ವೀಡಿಯೊ..| ಇರಾನ್‌ ಸರ್ವೋಚ್ಚ ನಾಯಕ ಖಮೇನಿ ಕೊಂದ ನಿಖರ ದಾಳಿ ದೃಶ್ಯ ಬಿಡುಗಡೆ ಮಾಡಿದ ಇಸ್ರೇಲ್

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಇಸ್ರೇಲಿ ರಕ್ಷಣಾ ಪಡೆಗಳು (IDF) ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವಿಗೀಡಾಗಿದ್ದಾರೆ. ಖಮೇನಿಯವರ ಪ್ರಧಾನ ಕಚೇರಿಯ ಮೇಲೆ ನಡೆಸಿದ ಭೀಕರ ಬಾಂಬ್ ದಾಳಿಯ ದೃಶ್ಯಗಳನ್ನು ಇಸ್ರೇಲ್‌ ಬಿಡುಗಡೆ ಮಾಡಿದೆ.
‘ಆಪರೇಷನ್ ರೋರಿಂಗ್ ಲಯನ್’ (Operation Roaring Lion)
ಇಸ್ರೇಲ್ ಈ ಕಾರ್ಯಾಚರಣೆಗೆ ‘ರೋರಿಂಗ್ ಲಯನ್’ ಎಂದು ಹೆಸರಿಟ್ಟಿದೆ. ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ವೀಡಿಯೊ ಹಂಚಿಕೊಂಡಿರುವ ಐಡಿಎಫ್, ತೆಹ್ರಾನ್‌ನ ಹೃದಯಭಾಗದಲ್ಲಿರುವ ಇರಾನಿನ ಆಡಳಿತ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ಮಾಡಿರುವುದಾಗಿ ಖಚಿತಪಡಿಸಿದೆ. ಈ ದಾಳಿಯಲ್ಲಿ ಖಮೇನಿ ಹತರಾಗಿದ್ದಾರೆ ಎಂದು ಹೇಳಲಾಗಿದೆ.

ಪ್ರತೀಕಾರಕ್ಕೆ ಮುಂದಾದ ಇರಾನ್: ಕೊಲ್ಲಿ ರಾಷ್ಟ್ರಗಳಲ್ಲಿ ಆತಂಕ
ಖಮೇನಿಯವರ ಸಾವಿನ ಸುದ್ದಿಯ ಬೆನ್ನಲ್ಲೇ ಇರಾನ್ ಕೆರಳಿದ್ದು, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಬಹಿರಂಗ ಯುದ್ಧ ಘೋಷಿಸಿದೆ. ಪ್ರತಿದಾಳಿಯಲ್ಲಿ ಕತಾರ್, ಕುವೈತ್, ಸೌದಿ ಅರೇಬಿಯಾ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದೆ.ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿ ಮತ್ತು ದುಬೈನಂತಹ ಆರ್ಥಿಕ ಕೇಂದ್ರಗಳನ್ನೂ ಇರಾನ್ ಗುರಿಯಾಗಿಸಿಕೊಂಡಿದೆ.
“ಇದು ವಿಶ್ವದಾದ್ಯಂತ ಇರುವ ಶಿಯಾ ಮುಸ್ಲಿಮರ ವಿರುದ್ಧ ಸಾರಿದ ಯುದ್ಧ,” ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಆಕ್ರೋಶ ಹೊರಹಾಕಿದ್ದಾರೆ.

ಡೊನಾಲ್ಡ್ ಟ್ರಂಪ್ ಮತ್ತು ನೆತನ್ಯಾಹು ಎಚ್ಚರಿಕೆ
ಇರಾನ್‌ನ ದಾಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಇರಾನ್ ಪ್ರತೀಕಾರಕ್ಕೆ ಮುಂದಾದರೆ, ಅಮೆರಿಕ ಹಿಂದೆಂದೂ ಕಂಡಿರದಂತಹ ಬಲದೊಂದಿಗೆ ತಿರುಗೇಟು ನೀಡಲಿದೆ” ಎಂದು ಎಚ್ಚರಿಸಿದ್ದಾರೆ. ಇತ್ತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ ಜನತೆ ತಮ್ಮ ಆಡಳಿತದ ವಿರುದ್ಧ ದಬಾಯಿಸಿ ಅಧಿಕಾರವನ್ನು ಕೈಗೆತ್ತಿಕೊಳ್ಳುವಂತೆ ಕರೆ ನೀಡಿದ್ದಾರೆ.
ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಎಲ್ಲಾ ರಾಷ್ಟ್ರಗಳು ಸಂಯಮ ವಹಿಸಬೇಕು ಮತ್ತು ರಾಜತಾಂತ್ರಿಕ ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.

ಪ್ರಮುಖ ಸುದ್ದಿ :-   ಇರಾನ್‌ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಇರಾನ್‌ನಲ್ಲಿ ಇಲ್ವಂತೆ?; ಇಸ್ರೇಲಿ ಮೂಲ ಉಲ್ಲೇಖಿಸಿ ಸೌದಿ ಮಾಧ್ಯಮದ ವರದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement