ಐಪಿಎಲ್‌ ನಿಂದ ಮುಸ್ತಫಿಜುರ್ ರೆಹಮಾನ್ ಕೈಬಿಟ್ಟ ನಂತ್ರ ಐಪಿಎಲ್ ಪ್ರಸಾರ ನಿಷೇಧಿಸಿದ ಬಾಂಗ್ಲಾದೇಶ ಸರ್ಕಾರ

ಢಾಕಾ: ಕ್ರಿಕೆಟ್ ಜಗತ್ತಿನ ಬೆಳವಣಿಗೆಯೊಂದರಲ್ಲಿ, ಬಾಂಗ್ಲಾದೇಶ ಸರ್ಕಾರವು ತನ್ನ ದೇಶದಾದ್ಯಂತ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನೇರ ಪ್ರಸಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ. 2026ರ ಐಪಿಎಲ್ ಆವೃತ್ತಿಗೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಿಂದ ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ಕೈಬಿಡುವಂತೆ ಬಿಸಿಸಿಐ ಸೂಚಿಸಿದ ಬೆನ್ನಲ್ಲೇ ಈ ರಾಜತಾಂತ್ರಿಕ ಮತ್ತು ಕ್ರೀಡಾ ಸಮರ ಆರಂಭವಾಗಿದೆ.
ಕೆಕೆಆರ್ ತಂಡದ ಪ್ರಮುಖ ಆಟಗಾರನಾಗಿದ್ದ ಮುಸ್ತಫಿಜುರ್ ಅವರನ್ನು ಯಾವುದೇ ಸ್ಪಷ್ಟ ಅಥವಾ ತರ್ಕಬದ್ಧ ಕಾರಣ ನೀಡದೆ ತಂಡದಿಂದ ಹೊರಗಿಟ್ಟಿರುವುದು ಬಾಂಗ್ಲಾದೇಶದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬಾಂಗ್ಲಾದೇಶ ಸರ್ಕಾರವು “ಮಾರ್ಚ್ 26, 2026 ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯಿಂದ ಬಾಂಗ್ಲಾದೇಶದ ಸ್ಟಾರ್ ಆಟಗಾರ ಮುಸ್ತಫಿಜುರ್ ರೆಹಮಾನ್ ಅವರನ್ನು ಹೊರಗಿಡುವಂತೆ ಬಿಸಿಸಿಐ ನೀಡಿರುವ ನಿರ್ದೇಶನವು ಬೆಳಕಿಗೆ ಬಂದಿದೆ. ಈ ನಿರ್ಧಾರಕ್ಕೆ ಯಾವುದೇ ಸರಿಯಾದ ಕಾರಣ ತಿಳಿದಿಲ್ಲ. ಭಾರತೀಯ ಕ್ರಿಕೆಟ್ ಮಂಡಳಿಯ ಈ ಕ್ರಮವು ಬಾಂಗ್ಲಾದೇಶದ ಜನತೆಗೆ ನೋವು ಮತ್ತು ಆಘಾತ ತಂದಿದೆ,” ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ, ಮುಂದಿನ ಆದೇಶದವರೆಗೆ ಐಪಿಎಲ್‌ನ ಎಲ್ಲಾ ಪಂದ್ಯಗಳು ಮತ್ತು ಕಾರ್ಯಕ್ರಮಗಳ ಪ್ರಸಾರವನ್ನು ನಿಲ್ಲಿಸುವಂತೆ ಸರ್ಕಾರ ಆದೇಶಿಸಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಹಾಡಹಗಲೇ ಶಸ್ತ್ರಸಜ್ಜಿತರಿಂದ ಚಿನ್ನಾಭರಣ ಅಂಗಡಿ ದರೋಡೆ ; ಚಿನ್ನ-ನಗದು ಲೂಟಿ, ಹಲವು ಸುತ್ತು ಗುಂಡು ಹಾರಿಸಿ ಪರಾರಿ...!

ಟಿ20 ವಿಶ್ವಕಪ್ ಮೇಲೂ ಕರಿನೆರಳು: ಭಾರತಕ್ಕೆ ಬರಲು ಬಾಂಗ್ಲಾ ನಿರಾಕರಣೆ
ಈ ವಿವಾದದ ನಂತರ 2026ರ ಫೆಬ್ರವರಿ 7 ರಿಂದ ಭಾರತದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಭಾಗವಹಿಸಲು ತನ್ನ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಜನವರಿ 4, 2026 ರಂದು ಐಸಿಸಿಗೆ ತಿಳಿಸಿದೆ.
ಮುಂಬೈ ಮತ್ತು ಕೋಲ್ಕತ್ತಾದಲ್ಲಿ ನಿಗದಿಯಾಗಿದ್ದ ತನ್ನ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಿಸಿಬಿಯು ಐಸಿಸಿಯನ್ನು ಕೋರಿದೆ. ಭದ್ರತೆಯ ಆತಂಕದ ಕಾರಣವನ್ನು ಮುಂದಿಟ್ಟಿದೆ.
ಈ ಬೆಳವಣಿಗೆಯು ಭಾರತ ಮತ್ತು ಬಾಂಗ್ಲಾದೇಶದ ನಡುವೆ ‘ಪಾಕಿಸ್ತಾನ ಮಾದರಿಯ’ ಕ್ರೀಡಾ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಸರಣಿಗಳು ರದ್ದಾಗುವ ಭೀತಿ ಎದುರಾಗಿದೆ.

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement