77ನೇ ಗಣರಾಜ್ಯೋತ್ಸವದ ಸಂಭ್ರಮದ ನಡುವೆ ಮನಗೆದ್ದ ಶ್ವಾನದ ದೇಶಪ್ರೇಮ : ವೀಡಿಯೊ ವೈರಲ್

ನವದೆಹಲಿ: ಭಾರತವು ಸೋಮವಾರ ತನ್ನ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಿದೆ. ಈ ಸಂಭ್ರಮದ ನಡುವೆಯೇ, ಶ್ವಾನವೊಂದರ ಅಪೂರ್ವ ದೇಶಭಕ್ತಿಯ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಕೋಟ್ಯಂತರ ಭಾರತೀಯರ ಮನಗೆದ್ದಿದೆ.
ಸುಮಾರು 25 ಸೆಕೆಂಡುಗಳ ಈ ವೀಡಿಯೊದಲ್ಲಿ, ನಿಷ್ಠಾವಂತ ಲ್ಯಾಬ್ರಡಾರ್ ಶ್ವಾನವೊಂದು ಸಾಲಾಗಿ ಇಟ್ಟಿರುವ ವಿವಿಧ ದೇಶಗಳ ನಕ್ಷೆಗಳ ಮಧ್ಯೆ ನಡೆದುಕೊಂಡು ಹೋಗುತ್ತದೆ. ಅಲ್ಲಿ ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಜರ್ಮನಿಯಂತಹ ದೇಶಗಳ ನಕ್ಷೆಗಳಿದ್ದರೂ, ಆ ಶ್ವಾನವು ಅವೆಲ್ಲವನ್ನೂ ದಾಟಿ ಹೋಗಿ, ಹೆಮ್ಮೆಯಿಂದ ಭಾರತದ ನಕ್ಷೆಯ ಪಕ್ಕದಲ್ಲಿ ಕುಳಿತುಕೊಳ್ಳುತ್ತದೆ. ನಂತರ ಸೆಲ್ಯೂಟ್‌ ಮಾಡುತ್ತದೆ.

ಇದನ್ನು ಕಂಡು ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ.ಈ ಹೃದಯಸ್ಪರ್ಶಿ ವಿಡಿಯೋ ಈಗಾಗಲೇ 4.3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವೀಡಿಯೊ ನೋಡಿದ ನೆಟ್ಟಿಗರು ಭಾವನಾತ್ಮಕ ಕಾಮೆಂಟ್‌ಗಳ ಮೂಲಕ ತಮ್ಮ ಸಂತಸ ಹಂಚಿಕೊಳ್ಳುತ್ತಿದ್ದಾರೆ. “ಇದನ್ನು ನೋಡುವಾಗ ಮೈ ರೋಮಾಂಚನಗೊಳ್ಳುತ್ತದೆ” ಎಂದು ಒಬ್ಬರು ಬರೆದರೆ, “ಸೇನೆಯ ಶ್ವಾನಗಳು ಸೈನಿಕರಷ್ಟೇ ಪ್ರತಿಭಾವಂತ ಮತ್ತು ನಿಷ್ಠಾವಂತ” ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ.

77ನೇ ಗಣರಾಜ್ಯೋತ್ಸವ: ಕರ್ತವ್ಯ ಪಥದಲ್ಲಿ ಸಾಹಸ ಪ್ರದರ್ಶನ
ಒಂದೆಡೆ ಶ್ವಾನದ ವಿಡಿಯೋ ವೈರಲ್ ಆಗುತ್ತಿದ್ದರೆ, ಇನ್ನೊಂದೆಡೆ ದೆಹಲಿಯ ಕರ್ತವ್ಯ ಪಥದಲ್ಲಿ ಭಾರತದ ಸೇನಾ ಸಾಮರ್ಥ್ಯದ ಭವ್ಯ ಪ್ರದರ್ಶನ ನಡೆಯಿತು. ಈ ಬಾರಿಯ ಪರೇಡ್‌ನಲ್ಲಿ ಭಾರತೀಯ ವಾಯುಪಡೆಯ ‘ಆಪರೇಷನ್ ಸಿಂಧೂರ್’ ಸಾಹಸ ಗಾಥೆಯು ಪ್ರಮುಖ ಆಕರ್ಷಣೆಯಾಗಿತ್ತು. ರಾಫೇಲ್ ಮತ್ತು ಸುಖೋಯ್ ಯುದ್ಧ ವಿಮಾನಗಳ ಗರ್ಜನೆ ಮುಗಿಲು ಮುಟ್ಟಿತ್ತು. ‘ವಂದೇ ಮಾತರಂ’ ಗೀತೆಯ 150ನೇ ವರ್ಷದ ಸ್ಮರಣಾರ್ಥವಾಗಿ 30ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಿದವು. ಸಂಪೂರ್ಣ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನದ ಪ್ರದರ್ಶನವು ಭಾರತದ ಪ್ರಗತಿಯನ್ನು ಜಗತ್ತಿಗೆ ಸಾರಿತು.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement