜಾಲವು ಕೇವಲ ಗಲ್ಫ್ ರಾಷ್ಟ್ರಗಳಿಗೆ ಸೀಮಿತವಾಗಿಲ್ಲ. ಆಫ್ರಿಕಾ, ಯುರೋಪ್, ಕಾಂಬೋಡಿಯಾ ಮತ್ತು ಥೈಲ್ಯಾಂಡ್‌ನಂತಹ ದೇಶಗಳಿಗೂ ಪ್ರವಾಸಿ ವೀಸಾದ ಮೂಲಕ ತೆರಳಿ ಈ ಭಿಕ್ಷಾಟನೆ ದಂಧೆ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ (FIA) ಮಹಾನಿರ್ದೇಶಕ ರಿಫತ್ ಮುಖ್ತಾರ್ ತಿಳಿಸಿದ್ದಾರೆ.
ಭಿಕ್ಷಾಟನೆಯ ಆರೋಪದ ಮೇಲೆ ದುಬೈ 6,000 ಮತ್ತು ಅಜೆರ್ಬೈಜಾನ್ ಸುಮಾರು 2,500 ಪಾಕಿಸ್ತಾನಿಗಳನ್ನು ವಾಪಸ್ ಕಳುಹಿಸಿವೆ. ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಭಿಕ್ಷಾಟನೆಗೆ ಬಂಧಿತರಾದವರಲ್ಲಿ ಶೇ. 90 ರಷ್ಟು ಮಂದಿ ಪಾಕಿಸ್ತಾನದವರೇ ಆಗಿದ್ದಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಎಚ್ಚರಿಕೆ ನೀಡಿದ್ದ ಸೌದಿ ಸರ್ಕಾರ:
ಕಳೆದ ವರ್ಷವೇ ಸೌದಿ ಅರೇಬಿಯಾ ಸರ್ಕಾರವು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು. ಉಮ್ರಾ ವೀಸಾಗಳನ್ನು ಬಳಸಿಕೊಂಡು ಮೆಕ್ಕಾ ಮತ್ತು ಮದೀನಾದಲ್ಲಿ ಭಿಕ್ಷಾಟನೆ ಮಾಡುವುದನ್ನು ತಡೆಯದಿದ್ದರೆ, ಮುಂದಿನ ದಿನಗಳಲ್ಲಿ ಹಜ್ ಮತ್ತು ಉಮ್ರಾ ಯಾತ್ರಿಕರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ರಿಯಾದ್ ತಿಳಿಸಿತ್ತು.
ಇದು ಬಡತನವಲ್ಲ, ಒಂದು ‘ಉದ್ಯಮ’:
ಕಾನೂನು ತಜ್ಞರ ಪ್ರಕಾರ, ಪಾಕಿಸ್ತಾನದಲ್ಲಿ ಭಿಕ್ಷಾಟನೆಯು ಈಗ ಕೇವಲ ಅಸಹಾಯಕತೆಯಲ್ಲ, ಬದಲಿಗೆ ಅದೊಂದು ವ್ಯವಸ್ಥಿತ “ಉದ್ಯಮ” (Organised Industry) ಆಗಿ ಮಾರ್ಪಟ್ಟಿದೆ. ದೇಶದ ಒಳಗಡೆ ಯಶಸ್ವಿಯಾದ ಈ ದಂಧೆಯನ್ನು ಈಗ ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement