
ಕಾರವಾರ: ಶಿವರಾತ್ರಿ ಹಿನ್ನೆಲೆಯಲ್ಲಿ ಸಮುದ್ರ ಸ್ನಾನಕ್ಕೆ ಇಳಿದ ಬಾಲಕನೊಬ್ಬ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ.
ಗಾಂವಗೇರಿಯ ಯಶ್ (17) ಎಂಬಾತ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಬಾಲಕನಾಗಿದ್ದಾನೆ. ಶಿವರಾತ್ರಿ ಹಿನ್ನೆಲೆಯನ್ನು ಮಾಜಾಳಿ ಸಮುದ್ರಕ್ಕೆ ರಾಮನಾಥ ಪರಿವಾರ ದೇವರು ಸೇರುದಂತೆ ಸುತ್ತಮುತ್ತಲಿನ ದೇವರನ್ನು ಪಲ್ಲಕ್ಕಿಯಲ್ಲಿ ತಂದು ಸಮುದ್ರ ಸ್ನಾನ ಮಾಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಜನ ಸಮುದ್ರಕ್ಕೆ ಸ್ನಾನಕ್ಕೆಂದು ಆಗಮಿಸುತ್ತಾರೆ. ಈ ವೇಳೆ ಸ್ನಾನಕ್ಕಾಗಿ ಸಮುದ್ರಕ್ಕೆ ಇಳಿದ ಬಾಲ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಸ್ಥಳೀಯರು ರಕ್ಷಣೆ ಮಾಡಲು ಪ್ರಯತ್ನ ಪಟ್ಟರೂ ಸಮುದ್ರದ ದಡಕ್ಕೆ ತರುವ ವೇಳೆ ಯಶ್ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಘಟನೆ ಬಂಧ ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ