ಟೆಲ್ ಅವಿವ್: ಇಸ್ರೇಲ್ ಪ್ರಕಾರ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ಕಮಾಂಡರ್ ಮೊಹಮ್ಮದ್ ಪಕ್ಪೋರ್ ಶನಿವಾರ ವೈಮಾನಿಕ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಇರಾನ್ನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದ ಪಕ್ಪೋರ್ 260 ದಿನಗಳ ಕಾಲ ಐಆರ್ಜಿಸಿ ಕಮಾಂಡರ್ ಆಗಿದ್ದರು ಮತ್ತು ಈ ಹಿಂದೆ ಇಸ್ರೇಲ್ ನಡೆಸಿದ್ದ ದಾಳಿಯಲ್ಲಿ ಕಮಾಂಡರ್ ಹುಸೇನ್ ಸಲಾಮಿ ಹತರಾದ ನಂತರ ಇವರನ್ನು ಆ ಸ್ಥಾನಕ್ಕೆ ನೇಮಿಸಲಾಗಿತ್ತು.
ಮೊಹಮ್ಮದ್ ಪಕ್ಪೋರ್ ಕಳೆದ ತಿಂಗಳು ಇಸ್ರೇಲ್ ಮತ್ತು ಅಮೆರಿಕಕ್ಕೆ ಎಚ್ಚರಿಕೆ ನೀಡಿ, “ಯಾವುದೇ ತಪ್ಪು ಲೆಕ್ಕಾಚಾರ ಮಾಡಬೇಡಿ” ಎಂದು ಹೇಳಿದ್ದರು. ಇಸ್ಲಾಮಿಕ್ ಗಣರಾಜ್ಯವು ಹಿಂದೆಂದಿಗಿಂತಲೂ ಹೆಚ್ಚು ಸನ್ನದ್ಧವಾಗಿದೆ ಮತ್ತು ತನ್ನ “ಟ್ರಿಗ್ಗರ್(trigger) ಒತ್ತುವುದು ಮಾತ್ರ ಇದೆ” ಎಂದು ಅವರು ಗುಡುಗಿದ್ದರು.
2025 ರಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಪಕ್ಪೋರ್ ಅವರನ್ನು ಮೇಜರ್ ಜನರಲ್ ಹುದ್ದೆಗೆ ಬಡ್ತಿ ನೀಡಿದರು ಮತ್ತು “ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಸಾಮರ್ಥ್ಯಗಳು, ಸಿದ್ಧತೆ ಮತ್ತು ಆಂತರಿಕ ಒಗ್ಗಟ್ಟನ್ನು ಹೆಚ್ಚಿಸಲು” ನಿರ್ದೇಶಿಸಲಾಯಿತು ಎಂಬುದನ್ನು ಗಮನಿಸಬೇಕು.


ನಿಮ್ಮ ಕಾಮೆಂಟ್ ಬರೆಯಿರಿ