50 ವರ್ಷಗಳ ಬಳಿಕ ಅಮೆರಿಕದಲ್ಲಿ ಮೊದಲ ಬೃಹತ್ ತೈಲ ಸಂಸ್ಕರಣಾ ಘಟಕ : ಭಾರತದ ರಿಲಯನ್ಸ್ ಜೊತೆ $300 ಬಿಲಿಯನ್ ಮೆಗಾ ಒಪ್ಪಂದ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹೂಡಿಕೆಯ ನೆರವಿನೊಂದಿಗೆ, ಅಮೆರಿಕವು ಕಳೆದ 50 ವರ್ಷಗಳಲ್ಲಿ ತನ್ನ ಮೊದಲ ಹೊಸ ತೈಲ ಸಂಸ್ಕರಣಾಗಾರವನ್ನು (Oil Refinery) ಹೊಂದಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ.
ಈ ಕುರಿತು ಮಂಗಳವಾರ ‘ಟ್ರೂತ್ ಸೋಶಿಯಲ್’ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಟೆಕ್ಸಾಸ್‌ನ ಬ್ರೌನ್ಸ್‌ವಿಲ್ಲೆಯಲ್ಲಿ ‘ಅಮೆರಿಕಾ ಫಸ್ಟ್ ರಿಫೈನಿಂಗ್’ ಸಂಸ್ಥೆಯು ಅಮೆರಿಕದ 50 ವರ್ಷಗಳ ಇತಿಹಾಸದಲ್ಲೇ ಮೊದಲ ಹೊಸ ತೈಲ ಸಂಸ್ಕರಣಾಗಾರವನ್ನು ತೆರೆಯುತ್ತಿದೆ ಎಂದು ಪ್ರಕಟಿಸಲು ನಾನು ಹೆಮ್ಮೆಪಡುತ್ತೇನೆ,” ಎಂದು ಹೇಳಿದ್ದಾರೆ. ಇದು ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ($300 ಬಿಲಿಯನ್) ತೈಲ ಒಪ್ಪಂದ ಎಂದು ಟ್ರಂಪ್ ಬಣ್ಣಿಸಿದ್ದಾರೆ.

ಹಿನ್ನೆಲೆ ಮತ್ತು ಹೂಡಿಕೆ
ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಏರುತ್ತಿರುವ ಇಂಧನ ಬೆಲೆಗಳ ಬಗ್ಗೆ ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ. ತೈಲ ಬೆಲೆ ತಗ್ಗಿಸಲು ತುರ್ತು ಮೀಸಲು ದಾಸ್ತಾನನ್ನು ಬಿಡುಗಡೆ ಮಾಡುವುದು ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಟ್ಯಾಂಕರ್‌ಗಳಿಗೆ ಮಿಲಿಟರಿ ರಕ್ಷಣೆ ನೀಡುವ ಆಯ್ಕೆಗಳನ್ನು ಟ್ರಂಪ್ ಪರಿಶೀಲಿಸುತ್ತಿದ್ದಾರೆ.
ಕಂಪನಿಯು ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಹೊಸ ಸಂಸ್ಕರಣಾಗಾರಕ್ಕೆ ಚಾಲನೆ ನೀಡಲು ಯೋಜಿಸಿದೆ ಮತ್ತು ಅದು ಉತ್ಪಾದಿಸುವ ಇಂಧನಗಳನ್ನು ಮಾರಾಟ ಮಾಡಲು ಈಗಾಗಲೇ 20 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಅಮೆರಿಕ ಫಸ್ಟ್ ರಿಫೈನಿಂಗ್‌ನ ಮಂಗಳವಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನು ಟೆಕ್ಸಾಸ್‌ನ ಬ್ರೌನ್ಸ್‌ವಿಲ್ಲೆಯಲ್ಲಿ ತೈಲ ಸಂಸ್ಕರಣಾಗಾರವನ್ನುನಿರ್ಮಣ ಮಾಲಾಗುತ್ತಿದ್ದು,ಇದು ದಿನಕ್ಕೆ ಸುಮಾರು 1,60,000 ಬ್ಯಾರೆಲ್ ತೈಲ ಸಂಸ್ಕರಣೆ ಮಾಡಲಿದೆ. ಸಂಸ್ಕರಣಾಗಾರವು ಉತ್ಪಾದಿಸುವ ಇಂಧನವನ್ನು ಖರೀದಿಸಲು ರಿಲಯನ್ಸ್ ಸಂಸ್ಥೆಯು 20 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಸಂಸ್ಕರಣಾಗಾರವು ಸಂಪೂರ್ಣವಾಗಿ ಅಮೆರಿಕದ ‘ಶೇಲ್ ಆಯಿಲ್’ (Shale Oil) ಬಳಸಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಯೋಜನೆಯ ವಿವರ
ಈ ಹಿಂದೆ ‘ಎಲಿಮೆಂಟ್ ಫ್ಯುಯೆಲ್ಸ್’ ಎಂಬ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದ ಯೋಜನೆಯೇ ಈಗ ‘ಅಮೆರಿಕಾ ಫಸ್ಟ್ ರಿಫೈನಿಂಗ್’ ಆಗಿ ಬದಲಾಗಿದೆ. ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಾಮಗಾರಿ ಆರಂಭವಾಗಲಿದ್ದು, ಈಗಾಗಲೇ ಅಗತ್ಯ ಪರವಾನಗಿಗಳನ್ನು ಪಡೆಯಲಾಗಿದೆ.
ಅಮೆರಿಕವು ಇಂಧನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದರೂ, ಅಲ್ಲಿನ ಸಂಸ್ಕರಣಾಗಾರಗಳು ಹಳೆಯದಾಗಿವೆ. ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಘಟಕಗಳು ಮುಚ್ಚಲ್ಪಟ್ಟಿದ್ದರಿಂದ ಸಂಸ್ಕರಣಾ ಸಾಮರ್ಥ್ಯ ಕುಸಿದಿದೆ. ಈ ಹೊಸ ಯೋಜನೆಯು ಅಮೆರಿಕದ “ಇಂಧನ ಪ್ರಾಬಲ್ಯ” (Energy Dominance) ನೀತಿಗೆ ಪೂರಕವಾಗಲಿದೆ ಎಂದು ಭಾವಿಸಲಾಗಿದೆ.
ಹಿಂದೆ ಇಂತಹ ಬೃಹತ್ ಯೋಜನೆಗಳು ಅತಿಯಾದ ವೆಚ್ಚ, ಪರಿಸರ ಕಾಳಜಿ ಮತ್ತು ಪರವಾನಗಿ ಸಮಸ್ಯೆಗಳಿಂದಾಗಿ ವಿಫಲವಾಗಿದ್ದವು. ಆದರೆ ಈಗಿನ ಹೊಸ ಹೂಡಿಕೆಯು ಈ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡುವ ನಿರೀಕ್ಷೆಯಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement